ನವದೆಹಲಿ: ಜುಲೈ 31ಕ್ಕೆ ಅನ್‍ಲಾಕ್-2.0 ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಿದ್ದಾರೆ.
ಕೊರೊನಾಗೆ ಕಡಿವಾಣ ಹಾಕಲು ಕಳೆದ ಮಾರ್ಚ್ 24ರಂದು ಭಾರತ ಅನ್‍ಲಾಕ್ ಮಾಡಿಡ್ದ ಪ್ರಧಾನಿ ಮೋದಿ, ಆನಂತರದ ದಿನಗಳಲ್ಲಿ ಲಾಕ್‍ಡೌನ್ ಸಡಿಲಿಕೆ ಹಾಗೂ ಕೊರೊನಾ ನಿಯಂತ್ರಣಕ್ಕೆ ರಾಜ್ಯಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದರು. ರಾಜ್ಯಗಳ ಮುಖ್ಯಮಂತ್ರಿಗಳ ಅಭಿಪ್ರಾಯದ ಆಧಾರದ ಮೇಲೆ ಅನ್‍ಲಾಕ್ ಗೈಡ್‍ಲೈನ್ಸ್ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ನಾಳೆಯ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಯಾವ ಕೊಡುಗೆಗಳನ್ನು ಪ್ರಕಟಿಸುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಜುಲೈ.31ಕ್ಕೆ 2.0 ಮಾರ್ಗಸೂಚಿ ಕೊನೆಗೊಳ್ಳಲಿದ್ದು, ಆಗಸ್ಟ್ 1ರಿಂದ ಆರಂಭವಾಗಲಿರುವ ಅನ್‍ಲಾಕ್3.0 ಬಗ್ಗೆ ರಾಜ್ಯಗಳ ಅಭಿಪ್ರಾಯ ಪಡೆದು ಜುಲೈ 30ಕ್ಕೆ ಹೊಸ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಅನ್‍ಲಾಕ್-3.0 ನಲ್ಲಿ ಸಿನಿಮಾ ಥಿಯೇಟರ್, ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾ ಚಟುವಟಿಕೆಗಳು, ಕಾಲೇಜುಗಳ ಪ್ರಾರಂಭಕ್ಕೆ ಪ್ರಧಾನಿ ಅನುಮತಿ ನೀಡುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಕಳೆದ ನಾಲ್ಕು ತಿಂಗಳಿಂದ ಚಿತ್ರಮಂದಿರಗಳು ಬಾಗಿಲು ತೆರೆದೇ ಇಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಕೊಂಡು ಸಿನಿಮಾ ಮಂದಿರಗಳ ಬಾಗಿಲು ತೆರೆಯಲು ಅವಕಾಶ ಸಿಗುವ ಸಾಧ್ಯತೆ ಇದೆ. ದೆಹಲಿಯಲ್ಲಿ ಕೆಲ ಚಿತ್ರಮಂದಿರಗಳ ಬಾಗಿಲು ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಚಿತ್ರಮಂದಿರಗಳಲ್ಲಿ ಕ್ಲೀನಿಂಗ್ ಕಾರ್ಯ ಭರದಿಂದ ಸಾಗಿದ್ದು, ಸ್ಯಾನಿಟೈಸ್ ಮಾಡಲಾಗುತ್ತಿದೆ. ನಾಳೆಯ ಸಭೆ ಬಳಿಕ ಥಿಯೇಟರ್‍ಗಳನ್ನು ತೆರೆಯಲು ಅವಕಾಶ ಸಿಗಬಹುದು ಎಂಬ ಆಶಯವನ್ನು ಸಿನಿ ಮಂದಿ ಹೊಂದಿದ್ದಾರೆ.
ಪನೀರ್ ಬುರ್ಜಿ
ಬೇಕಾಗುವ ಸಾಮಗ್ರಿಗಳು ಪನೀರ್-1 ಕಪ್ ಈರುಳ್ಳಿ-1 ಟೊಮ್ಯಾಟೋ-1 ಕ್ಯಾಪ್ಸಿಕಂ-1 ಹಸಿ ಮೆಣಸಿನಕಾಯಿ-1 ಅಚ್ಚ ಖಾರದ ಪುಡಿ-1ಟೀ ಚಮಚ ಗರಂ ಮಸಾಲ- ಅರ್ಧ ಟೀ ಚಮಚ ಅರಿಶಿನ ಸ್ವಲ್ಪ...