Under19 Worldcup : ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಗೆ ಭಾರತ..??
ಸ್ಪಿನ್ನರ್ ಪಾರ್ಶವಿ ಚೋಪ್ರಾ ಅವರ ಅಮೋಘ ಸ್ಪಿನ್ ದಾಳಿಯ ನೆರವಿನಿಂದ 19 ವರ್ಷದೊಳಗಿನವರ ಭಾರತ ವನಿತೆಯರ ತಂಡ ಶ್ರೀಲಂಕಾ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಸೆಮಿಫೈನಲ್ ಬಹುತೇಕ ಖಚಿತಪಡಿಸಿಕೊಂಡಿದೆ.
ಪೂಚೆಫ್ ಸ್ಟ್ರೂಮ್ ನ ಸೆನ್ವೆಸ್ ಪಾರ್ಕ್ ಮೈದಾನದಲ್ಲಿ ನಡೆದ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ವನಿತೆಯರು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 59 ರನ್ ಕಲೆ ಹಾಕಿತು. ಭಾರತ ವನಿತೆಯರು 7.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿತು.
ಲಂಕಾ ಪರ ನಾಯಕಿ ವಿಶ್ಮಿನಿ ಗುಣರತ್ನೆ 25, ಉಮಾಯಾ ರತ್ನಯಾಕೆ 13 ತಂಡದ ಪರ ಗರಿಷ್ಠ ರನ್ ಹೊಡೆದರು. ಇನ್ನುಳಿದ ಬ್ಯಾಟರ್ಗಳು ಒಂದಂಕಿ ರನ್ ಹೊಡೆದರು.
ಪಾರ್ಶ್ವಿ ಚೋಪ್ರಾ 5ಕ್ಕೆ 4 ವಿಕೆಟ್ ಪಡೆದರು. ಮನ್ನತ್ ಕಶ್ಯಪ್ 16ಕ್ಕೆ 2, ಸಾಧು ಮತ್ತು ಅರ್ಚನಾ ದೇವಿ ತಲಾ 1 ವಿಕೆಟ್ ಪಡೆದರು.
ಭಾರತ ಪರ ಶಾಲಿ ವರ್ಮಾ 15, ಶ್ವೇತಾ ಶೆರವಾತ್ 13, ರಿಚಾ ಘೋಷ್ 4, ಸೌಮ್ಯ ತಿವಾರಿ ಅಜೇಯ 28 ರನ್ ಗಳಿಸಿದರು. ಡೆವ್ಮಿ ವಿಹಾಂಗಾ 3 ವಿಕೆಟ್ ಪಡೆದರು.
Under19 Worldcup: India to U19 World Cup semi-finals…??