ಜೂನ್ 7 ರ ಬಳಿಕ ರಾಜ್ಯದಲ್ಲಿ ಅನ್ ಲಾಕ್ ನಿಶ್ಚಿತ : ಡಿಸಿಎಂ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ ಗೆ ಜಾರಿ ಮಾಡಲಾಗಿರುವ ಲಾಕ್ ಡೌನ್ ಜೂನ್ ಏಳರ ಬಳಿಕವೂ ವಿಸ್ತರಣೆ ಆಗುತ್ತಾ..? ಅಥವಾ
ಜೂನ್ ಏಳರ ಬಳಿಕ ರಾಜ್ಯದಲ್ಲಿ ಅನ್ ಲಾಕ್ ಆಗುತ್ತಾ ಎಂಬ ಪ್ರಶ್ನೆಗಳು ಭಾರಿ ಸದ್ದು ಮಾಡುತ್ತಿವೆ. ರಾಜ್ಯದ ಜನರು ಕೂಡ ಇದೇ ವಿಚಾರವಾಗಿ ಬಿಸಿ ಬಿಸಿ ಚರ್ಚೆ ನಡೆಸುತ್ತಿದ್ದಾರೆ.
ಈ ಮಧ್ಯೆ ಡಿಸಿಎಂ ಅಶ್ವತ್ ನಾರಾಯಣ್ ಜೂನ್ ಏಳರ ಬಳಿಕ ಅನ್ ಲಾಕ್ ಖಚಿತ. ಆದ್ರೆ ಯಾವ ಪ್ರಮಾಣದಲ್ಲಿ ಮಾಡಬೇಕು..?
ಯಾವ ಕ್ಷೇತ್ರವನ್ನ ಅನ್ ಲಾಕ್ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಆದ್ರೆ ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಡಾ ಕೆ ಸುಧಾಕರ್ ಸೇರಿದಂತೆ ಕೆಲ ಸಚಿವರು ಇನ್ನೊಂದು ವಾರ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸೋದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಾಕ್ ಡೌನ್ ವಿಸ್ತರಣೆ ಬಗ್ಗೆ ಮಾತನಾಡುತ್ತಾ, ತಜ್ಞರ ಜೊತೆ ಸಭೆ ನಡೆಸಿ ಜೂನ್ ಐದು ಅಥವಾ ಆರನೇ ತಾರೀಖು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.