ಉತ್ತರ ಕರ್ನಾಟಕ ಕಟ್ಟುವುದು ಶತ ಸಿದ್ಧ : ಉಮೇಶ್ ಕತ್ತಿ ರಾಜ್ಯ ವಿಭಜನೆಯ ಮಾತು

1 min read
Umesh Katthi

ಉತ್ತರ ಕರ್ನಾಟಕ ಕಟ್ಟುವುದು ಶತ ಸಿದ್ಧ : ಉಮೇಶ್ ಕತ್ತಿ ರಾಜ್ಯ ವಿಭಜನೆಯ ಮಾತು

ಧಾರವಾಡ : ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೇ ಸುಮ್ಮನೇ ಇರಲ್ಲ. ಈ ಭಾಗದ ಜನರ ಸಹಕಾರದಿಂದ ಉತ್ತರ ಕರ್ನಾಟಕ ಪ್ರತ್ಯೇಕ ಕಟ್ಟುವುದು ಶತ ಸಿದ್ಧ ಎಂದು ಸಚಿವ ಉಮೇಶ್ ಕತ್ತಿ ಮತ್ತೆ ರಾಜ್ಯ ವಿಭಜನೆಯ ಮಾತುಗಳನ್ನಾಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾನತಾಡಿದ ಉಮೇಶ್ ಕತ್ತಿ, ಮುಖ್ಯಮಂತ್ರಿ ವಿಚಾರವಾಗಿ ಮಾತನಾಡಿದರು. ಅಲ್ಲದೆ ಮುಂದೆ ಉತ್ತರ ಕರ್ನಾಟಕದವರೇ ಸಿಎಂ ಆಗಬಹುದು ಎಂದು ಭವಿಷ್ಯ ನುಡಿದರು.

ಕರ್ನಾಟಕ ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ, ಮುಂದೆ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಬಹುದು. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ, ಸುಮ್ಮನಿರಲ್ಲ. ಈ ಭಾಗದ ಜನರ ಸಹಕಾರದಿಂದ ಉತ್ತರ ಕರ್ನಾಟಕ ಪ್ರತ್ಯೇಕ ಕಟ್ಟುವುದು ಶತ ಸಿದ್ಧ ಎಂದು ತಿಳಿಸಿದರು.

Umesh Katthi

ಇದೇ ವೇಳೆ ಸಿಎಂ ಆಗುವ ತಮ್ಮ ಮನದ ಇಂಗಿತವನ್ನು ಕೂಡ ವ್ಯಕ್ತಪಡಿಸಿ, ನಾನು ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆರು ಇಲಾಖೆಗಳಲ್ಲಿ ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ. ಯಾವುದೇ ಕಪ್ಪು ಚುಕ್ಕೆ ಇಲ್ಲ. ಭ್ರಷ್ಟಾಚಾರ ಮಾಡಿಲ್ಲ. ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ,” ಎಂದರು.

ಅಲ್ಲದೆ ಮುಂದಿನ ಮುಖ್ಯಮಂತ್ರಿ ಬೆಲ್ಲದ್, ನಿರಾಣಿ ಅಥವಾ ನಾನೇ ಆಗಬಹುದು. ಶಾಸಕ, ಸಚಿವ, ಮುಖ್ಯಮಂತ್ರಿ ಬಳಿಕ ಪ್ರಧಾನಿ ಆಗುವ ಆಸೆಯೂ ಇದೆ ಎಂದು ಉಮೇಶ್ ಕತ್ತಿ ಹೇಳಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd