ಶ್ರೀ ಬೈಲಾಂಜನೇಯಸ್ವಾಮಿ ಶ್ರೀ ದೇವಾಲಯವು ಹಿಂದೆ ವನ/ಕಾಡಿನ ಮಧ್ಯಭಾಗದಲ್ಲಿ ಬಯಲು ಪ್ರದೇಶದಲ್ಲಿ ಇತ್ತೆಂದು, ಅನಂತರ ಬ್ರಿಟಿಷರ ಕಾಲದಲ್ಲಿ ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ರೈಲ್ವೆ ಮಾರ್ಗವನ್ನು ನಿರ್ಮಿಸಿದ ನಂತರ ಪ್ರಾಯೋಗಿಕವಾಗಿ ಒಂದು ರೈಲನ್ನು ಚಲಿಸಲು ಬಿಟ್ಟಾಗ ರೈಲು ದೇವಾಲಯದ ಹಿಂಭಾಗದಲ್ಲಿ ಬಂದು ನಿಂತು ಹೋಗುತ್ತದೆ. ಇದನ್ನು ಆಂಗ್ಲರು ಈ ಬಗ್ಗೆ ಎಲ್ಲವನ್ನು ತಿಳಿದು ರೈಲಿನ ಇಂಜಿನ್ ಪರಿಶೀಲಿಸಲು ಅದರಲ್ಲಿ ಎಲ್ಲವೂ ಸರಿಯಾಗಿದ್ದರೂ ರೈಲು ಮುಂದಕ್ಕೆ ಚಲಿಸದಿರಲು ಕಾರಣವೇನು ಎಂದು ತಿಳಿಯಲು ದೂರದರ್ಶಕದಿಂದ ನೋಡಿದಾಗ ಶ್ರೀ ಆಂಜನೇಯಸ್ವಾಮಿಯು ರೈಲಿಗೆ ಅಡ್ಡಲಾಗಿ ನಿಂತಿರುವುದು ಅವರ ಕಣ್ಣಿಗೆ ಗೋಚರಿಸಲಾಗಿ ಇದನ್ನು ನೋಡಿದ ಆಂಗ್ಲರು ಅನಂತರ ಸ್ಥಳೀಕರನ್ನು ವಿಚಾರಿಸಿ ಅವರುಗಳ ಸಹಾಯದಿಂದ ಹುಡುಕಿದಾಗ ಶ್ರೀ ಆಂಜನೇಯ ಸ್ವಾಮಿಯ ಕಲ್ಲಿನ ವಿಗ್ರಹ ದೊರೆಯುತ್ತದೆ. ಇದರಿಂದ ಈ ದೇವರನ್ನು ಶ್ರೀ ಬೈಲಾಂಜನೇಯಸ್ವಾಮಿ ಎಂದು ಕರೆಯಲಾಯಿತು. ನಂತರ ಆಂಗ್ಲರು ಸ್ಥಳ ಶುದ್ದಿ ಮಾಡಿ ದೇವರಿಗೆ ಅಭಿಷೇಕ ಪೂಜಾ ಕೈಂಕರ್ಯಗಳನ್ನು ಮಾಡಿ ಒಂದು ಸಣ್ಣ ಗುಡಿ ಗೋಪುರವನ್ನು ನಿರ್ಮಿಸುತ್ತಾರೆ. ನಂತರ ರೈಲು ಮುಂದಕ್ಕೆ ಚಲಿಸಿತ್ತೆಂದು (ಹಿನ್ನೆಲೆ) ಎಂಬುದು ಇಲ್ಲಿನ ಭಕ್ತರ ವಾಡಿಕೆಯಾಗಿರುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಈ ದೇವಾಲಯದಲ್ಲಿ ಯಾವುದೇ ಶುಭ ಕಾರ್ಯಗಳು ನಡೆದರೂ ಶ್ರೀ ಸ್ವಾಮಿಯ ಹೂ ಪ್ರಸಾದ ಕೇಳುವ ವಾಡಿಕೆ ಇರುತ್ತದೆ ದೇವರ ಹೂ ಪ್ರಸಾದ ಬಲಬದಿಯಲ್ಲಿ ಬಿದ್ದರೆ ಶುಭವೆಂದು ಕಾರ್ಯಸಿದ್ದಿಯಾಗುತ್ತದೆ ಎಂದು ಎಡಬದಿಯಲ್ಲಿ ಬಿದ್ದರೆ ಕಾರ್ಯವಾಗುವುದಿಲ್ಲವೆಂದು ಈ ಹಿಂದಿನಿಂದಲ್ಲೂ ಈ ಪ್ರಾಂತ್ಯದ ಜನರಲ್ಲಿ ಅತ್ಯಂತ ನಂಬಿಕೆ ಮೂಡಿರುತ್ತದೆ. ಇದರಿಂದ ಭಕ್ತರು ಅನೇಕ ಫಲಗಳನ್ನು ಹೊಂದಿರುವ ಬಗ್ಗೆ ಭಕ್ತರು ದೇವಾಲಯಕ್ಕೆ ಕಾರ್ಯಸಿದ್ಧಿಯ ಬಗ್ಗೆ ಹೇಳುವುದೇ ಅಪಾರವಾದ ನಂಬಿಕೆಗೆ ಕಾರಣವಾಗಿದೆ. ಈ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ ಮಾಡುವುದು ವಿಶೇಷವಾಗಿರುತ್ತದೆ ಹಾಗೂ ಶ್ರೀ ಸ್ವಾಮಿಗೆ ವಿವಿಧ ಅಲಂಕಾರಗಳನ್ನು ಮಾಡುತ್ತಾರೆ. ಬೆಣ್ಣೆ ಅಲಂಕಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಮಾಡಿರುತ್ತಾರೆ, ಶ್ರೀ ರಾಮನವಮಿಯ ಮಾರನೇ ದಿನ ಶ್ರೀ ಸ್ವಾಮಿಯ ಬ್ರಹ್ಮರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ, ದೇವಾಲಯದಲ್ಲಿ ಮರೆ (ನೀರು ಹಾಕಿಸಿಕೊಳ್ಳುವ) ವಾಡಿಕೆ ಇರುತ್ತದೆ ಭಕ್ತಾಧಿಗಳು ನೀರು ಹಾಕಿಸಿಕೊಂಡು ದೇವಾಲಯವನ್ನು ಮೂರು ಬಾರಿ ಸುತ್ತುತ್ತಾರೆ, ಈ ತರಹ ಮೂರು ಬಾರಿ ಮಾಡಿದರೆ ತಮ್ಮ ಇಷ್ಠಾರ್ಥಗಳನ್ನು ಶ್ರೀ ಅಂಜನೇಯಸ್ವಾಮಿಯು ನೆರೆವೇರಿಸುತ್ತಾನೆ ಎಂಬ ನಂಬಿಕೆ ಇದೆ ಹಾಗೂ ಭಕ್ತಾಧಿಗಳು ಯಂತ್ರ, ತಾಯತವನ್ನು ಕಟ್ಟಿಸಿಕೊಂಡರೆ ಭಯವು ದೂರವಾಗುತ್ತದೆ ಎಂಬ ನಂಬಿಕೆ ಇದೆ ಹಾಗೂ ತೆಂಗಿನಕಾಯಿಯನ್ನು ಅಭಿಮಂತ್ರಿಸಿ ಕೊಟ್ಟ ನಂತರ ಭಕ್ತರು ಮನೆಯ ಬಾಗಿಲಿಗೆ ಕಟ್ಲೆಕಾಯಿ (ಮಂತ್ರಕಾಯಿ) ಕಟ್ಟುವುದರಿಂದ ಮನೆಯು ಆರ್ಥಿಕವಾಗಿ ಏಳಿಗೆಯಾಗುತ್ತದೆ ಮತ್ತು ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಎಂಬ ಅಚಲವಾದ ನಂಬಿಕೆ ಭಕ್ತರಲ್ಲಿ ಇರುತ್ತದೆ ಇದು ಈ ದೇವಾಲಯದ ಐತಿಹಾಸಿಕ ಹಿನ್ನಲೆಯಾಗಿರುತ್ತದೆ.
ಬಾಗಿಲು ತೆರೆಯುವ ಸಮಯ
06:30 AM IST – 07:00 AM IST
07:00 PM IST – 07:32 PM IST
ಬಾಗಿಲು ಮುಚ್ಚುವ ಸಮಯ
ದೇವಾಲಯವು ಪ್ರತಿ ದಿನ ಬೆಳಗ್ಗೆ 6.30ಕ್ಕೆ ಅಭಿಷೇಕ ಪ್ರಾರಂಭವಾಗಿ 8.00 ಗಂಟೆಗೆ ಮುಗಿಯುತ್ತದೆ ನಂತರ ಸಂಜೆ 7.00 ರವರೆಗೆ ಭಕ್ತಾಧಿಗಳಿಗೆ ದರ್ಶನದ ವ್ಯವಸ್ಥೆ ಇರುತ್ತದೆ








