up election exit poll 2022 | ಯುಪಿಯಲ್ಲಿ “ಕೇಸರಿ”ಗೆ ಜಯ..!!!
ನವದೆಹಲಿ : ಉತ್ತರ ಪ್ರದೇಶ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಪ್ರರಿ ಬಾರಿಯಂತೆ ಈ ಬಾರಿಯೂ ಕೂಡ ತೀವ್ರ ಕುತೂಹಲ ಕೆರಳಿಸಿತ್ತು.
ಮುಖ್ಯವಾಗಿ ಯೋಗಿ ಆದಿತ್ಯನಾಥ್ ಗೆ ಟಕ್ಕರ್ ಕೊಡಲೇಬೇಕೆಂದು ಸಮಾಜವಾದಿ ಪಾರ್ಟಿ ನಾನಾ ಕಸರತ್ತುಗಳನ್ನ ನಡೆಸಿದೆ.
ಗ್ರೌಂಡ್ ರಿಪೋರ್ಟ್ ಪ್ರಕಾರ ಉತ್ತರ ಪ್ರದೇಶದಲ್ಲಿ ಬಿಜೆಪಿ ವರ್ಸಸ್ ಸಮಾಜವಾದಿ ಪಾರ್ಟಿ ಫೈಟ್ ಇದೆ.
ಈ ಇಬ್ಬರಲ್ಲಿ ಯಾರು ವಿನ್ ಆಗುತ್ತಾರೆ ಅನ್ನೋದು ಮಾರ್ಚ್ 10 ರಂದು ಗೊತ್ತಾಗಲಿದೆ.
ಆದ್ರೆ ಇದೀಗ ಮತದಾನ ಮುಕ್ತಾಯವಾಗಿದ್ದು, ಉತ್ತರ ಪ್ರದೇಶದಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರಕ್ಕೆ ಏರಲಿದೆ ಎಂದು ಎಲ್ಲ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಸಮೀಕ್ಷೆಗಳ ಪ್ರಕಾರ ಎರಡನೇ ಬಾರಿಗೆ ಯುಪಿಯಲ್ಲಿ ಕೇಸರಿ ಘರ್ಜಸಲಿದೆಯಂತೆ.
ಎಸ್ ಪಿ ಎಷ್ಟೇ ಪೈಪೋಟಿ ನೀಡಿದ್ರೂ ಸರಳ ಬಹುಮತ ಪಡೆಯಲು ಸಾಧ್ಯವಿಲ್ಲ ಅಂತಾ ಸಮೀಕ್ಷೆಗಳು ಸಾರಿವೆ.
ಜೊತೆಗೆ ಪ್ರಿಯಾಂಕಾ ಗಾಂಧಿ ಮತ್ತು ಮಯಾವತಿ ಮ್ಯಾಜಿಕ್ ನಡೆಯಲ್ಲ ಅಂತಾ ತಿಳಿಸಿವೆ.
ಉತ್ತರ ಪ್ರದೇಶ : ಒಟ್ಟು ಸ್ಥಾನಗಳು 403, ಬಹುಮತಕ್ಕೆ 203
ಇಂಡಿಯಾ ಟುಡೇ: ಬಿಜೆಪಿ 288-326, ಎಸ್ಪಿ+ 71-101, ಬಿಎಸ್ಪಿ 03-09, ಕಾಂಗ್ರೆಸ್ 01-03 ಇತರರು 2-3
ರಿಪಬ್ಲಿಕ್: ಬಿಜೆಪಿ 262-277, ಎಸ್ಪಿ + 119-134, ಬಿಎಸ್ಪಿ 7-15, ಕಾಂಗ್ರೆಸ್ 3-08, ಇತರರು 00
ಟೈಮ್ಸ್ ನೌ: ಬಿಜೆಪಿ 225, ಎಸ್ಪಿ 151, ಬಿಎಸ್ಪಿ 14, ಕಾಂಗ್ರೆಸ್ 04, ಇತರರು 00
ಟುಡೇಸ್ ಚಾಣಕ್ಯ : ಬಿಜೆಪಿ 294, ಎಸ್ಪಿ 105, ಬಿಎಸ್ಪಿ 2, ಕಾಂಗ್ರೆಸ್ 1, ಇತರರು 1
ಜನ್ಕೀ ಬಾತ್: ಬಿಜೆಪಿ 222-260, ಎಸ್ಪಿ 135-165, ಬಿಎಸ್ಪಿ 04-09, ಕಾಂಗ್ರೆಸ್ 01-03, ಇತರರು 3-4
up election exit poll 2022 saaksha tv