ಕೇಂದ್ರ ಬಜೆಟ್ 2021 : 20 ವರ್ಷಗಳಿಗಿಂತ ಹಳೆಯ ವಾಹನಗಳು ‘ಗುಜುರಿಗೆ’
ಕೇಂದ್ರ ಬಜೆಟ್ 2021 ಅನ್ನ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಲವು ಮಹತ್ವದ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಘೋಷಣೆ ಮಾಡಿದ್ದಾರೆ. ಹಲವು ಮಹತ್ವದ ನಿರ್ಧಾರಗಳ ಬಗ್ಗೆ ತಿಳಿಸಿದ್ದಾರೆ. ಕೇಂದ್ರ ಬಜೆಟ್ 2021ರಲ್ಲಿ ಹೊಸ ಸ್ಕ್ರಾಪೇಜ್ ನೀತಿ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಳೆಯ ವಾಹನಗಳನ್ನ ಗುಜರಿಗೆ ಹಾಕಿ ಎಂದು ಕರೆ ನೀಡಿದ್ರು. ಹೌದು 20 ವರ್ಷದಷ್ಟು ಹಳೆಯದಾದ ಖಾಸಗಿ ವಾಹನ ಹಾಗೂ 15 ವರ್ಷದಷ್ಟು ಹಳೆಯದಾದ ವಾಣಿಜ್ಯ ವಾಹನಗಳು ಇನ್ಮುಂದೆ ಗುಜರಿ ಸೇರಲಿವೆ. ಜನರು ಸ್ವಯಂಪ್ರೇರಿತರಾಗಿ ಹಳೆಯ ವಾಹನಗಳನ್ನ ಗುಜರಿಗೆ ಹಾಕಲು ಪ್ರೇರಣೆ ನೀಡಲಾಗುವುದು. ವಾಹನ ಉದ್ಯಮ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುವ ನಿಟ್ಟಿನಲ್ಲಿ ಹಳೆಯ ವಾಹನಗಳು ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿವೆ ಎಂದು ಹೇಳಿದ್ರು.
ಕೇಂದ್ರ ಬಜೆಟ್ 2021 : ಮೂಲಸೌಕರ್ಯ ಮತ್ತು ಅಭಿವೃದ್ಧಿಗೆ ರಾಷ್ಟ್ರೀಯ ಬ್ಯಾಂಕ್ ಸ್ಥಾಪನೆ..!
ವಾಯು ಮಾಲಿನ್ಯ ತಡೆಗಟ್ಟಲು ಬಜೆಟ್ ನಲ್ಲಿ 2,217 ಕೋಟಿ ರೂ. ಅನ್ನು 42 ನಗರ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ. ಇದರೊಂದಿಗೆ ಹಳೆಯ ಅಥವಾ ಅನರ್ಹ ವಾಹನಗಳನ್ನು ಹೊರ ಹಾಕಲು ಪ್ರತ್ಯೇಕವಾಗಿ ನೂತನ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಘೋಷಣೆ ಮಾಡಲಾಗಿದೆ. ನೂತನ ನೀತಿಯ ಮೂಲಕ ಖಾಸಗಿ ಅಥವಾ ಸ್ವಂತ ವಾಹನಗಳಿಗೆ 20 ವರ್ಷಗಳ ಬಳಿಕ ಫಿಟ್ನೆಸ್ ಪರೀಕ್ಷೆ ನಡೆಸಲಾಗುವುದು ಮತ್ತು ವಾಣಿಜ್ಯ ವಾಹನಗಳಿಗೆ 15 ವರ್ಷಗಳ ಬಳಿಕ ಫಿಟ್ನೆಸ್ ಪರೀಕ್ಷೆ ನಡೆಸಿ ಅದರ ಗುಣಮಟ್ಟಣವನ್ನು ನಿರ್ಧರಿಸಲಾಗುವುದು. ಈ ಮೂಲಕ ವಾಹನ ದಟ್ಟನೆಗೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ.
ಪೆಟ್ರೋಲ್, ಡೀಸೇಲ್ ದರ ಏರಿಕೆ ಇಲ್ಲ : ಕೇಂದ್ರ ಸ್ಪಷ್ಟನೆ
ಕೇಂದ್ರ ಬಜೆಟ್ 2021 : ದೇಶದ ಅನ್ನದಾತರಿಗೆ ಎಷ್ಟು ಕೋಟಿ ಮೀಸಲು..!
ಕೇಂದ್ರ ಬಜೆಟ್ 2021 : ಮಧ್ಯಮ ವರ್ಗದ ಜನರಿಗೆ ಬಿಗ್ ಶಾಕ್ …!
ನಿರ್ಮಲಾ ತೆರಿಗೆ ಲೆಕ್ಕ | ಯಾವುದು ಅಗ್ಗ..ಯಾವುದು ದುಬಾರಿ ಗೊತ್ತಾ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel