25 ಸಂಸದರನ್ನ ಕೊಟ್ಟ `ಕರ್ನಾಟಕಕ್ಕೆ ಬಜೆಟ್ ನಲ್ಲಿ ಸಿಕ್ಕಿದ್ದೇನು’..?
ಬೆಂಗಳೂರು : 2020 ಕರ್ನಾಟಕದ ಪಾಲಿಗೆ ಅತ್ಯಂತ ದುರದೃಷ್ಟಕರ ವರ್ಷ. ಒಂದು ಕಡೆ ಕೊರೊನಾ ಆರ್ಭಟ.. ಮತ್ತೊಂದು ಕಡೆ ಸರಣಿ ಜಲ ಪ್ರವಾಹಗಳು. ಇನ್ನೊಂದಡೆ ಕೇಂದ್ರದಿಂದ ನಿರೀಕ್ಷಿತ ಮಟ್ಟದಲ್ಲಿ ಸಿಗದ ಬೆಂಬಲ.
ಇವುಗಳ ಮಧ್ಯೆ ಖಾಲಿಯಾದ ಬೊಕ್ಕಸ. ಆದಾಗ್ಯೂ ಆರ್ಥಿಕತೆಯನ್ನು ಹೇಗೋ ಸರಿದೂಗಿಸಿಕೊಂದು ರಾಜ್ಯ ಸರ್ಕಾರ ಆಡಳಿತದ ಬಂಡಿಯನ್ನ ನಡೆಸುತ್ತಿದೆ. ಈ ಹಿನ್ನೆಲೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಬೂಸ್ಟ್ ನೀಡುವಂತಹ ಯೋಜನೆಗಳನ್ನ ನಿರೀಕ್ಷೆ ಮಾಡಲಾಗಿತ್ತು.
ಅಲ್ಲದೆ ಒಂದಿಷ್ಟು ಬೇಡಿಕೆಗಳನ್ನು ಸಹ ಕೇಂದ್ರ ಮುಂದೆ ಇಡಲಾಗಿತ್ತು. ಆದ್ರೆ ಇಂದು ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅಂತ ಯಾವುದೇ ಹೊಸ ಯೋಜನೆ ಘೋಷಣೆಯಾಗಿಲ್ಲ.
ಇಂದಿನ ಬಜೆಟ್ ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು, ಈ ಬಾರಿಯ ಬಜೆಟ್‍ನಲ್ಲಿ ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ 2ಎ ಮತ್ತು 2ಬಿ ವಿಸ್ತರಣೆಗೆ 58.19 ಕಿ.ಮೀ ಗೆ ರೂ. 14,788 ಕೋಟಿ ಅನುದಾನವನ್ನು ಘೋಷಣೆ ಮಾಡಲಾಗಿದೆ.
ಇದಲ್ಲದೆ ಬೆಂಗಳೂರು-ಚೆನ್ನೈ ಎಕ್ಸ್‍ಪ್ರೆಸ್ ವೇ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ಘೋಷಣೆ ಮಾಡಲಾಗಿದೆ. 278 ಕಿ. ಮೀ. ಮಾರ್ಗದ ಯೋಜನೆ ಹಿಂದೆಯೇ ಘೋಷಣೆಯಾಗಿತ್ತು.
ಈ ವರ್ಷ ಕಾಮಗಾರಿ ಆರಂಭವಾಗಲಿದೆ. ವಿಚಿತ್ರವೆಂದರೇ ಈ ಎರಡು ಯೋಜನೆಗಳನ್ನು ಬಿಟ್ಟರೇ ಬೇರೆ ಯಾವ ಹೇಳಿಕೊಳ್ಳುವಂತ ಯೋಜನೆ ಕರ್ನಾಟಕಕ್ಕೆ ಸಿಕ್ಕಿಲ್ಲ.
ಅಂದಹಾಗೆ ಕರ್ನಾಟಕಕ್ಕೆ ಈ ಹಿಂದೆ ಘೋಷಣೆಯಾಗಿರುವ ಹಲವು ರೈಲು ಯೋಜನೆಗಳು ಆಮೆಗತಿಯಲ್ಲಿ ಸಾಗಿವೆ.
ಈ ಯೋಜನೆಗಳಿಗೆ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಹೀಗಿದ್ದರೂ ರಾಜ್ಯಕ್ಕೆ ಯಾವುದೇ ಹೊಸ ರೈಲು ಯೋಜನೆ ಘೋಷಣೆ ಮಾಡಿಲ್ಲ ಎಂದು ಕನ್ನಡಿಗರ ಕೆಂಗಣ್ಣಿಗೆ ಕಾರಣವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









