93 ಕೋಟಿ ಟನ್ ಆಹಾರ ವ್ಯರ್ಥ.. ನಮ್ಮ ಪಾಲು ಎಷ್ಟು ಗೊತ್ತಾ?

1 min read
food

93 ಕೋಟಿ ಟನ್ ಆಹಾರ ವ್ಯರ್ಥ.. ನಮ್ಮ ಪಾಲು ಎಷ್ಟು ಗೊತ್ತಾ?

ವಿಶ್ವಸಂಸ್ಥೆ : 2019 ರಲ್ಲಿ ವಿಶ್ವದಾದ್ಯಂತ 931 ದಶಲಕ್ಷ ಟನ್ ಆಹಾರ ವ್ಯರ್ಥವಾಗಿದೆ.ಇದರಲ್ಲಿ ಭಾರತದ ಪಾಲು 68.7 ಮಿಲಿಯನ್ ಟನ್. ಈ ವಿಷಯ ವಿಶ್ವಸಂಸ್ಥೆಯ ಯುಎನ್‍ಇಪಿ ಫುಡ್ ವೇಸ್ಟ್ ಇಂಡಕ್ಸ್ ವರದಿ – 2021 ರಲ್ಲಿ ಬಹಿರಂಗವಾಗಿದೆ.
2019 ರಲ್ಲಿ ವ್ಯರ್ಥವಾದ ಆಹಾರದಲ್ಲಿ ಶೇಕಡಾ 61 ರಷ್ಟು ಮನೆಗಳಿಂದ, ಶೇಕಡಾ 26 ರಷ್ಟು ಆಹಾರ ಸೇವಾ ಕೇಂದ್ರಗಳಿಂದ ಮತ್ತು ಶೇಕಡಾ 13ರಷ್ಟು ಚಿಲ್ಲರೆ ಮಾರುಕಟ್ಟೆಯಿಂದ ಬಂದಿದೆ.

2019ರಲ್ಲಿ ಉತ್ಪತ್ತಿಯಾದ ಆಹಾರದಲ್ಲಿ ಶೇ 17 ರಷ್ಟು ವೇಸ್ಟ್ ಆಗಿದೆ. ಇದನ್ನು 23 ಮಿಲಿಯನ್ ಟ್ರಕ್‍ಗಳಲ್ಲಿ (40 ಟನ್ ಸಾಮಥ್ರ್ಯದ) ಲೋಡ್ ಮಾಡಬಹುದು.

food

ಈ ಟ್ರಕ್‍ಗಳನ್ನು ಒಂದರ ಹಿಂದೆ ಒಂದರಂತೆ ನಿಲ್ಲಿಸಿದರೆ, ಭೂಗೋಳವನ್ನ ಏಳುಬಾರಿ ಸುತ್ತಬಹುದು. ಪ್ರತಿ ವರ್ಷ ಭಾರತದ ಪ್ರತಿ ಮನೆಯಲ್ಲೂ 50 ಕೆಜಿ ಆಹಾರ ವ್ಯರ್ಥವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಅಂದರೆ ದೇಶಾದ್ಯಂತ ಪ್ರತಿ ವರ್ಷ 6,87,60,163 ಟನ್ ಆಹಾರ ವ್ಯರ್ಥವಾಗುತ್ತಿದೆ. ಯುಎಸ್ನಲ್ಲಿ ಇದು 1,93,59,951 ಟನ್ ಆಗಿದ್ದರೆ, ಚೀನಾದಲ್ಲಿ 9,16,46,213 ಟನ್ ಇದೆ. ಮನೆಯಲ್ಲಿ ಲಭ್ಯವಿರುವ ಆಹಾರದ ಶೇಕಡಾ 11 ರಷ್ಟು ವ್ಯರ್ಥವಾಗುತ್ತದೆ. ಸುಮಾರು 5 ಪ್ರತಿಶತದಷ್ಟು ಆಹಾರವು ಆಹಾರ ಸೇವಾ ಕೇಂದ್ರಗಳಲ್ಲಿ ಮತ್ತು 2 ಪ್ರತಿಶತ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ವ್ಯರ್ಥವಾಗುತ್ತಿದೆ. ಮಾಲಿನ್ಯ, ಹವಾಮಾನ ಬದಲಾವಣೆ, ನೈಸರ್ಗಿಕ ಸಮತೋಲನ ನಷ್ಟ ಮತ್ತು ಜೀವವೈವಿಧ್ಯತೆಯಂತಹ ದುಷ್ಪರಿಣಾಮಗಳನ್ನು ತಡೆಗಟ್ಟಲು ಆಹಾರ ತ್ಯಾಜ್ಯವನ್ನು ನಿಗ್ರಹಿಸುವತ್ತ ಗಮನ ಹರಿಸಬೇಕೆಂದು ಯುಎನ್‍ಇಪಿ ಕಾರ್ಯನಿರ್ವಾಹಕ ನಿರ್ದೇಶಕ ಇಂಗರ್ ಆಂಡರ್ಸನ್ ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd