ADVERTISEMENT
Monday, May 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಯೋಗ್ಯ ಪಾಕ್ ಗೆ ಆಂಗ್ ಭಂಗ್ ಯೋಗ..

Unworthy Pakistan Faces Total Breakdown of Strategy

Shwetha by Shwetha
May 8, 2025
in Newsbeat, International, Saaksha Special, ಎಸ್ ಸ್ಪೆಷಲ್, ದೇಶ - ವಿದೇಶ, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಆಪರೇಷನ್ ಸಿಂಧೂರ… ಈ ರಣಬೇಟೆ..ಪಾಕಿಸ್ತಾನದ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತೆ ಮಾಡ್ಬಿಟ್ಟಿದೆ.. ತಮ್ಮದು ಕೆಚ್ಚೆದೆ.. ಕೆಚ್ಚೆದೆ ಅಂತಿದ್ದವರ ಗುಂಡಿಗೆ ಗಢಗಢನೇ ಅಲ್ಲಾಡಿ ಹೋಗಿದೆ… ಹೃದಯ ಒಂದ್ಸಾರಿ.. ಬಲಕ್ಕೆ ಓಡಿ ಬಂದು ಮತ್ತೇ ಎಡಕ್ಕೆ ಹೋಗಿ ಜೋರಾಗಿ ಹೊಡೆದುಕೊಳ್ತಿದೆ. ಭಾರತೀಯ ಸೇನಾ ಆರ್ಭಟಕ್ಕೆ ಕಣ್ಣುಗಳು ಇಂಗಿ ಹೋಗದೇ ಇರೋದೊಂದು ಬಾಕಿ ಅಷ್ಟೇ..ಅಂಥಹ ಪರಿಸ್ಥಿತಿಯಲ್ಲಿ ಈ ಸುಡು ಬಿಸಿಲ ಬೇಸಿಗೆ ಧಗೆಯಲ್ಲೂ ರಗ್ಗು ಹೊದ್ದುಕೊಂಡು ನಡುಗುತ್ತಿದೆ. ಆದ್ರೂ ಒಣಜಂಭದ ಮಾತುಗಳು ಮಾತ್ರ ಅಲ್ಲಿನ ನಾಯಕರ ನಾಲಿಗೆಯಲ್ಲಿ ನಾಟ್ಯವಾಡ್ತಿದೆ.. ಪ್ರಧಾನಿ.. ರಕ್ಷಣಾ ಸಚಿವ ಸೇರಿದಂತೆ.. ಎಲ್ರೂ ಉಗುಳು ನುಂಗಿಕೊಂಡೇ ಹೇಳಿಕೆಗಳನ್ನ ಕೊಡ್ತಿದ್ದಾರೆ.. ಹಾಗೇ ಮಾಡಿ ಬಿಡ್ತೀವಿ.. ಹೀಗೆ ಮಾಡಿ ಬಿಡ್ತೀವಿ ಅಂತ ಖಾಲಿ ಡಬ್ಬದಲ್ಲಿರೋ ಕಲ್ಲುಗಳು ಮಾತಾಡಿದಂತೆ ಮಾತಾಡ್ತಿದ್ದಾರೆ..ಇದರ ನಡುವೆ ಇದೇ ಪಾಪಿಸ್ತಾನ ಇನ್ನಷ್ಟು ಪಾತಾಳಕ್ಕೆ ಹೋಗೋ ಮತ್ತೊಂದು ವಿಚಾರ ಸ್ಫೋಟವಾಗಿದೆ.. ಅದೇ ಅದರ ಭವಿಷ್ಯದ ಕಥೆ..

ಪಾಕಿಸ್ತಾನದ ಹಣೆಬರಹ ಕೆಟ್ಟೋಗಿ.. ಹಣೆಯಲ್ಲಿದ್ದ ಒಂದಷ್ಟು ಒಳ್ಳೆಯ ಗೆರೆಗಳಿಗೆ ಗರ ಬಡಿದು ಅನೇಕ ವರ್ಷಗಳೇ ಕಳೆದು ಹೋಗಿದೆ. ಕೇವಲ ಉಗ್ರರ ಉದರ ತುಂಬಿಸಿಕೊಂಡು.. ಭಯೋತ್ಪಾದಕರಿಂದ ಭಯದ ಬೀಜ ಬಿತ್ತಿಸಿ ಬೆಳೆ ತೆಗೆದ ಈ ದೇಶ ಈಗ ಅದನ್ನೇ ಉಣ್ಣೋ ಕೆಟ್ಟ ಸ್ಥಿತಿಗೆ ಬಂದು ನಿಂತಿದೆ. ಅದೇನೋ ಹೇಳ್ತಾರಲ್ಲಾ ಮಾಡಿದುಣ್ಣೋ ಮಾರಾಯ ಅಂತ ಹಾಗೇ ಇರ್ಲಿ.. ಈಗ ಇದರ ಮುಂದಿನ ಭವಿಷ್ಯ ಏನಾಗುತ್ತೆ.. ಇದರ ಗ್ರಹಗತಿಗಳು ಹೇಗಿವೆ ಅನ್ನೋದನ್ನ ಸ್ವಲ್ವ ನೋಡೋಣ..

Related posts

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

May 4, 2026
ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

May 4, 2026

ಕೆಟ್ಟ ಕಾಲ ರೀ.. ನಿಜಕ್ಕೂ ಪಾಕಿಸ್ತಾನಕ್ಕೆ ಈಗ ಅತ್ಯಂತ ಕೆಟ್ಟ ಕಾಲ.. ಹೇಳ್ಬೇಕು ಅಂದ್ರೆ ಜ್ಯೋತಿಷ್ಯದ ಪ್ರಕಾರ. ಈ ದೇಶ ಅವನತಿಯ ಕಲ್ಲನ್ನ ತಲೆ ಮೇಲೆ ಹೊತ್ಕೊಂಡು ಕೂತಿದೆ.. ಅದು ಯಾವಾಗ ಬೇಕಿದ್ರೂ ತಲೆಯನ್ನ ಛಿದ್ರ ಮಾಡಿ ಬಿಡ್ಬಹುದು. ನೋಡಿ ಒಂದು ವಿಚಾರ ಏನು ಗೊತ್ತಾ.. ಈ ದೇಶದ ಟೈಮ್ ಮಂಗಳವಾರದಿಂದ್ಲೇ ಶುರುವಾಗಿದೆಯಂತೆ. ಭಾರತ ಅದರ ಮೇಲೆ ಮುಗಿ ಬೀಳ್ತಲ್ಲಾ.. ಆಗ್ಲೇ ಇದಕ್ಕೆ ಕೆಟ್ಟ ಟೈಮ್ ಹೆಗಲೇರಿ.. ಕಿವಿಗೆ ಕಡ್ಡಿ ಹಾಕಿ ತಿರುವೋಕೆ ಶುರುವಾಗಿದೆಯಂತೆ. ಅದು ಹೇಗೆ ಅಂದ್ರೆ…ಮೀನ ರಾಶಿಯಲ್ಲಿ ಶನಿ..ಶುಕ್ರ. ರಾಹು ಗ್ರಹವಿತ್ತು. ಇನ್ನು ಬುಧಗ್ರಹ ಮುಂಜಾನೆ 5-33ಕ್ಕೆ ಮೇಷ ರಾಶಿಯನ್ನ ಪ್ರವೇಶ ಮಾಡ್ತು. ಸದ್ಯ ಪಾಕಿಸ್ತಾನದ ಜಾತಕ ಹೇಗಿದೆ ಗೊತ್ತಾ..? ಶುಕ್ರನ ಅಂತರದಶ ಹಾಗೇ ಚಂದ್ರನ ಮಹಾದಶ ನಡೀತಾ ಇದೆ.. ಇದೇ ನೋಡಿ ಪಾಕಿಸ್ತಾನ ಬೆನ್ನನ್ನ ಗುದ್ದಿ.. ಗುದ್ದಿ.. ಗೂನು ಮಾಡ್ತಿರೋದು..

ಇಷ್ಟು ದಿನ ತಾನು ಆಡಿದ್ದೇ ಆಟ.. ಕುಣಿದಿದ್ದೇ ಕುಣಿತ ಅನ್ನವಂತೆ ಪಾಕಿಸ್ತಾನ ಆಡ್ತಿತ್ತು. ಆದ್ರೆ ಮುಂದೆ ಹಾಗಿಲ್ಲ..ಯಾಕೆಂದ್ರೆ ಜ್ಯೋತಿಷ್ಯದ ಪ್ರಕಾರ ಶುಕ್ರನು ಮಾರಕ ಸ್ಥಾನದಲ್ಲಿ ಕುರ್ಚಿ ಹಾಕೊಂಡು ಕೂತಿದ್ದು. ಪಾಕಿಸ್ತಾನವನ್ನ ನಾಶ ಮಾಡಿಯೇ ಮೇಲೇಳೋದು ಅಂತಿದೆಯಂತೆ. ಇದ್ರಿಂದ ಪಾಕಿಸ್ತಾನ ಮುಂದಿನ ದಿನದಲ್ಲಿ ಮತ್ತಷ್ಟು ಒದ್ದಾಡಲಿದೆಯಂತೆ. ಕಷ್ಟಗಳು ಇದರ ಕಾಲು ಹಿಡಿದು ಎತ್ತಿ ಬಡಿಯಲಿದೆಯಂತೆ.. ದೇಶದಲ್ಲಿ ಇನ್ನಷ್ಟು ದಾರಿದ್ರ್ಯ ತಾಂಡವ ಆಡಲಿದೆಯಂತೆ. ಭಿಕ್ಷೆ ತಟ್ಟೆಗೆ ಯಾವ ದೇಶವೂ ಕಾಸು ಹಾಕಲು ಮುಂದೆ ಬರೋದಿಲ್ವಂತೆ.. ಸೇನೆಯಲ್ಲೂ ಬಿಕ್ಕಟ್ಟು ಸೃಷ್ಟಿಯಾಗಬಹುದು.. ನಿಮಗೆ ಗೊತ್ತಿರಬಹುದು ಈ ರಾಷ್ಟ್ರದಲ್ಲಿ ಸೇನೆಯೇ ಪ್ರಬಲ.. ಸೇನೆಯ ಮುಖ್ಯಸ್ಥನೇ ಪ್ರಧಾನಿಯನ್ನ ಕುರ್ಚಿಯಿಂದ ಎಳೆದು ಕೂರಿಸಿ ತಾನು ಕೂತ್ಕೊಂಡ್ರೂ ಅಚ್ಚರಿ ಏನಿಲ್ಲ..
ಇನ್ನು ಈ ದೇಶದ ಕುತ್ತಿಗೆಗೆ ಅಂಗ್- ಭಾಂಗ್ ಯೋಗ ಸುತ್ತಿಕೊಂಡು ಉಸಿರನ್ನ ಮತ್ತಷ್ಟು ಬಿಗಿ ಮಾಡಲಿದೆ ಅಂತಾರೆ ಜ್ಯೋತಿಷಿಗಳು.. ಮೇ 14ರ ಬಳಿಕ ಮಿಥುನ ರಾಶಿಗೆ ಗುರು ಪ್ರವೇಶ ಮಾಡ್ತಾನೆ.. ಇದ್ರಿಂದ ಪಾಕಿಸ್ತಾನ ಇಬ್ಭಾಗವಾಗಹುದು.. ಇಲ್ಲ ಮೂರು ಭಾಗವಾದ್ರೂ ಆಗ್ಬಹುದಂತೆ. ಇದೇ ಸಮಯದಲ್ಲಿ ಮಂಗಳನ ಅಂತದದಶ ಹಾಗೂ ಮಂಗಳನ ಮಹಾದಶದಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ಅಂತರ ಮತ್ತಷ್ಟ ಹೆಚ್ಚಾಗಲಿದೆ.. ಪಾಕಿಸ್ತಾನದ ಮಣ್ಣು ಕೆಂಪಾಗಲಿದೆಯಂತೆ.

ಹಾಗಾದ್ರೆ ಭಾರತದ ಜಾತಕ ಏನು ಹೇಳುತ್ತೆ?

ವೃಷಭ ಲಗ್ನದಲ್ಲಿ ಭಾರತವಿದ್ದು, ನಮ್ಮ ದೇಶದ ಜಾತಕದಲ್ಲಿ ಸೂರ್ಯನ ಅಂತರದಶಾ ನಡೆಯುತ್ತಿದೆ. ಸೂರ್ಯನು ಜಾತಕದಲ್ಲಿ ನಾಲ್ಕನೇ ಮನೆಯ ಅಧಿಪತಿಯಾಗಿದ್ದಾನೆ. ಇದರೊಂದಿಗೆ, ಚಂದ್ರನ ಸ್ಥಿತಿಯಲ್ಲಿ ಸೂರ್ಯನ ಅಂತರದಶವು ಭಾರತದ ಜಾತಕದಲ್ಲಿದೆ. ಜ್ಯೋತಿಷ್ಯದ ಪ್ರಕಾರ, ಸೆಪ್ಟೆಂಬರ್ 2025 ರಲ್ಲಿ ಭಾರತದ ಖ್ಯಾತಿ ಮತ್ತಷ್ಟು ಹೆಚ್ಚಾಗುತ್ತದೆ ಮತ್ತು ಇದು ಭಾರತಕ್ಕೆ ಸುವರ್ಣ ಸಮಯವಾಗಿರುತ್ತಂತೆ…

ಹಾಗಾದ್ರೆ ಈ ಜ್ಯೋತಿಷ್ಯ ಸತ್ಯನಾ..? ಇದು ವಾಸ್ತವಕ್ಕೆ ಎಷ್ಟು ಹತ್ತಿರವಾಗಿದೆ ಅನ್ನೋ ಪ್ರಶ್ನೆ ಕೂಡ ನಮ್ಮಲ್ಲಿ ಮೂಡುತ್ತೆ… ಮೊದಲು ಪಾಕಿಸ್ತಾನದ ಭವಿಷ್ಯಕ್ಕೆ ಬರೋಣ.. ಅಂಗ್ ಭಂಗ್ ಯೋಗದಿಂದ ಪಾಕಿಸ್ತಾನ ಇಬ್ಭಾಗ ಆಗುತ್ತೆ ಅಂತಾ ಜ್ಯೋತಿಷಿಗಳು ಹೇಳ್ತಾ ಇದ್ದಾರೆ.. ಹಾಗ್ ನೋಡಿದ್ರೆ ಈ ಭವಿಷ್ಯ ನಿಜ ಆಗಿದ್ರೂ ಆಗ್ಬೋದು.. ಯಾಕಂದ್ರೆ ಸದ್ಯ ಪಾಕಿಸ್ತಾನದಲ್ಲಿ ಆಂತರಿಕ ಸಂಘರ್ಷ ಏರ್ಪಟ್ಟಿದೆ.. ಪ್ರತ್ಯಕ್ಷ ಬಲೂಚಿ ಸ್ಥಾನಕ್ಕಾಗಿ ಬಲೂಚ್ ಲಿಬರೇಶನ್ ಆರ್ಮಿಯ ಹೋರಾಟ ತೀವ್ರಗೊಂಡಿದೆ.. ಪಾಕ್ ಸೇನೆಯನ್ನ ಬಲೂಚಿಸ್ತಾನ್ ಬಂಡುಕೋರರು ಪದೇ ಪದೇ ಕಾಡ್ತಾ ಇದ್ದಾರೆ.. ಇವರನ್ನ ನಿಭಾಯಿಸೋದು ಕಷ್ಟ ಆಗಿದೆ.. ಹೀಗಾಗಿ ಅತಿ ಶೀಘ್ರದಲ್ಲಿ ಪ್ರತ್ಯಕ್ಷ ಬಲೂಚಿಸ್ತಾನ್ ಏರ್ಪಟ್ಟರೂ ಅಚ್ಚರಿ ಇಲ್ಲ… ಒಂದು ವೇಳೆ ಬಲೂಚಿಸ್ತಾನ್ ಪ್ರತ್ಯಕ್ಷ ಗೊಂಡರೆ ಪಾಕ್ ಇಬ್ಭಾಗ ಆಗುತ್ತೆ..ಪಾಕ್ ನ ಶೇಕಡಾ 40 ರಷ್ಟು ಭೂಮಿ ಬಲೂಚಿ ಸ್ತಾನ್ ಪಾಲಾಗುತ್ತೆ..

ShareTweetSendShare
Join us on:

Related Posts

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

by Shwetha
May 4, 2026
0

ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಸದ್ಯ ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ನೀಡಿರುವ ಹೇಳಿಕೆ...

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

by Shwetha
May 4, 2026
0

ಮುಂಬೈ: ಭಾರತದ ಮೇಲೆ ನಡೆದ ಸರಣಿ ವಿದೇಶಿ ಆಕ್ರಮಣಗಳು ಮತ್ತು ನೂರಾರು ವರ್ಷಗಳ ಸಂಕಷ್ಟದ ಕಾಲದಲ್ಲೂ ದೇಶದ ಮೂಲ ಗುರುತು ಹಾಗೂ ಸಾಂಸ್ಕೃತಿಕ ಆತ್ಮವನ್ನು ಸಂರಕ್ಷಿಸಿರುವುದು ಆದಿವಾಸಿ...

ಬ್ರಿಜ್ ಭೂಷಣ್ ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಆರು ಸಂತ್ರಸ್ತರಲ್ಲಿ ನಾನೂ ಒಬ್ಬಳು! : ವಿನೇಶ್ ಫೋಗಟ್

ಬ್ರಿಜ್ ಭೂಷಣ್ ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಆರು ಸಂತ್ರಸ್ತರಲ್ಲಿ ನಾನೂ ಒಬ್ಬಳು! : ವಿನೇಶ್ ಫೋಗಟ್

by Shwetha
May 4, 2026
0

ಕುಸ್ತಿ ಲೋಕದಲ್ಲಿ ಮತ್ತು ದೇಶದ ಕ್ರೀಡಾ ವಲಯದಲ್ಲಿ ಬೆಚ್ಚಿಬೀಳಿಸುವಂತಹ ಬೆಳವಣಿಗೆಯೊಂದು ನಡೆದಿದೆ. ಖ್ಯಾತ ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಅವರು ತಮಗೆ ಎದುರಾದ ಕಹಿ ಘಟನೆಯನ್ನು ಸಾರ್ವಜನಿಕವಾಗಿ...

ಮೊಬೈಲ್ ನಲ್ಲೇ ಸಿಗಲಿದೆ ಆಸ್ತಿ ಪತ್ರ: ಕಂದಾಯ ಸಚಿವರಿಂದ ಭೂ ಸುರಕ್ಷಾ ಯೋಜನೆ ಜಾರಿ

ಮೊಬೈಲ್ ನಲ್ಲೇ ಸಿಗಲಿದೆ ಆಸ್ತಿ ಪತ್ರ: ಕಂದಾಯ ಸಚಿವರಿಂದ ಭೂ ಸುರಕ್ಷಾ ಯೋಜನೆ ಜಾರಿ

by Shwetha
May 4, 2026
0

ಬೆಂಗಳೂರು: ರಾಜ್ಯದ ಜನತೆಗೆ ಕಂದಾಯ ಇಲಾಖೆಯು ಬಹುದೊಡ್ಡ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಆಸ್ತಿ ದಾಖಲೆಗಳಿಗಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಸಂಕಷ್ಟ ತಪ್ಪಲಿದ್ದು, ನೇರವಾಗಿ...

ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರಾ ನಟ ದರ್ಶನ್? ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಡಿ ಬಾಸ್ ಕಷ್ಟದ ಸರಮಾಲೆ

ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರಾ ನಟ ದರ್ಶನ್? ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಡಿ ಬಾಸ್ ಕಷ್ಟದ ಸರಮಾಲೆ

by Shwetha
May 4, 2026
0

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ತಿಂಗಳುಗಳೇ ಕಳೆದಿವೆ. ಇದೀಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ದರ್ಶನ್, ಅಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram