ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ ಪೋಟೊ ಟ್ವೀಟ್ ಮಾಡಿದ ಕೇಂದ್ರ ಸಚಿವ Saaksha Tv
ನವದೆಹಲಿ: ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ ಚೀನಾಬ್ ಸೇತುವೆಯ ಫೋಟೋಗಳನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ಪರ್ವತಗಳ ಹಿನ್ನೆಲೆಯಲ್ಲಿ ಎತ್ತರವಾಗಿ ನಿಂತಿರುವಂತೆ ಸೇತುವೆಯು ಮೋಡಗಳ ಮೇಲೆ ಕಮಾನುಗಳಾಗಿ ಕಾಣುತ್ತದೆ. ಚೀನಾಬ್ ರೈಲು ಸೇತುವೆಯು ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಬಕ್ಕಲ್ ಮತ್ತು ಕೌರಿ ನಡುವೆ ಇದೆ. ಈ ಸೇತುವೆಯ ಚಿತ್ರಕ್ಕೆ ಮೋಡಗಳ ಮೇಲಿನ ವಿಶ್ವದ ಅತಿ ಎತ್ತರದ ಕಮಾನು ಚೀನಾಬ್ ಸೇತುವೆ’ ಎಂಬ ಶೀರ್ಷಿಕೆಯಡಿ ಫೋಟೊವನ್ನು ಹಂಚಿಕೊಂಡಿದ್ದಾರೆ.
ಈ ಸೇತುವೆಯು 1,315 ಮೀಟರ್ ಉದ್ದ ಮತ್ತು ನದಿಯಿಂದ 359 ಮೀಟರ್ ಎತ್ತರದಲ್ಲಿದೆ. ಇದು ಫ್ರಾನ್ಸ್ನ ಪ್ಯಾರಿಸ್ನಲ್ಲಿರುವ ಐಫೆಲ್ ಟವರ್ಗಿಂತ 35 ಮೀಟರ್ ಎತ್ತರದಲ್ಲಿದೆ.
ಈ ಸೇತುವೆಯು ಕಾಶ್ಮೀರ ಕಣಿವೆಗೆ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅಭಿಪ್ರಾಯಪಟ್ಟಿದ್ದಾರೆ.










