ಶೂನ್ಯ ಸಹಿಷ್ಣುತೆಯ ವಿಧಾನದಿಂದ ಮಾತ್ರ ಭಯೋತ್ಪಾದನೆ ಸೋಲಿಸಲು ಸಾಧ್ಯ – ರುಚಿರಾ ಕಾಂಬೋಜ್
ಭಯೋತ್ಪಾದನೆಯನ್ನ ಶೂನ್ಯ ಸಹಿಷ್ಣುತೆಯ(ಜೀರೋ ಟಾಲರೆನ್ಸ್) ವಿಧಾನದಿಂದ ಮಾತ್ರ ಅಂತಿಮವಾಗಿ ಸೋಲಿಸಬಹುದು ಎಂದು ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಹೇಳಿದ್ದಾರೆ. ಭಯೋತ್ಪಾದನೆ ಜಾಗತಿಕ ಸವಾಲಾಗಿ ಉಳಿದಿದೆ ಎಂದು ಹೇಳಿದ್ದಾರೆ.
26/11 ಮುಂಬೈ ಭಯೋತ್ಪಾದನಾ ದಾಳಿಯ ಬಗ್ಗೆ ಮಾತನಾಡಿದ ವಿಶ್ವಸಂಸ್ಥೆಯ ರಾಯಭಾರಿ “ ಭಯೋತ್ಪಾದಕರು ಎಸಗುವ ಗಂಭೀರ ಮತ್ತು ಅಮಾನವೀಯ ಭಯೋತ್ಪಾದಕ ಕೃತ್ಯಗಳಿಗೆ ನಾವು ಹೊಣೆಗಾರಿಕೆಯನ್ನು ಖಾತ್ರಿಪಡಿಸಿದಾಗ ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಹಣಕಾಸು ಒದಗಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಾಗ ಮಾತ್ರ ಭಯೋತ್ಪಾದನೆಯ ವಿರುದ್ಧದ ಸಾಮೂಹಿಕ ಹೋರಾಟದ ವಿಶ್ವಾಸಾರ್ಹತೆಯನ್ನು ಬಲಪಡಿಸಬಹುದು ಎಂದು ಭಾರತ ನಂಬುತ್ತದೆ ಎಂದು ಅವರು ಹೇಳಿದರು.
United Nations : Terrorism can be defeated only with zero tolerance approach – Ruchira Kamboj