ಕೇಂದ್ರ ಬಜೆಟ್ 2021 : ದೇಶದ ಅನ್ನದಾತರಿಗೆ ಎಷ್ಟು ಕೋಟಿ ಮೀಸಲು..!
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವ್ರು ಇಂದು 2021ನೇ ಸಾಲಿನ ಕೇಂದ್ರ ಬಜೆಟ್ ಬಜೆಟ್ ಮಂಡಿಸಿದರು. ಈ ವೇಳೆ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ದೇಶದ ಅನ್ನದಾತರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ರೈತರಿಂದ ಆಹಾರ ಧಾನ್ಯ ಖರೀದಿಸಲು ಸರ್ಕಾರ 40 ಪಟ್ಟು ಅಧಿಕ ಹಣ ವಿನಿಯೋಗಿಸಿದ್ದು, ಕೃಷಿ ಉತ್ಪನ್ನಗಳ ಖರೀದಿ ಮುಂದುವರೆಯಲಿದೆ. ಇನ್ನು ಈ ಬಾರೀ ರೈತರಿಂದ ಕೃಷಿ ಉತ್ಪನ್ನ ಖರೀದಿಗಾಗಿಯೇ 1.72 ಲಕ್ಷ ಕೋಟಿ ರೂಪಾಯಿ ಮೀಸಲಿಡುವುದಾಗಿ ಘೋಷಣೆ ಮಾಡಿದ್ದಾರೆ.
ಕೇಂದ್ರ ಬಜೆಟ್ 2021 : ಮಧ್ಯಮ ವರ್ಗದ ಜನರಿಗೆ ಬಿಗ್ ಶಾಕ್ …!
ಸಾಮಾನ್ಯವಾಗಿ ಆಹಾರ ಧಾನ್ಯ ಖರೀದಿಗೆ 1,41,930 ಕೋಟಿ ರೂಪಾಯಿ ತಗುಲುತ್ತೆ. ಆದ್ರೆ, ಈ ವರ್ಷ ಈ ಮೊತ್ತವನ್ನ 1,72, 081 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಇನ್ನು ಭತ್ತ ಬೆಳೆಗಾರರಿಗೆ 2013-14ರಲ್ಲಿ 3995 ಕೋಟಿ ನೀಡಿ ಖರೀದಿಸಲಾಗಿತ್ತು. ಇನ್ನು 2019-20ರಲ್ಲಿ 1.31 ಲಕ್ಷ ಕೋಟಿ ಖರೀದಿ ಮಾಡಲಾಯ್ತು. ಕನಿಷ್ಠ ಬೆಂಬಲ ಬೆಲೆ ಹೆಚ್ಚಳವು ದೇಶದ 43 ಕೋಟಿ ರೈತರ ಆದಾಯವನ್ನ ಹೆಚ್ಚಿಸಲಿದೆ. ಧಾನ್ಯಗಳ ಖರೀದಿಗೆ 10,500 ಕೋಟಿ ರೂಪಾಯಿ ಅನುದಾನ ಮೀಸಲಿರಸಲಾಗಿದೆ.
ಕೇಂದ್ರ ಬಜೆಟ್ 2021 | ಯಾವುದು ಅಗ್ಗ..ಯಾವುದು ದುಬಾರಿ ಗೊತ್ತಾ..!
ಇನ್ನೂ ಆಹಾರ ಧಾನ್ಯ ಖರೀದಿಗೆ 1,41,930 ಕೋಟಿ ರೂಪಾಯ, ಧಾನ್ಯಗಳ ಖರೀದಿ ಹಣ 1,72, 081 ಕೋಟಿ ರೂ.ಗೆ ಹೆಚ್ಚಳ, ಬೇಳೆಕಾಳುಗಳ ಖರೀದಿಗೆ 10,530 ಕೋಟಿ ರೂಪಾಯಿ ಮೀಸಲು, ಕೃಷಿ ಬೆಳೆಗಳಿಗೆ ವಿಮೆ ವಿಸ್ತರಣೆ, ದೇಶದಲ್ಲಿ 5 ಮೀನುಗಾರಿಕಾ ಬಂದರುಗಳ ಅಭಿವೃದ್ಧಿ, ಪಶುಸಂಗೋಪನೆ ಮೀನುಗಾರಿಗೆಕೆ 40 ಸಾವಿರ ಕೋಟಿ, ಗೋದಿ ಖರೀದಿಗಾಗಿಯೇ 33,000 ಕೋಟಿ ರೂ. ಮೀಸಲು, ಕೃಷಿ ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕೆ ಒತ್ತು, ಕೃಷಿ ನೀರಾವರಿಗೆ ಹೆಚ್ಚುವರಿಗಾಗಿ ಹೆಚ್ಚುವರಿ 5 ಸಾವಿರ ಕೋಟಿ ರೂ. ಅನುದಾನ ನೀಡುವ ಮೂಲಕ ದೇಶದ ಅನ್ನದಾತರಿಗೆ ಭರ್ಜರಿ ಗಿಫ್ಟ್ ನೀಡಿದೆ.
ಕೇಂದ್ರ ಬಜೆಟ್ 2021 | ವಾಹನ ಸವಾರರಿಗೆ ಶಾಕ್.. ಆಭರಣ ಪ್ರಿಯರಿಗೆ ಗಿಫ್ಟ್
ಕೇಂದ್ರ ಬಜೆಟ್ 2021 – ಏರ್ ಇಂಡಿಯಾ ಸರ್ಕಾರಿ ಸ್ವಾಮ್ಯದ ಹಲವು ಸಂಸ್ಥೆಗಳಿಗೆ ಶಾಶ್ವತ ಬೀಗ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








