ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮಾಡಲಾಗಿದ್ದ ಲಾಕ್ಡೌನ್ ನಂತರ ಈಗ ಅನ್ಲಾಕ್ 2.0 ಮಾರ್ಗಸೂಚಿ ಬಿಡುಗಡೆ ಮಾಡಿರುವ ಬಿಬಿಎಂಪಿ, ಮೆಟ್ರೋ ರೈಲು ಸಂಚಾರ ಬಂದ್ ಮಾಡಿ ಆದೇಶ ಹೊರಡಿಸಿದೆ.
ಮೆಟ್ರೋ ರೈಲು ಜತೆಗೆ ಚಿತ್ರಮಂದಿರಗಳು, ಜಿಮ್ ಸೆಂಟರ್ ಹಾಗೂ ಸ್ವಿಮ್ಮಿಂಗ್ ಪೂಲ್ಗಳನ್ನು ತೆರೆಯಲು ಅನುಮತಿ ಇಲ್ಲ ಎಂದು 2.0 ಮಾರ್ಗಸೂಚಿಸಿಯಲ್ಲಿ ತಿಳಿಸಿದೆ.
ಬೆಂಗಳೂರಿನ ಕಂಟೈನ್ಮೆಂಟ್ ಝೋನ್ ಪ್ರದೇಶದಲ್ಲಿ ಲಾಕ್ಡೌನ್ ಆದೇಶ ಮುಂದುವರೆಯಲಿದೆ. ರಾತ್ರಿ 8ರಿಂದ ಬೆಳಿಗ್ಗೆ 5ಗಂಟೆವರೆಗೆ ನೈಟ್ ಕಫ್ರ್ಯೂ ಜಾರಿಯಲ್ಲಿರಲಿದೆ. ಆದರೆ, ಕಾರ್ಖಾನೆಗಳಿಗೆ ರಾತ್ರಿ ಕಫ್ರ್ಯೂನಿಂದ ವಿನಾಯಿತಿ ನೀಡಲಾಗಿದೆ. ಬರುವ ಭಾನುವಾರದ ಲಾಕ್ಡೌನ್ ಜಾರಿಯಲ್ಲಿರುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.