Umesh Katthi | ಅನ್ನಭಾಗ್ಯ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ
ವಿಜಯಪುರ : ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ಬಯಸಿದ್ರೆ ಅನ್ನಭಾಗ್ಯ ಯೋಜನೆ ಬಂದ್ ಮಾಡ್ತಿವಿ ಅಂತ ನಾನು ಹೇಳಿಲ್ಲ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಉಮೇಶ್ ಕತ್ತಿ, ಅನ್ನಭಾಗ್ಯ ಯೋಜನೆ ಬಂದ್ ಮಾಡಿ ಎಂದು ಸುಪ್ರೀಂ ಕೋರ್ಟ್ ಯಾಕೆ ಬಯಸುತ್ತೆ ಹೇಳಿ ? ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ಬಯಸಿದ್ರೆ ಅನ್ನಭಾಗ್ಯ ಯೋಜನೆ ಬಂದ್ ಮಾಡ್ತಿವಿ ಅಂತ ನಾನು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಐದು ಕೆಜಿ ಅಕ್ಕಿ ಕೊಡಬೇಕು ಅಂತಿದೆ. ನಮ್ಮ ರಾಜ್ಯದಲ್ಲಿ ಅಕ್ಕಿ ಜೊತೆಗೆ ಜೋಳ, ರಾಗಿ ಕೊಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ನಾನು ಆ ರೀತಿ ಎಲ್ಲಿಯೂ ಹೇಳಿಲ್ಲ. ಅನ್ನಭಾಗ್ಯ ಯೋಜನೆ ಯಾಕೆ ಬಂದ್ ಮಾಡ್ತಾರೆ. ಅದು ನನ್ನ ಹೇಳಿಕೆಯಲ್ಲ-ಇದು ರಾಜಕೀಯ.
ಆಹಾರ ಭದ್ರತಾ ಯೋಜನೆಯಡಿ ಐದು ಕೆಜಿ ಅಕ್ಕಿ ಕೊಡಬೇಕು ಅಂತ ನಾವು ಮಾಡಿದ್ದು. ಕಾನೂನು ನಮ್ಮ ಹಿಂದಿನ ಸರಕಾರ ಮಾಡಿದ್ದು, ಈ ಕಾನೂನು ಇದೆಯೋ ಇಲ್ವೋ.
ನಾನು ಮುಖ್ಯಮಂತ್ರಿಯಾದ್ರೆ ಹತ್ತು ಕೆಜಿ ಅಕ್ಕಿ ಕೊಡ್ತೀನಿ ಎಂದು ಸಿದ್ದರಾಮಯ್ಯ ಹೊರಳಾಡುತ್ತಾನೆ.
ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಹತ್ತು ಕೆಜಿ ಅಕ್ಕಿ ಕೊಟ್ಟಿಲ್ಲ. ನಾಲ್ಕು, ಐದು, ಏಳು ಕೆಜಿ ಅಕ್ಕಿ ಕೊಟ್ಟಿದ್ದಾರೆ.
ನಾವು ಮಾತ್ರ ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ವಿರುದ್ಧ ಉಮೇಶ್ ಕತ್ತಿ ಹೇಳಿದ್ದಾರೆ.







