UP Election – 4 ಹಂತದ ಚುನಾವಣಾ ಪ್ರಚಾರಕ್ಕೆ ಕೊನೆ ದಿನ…
ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನ ಪೂರ್ಣಗೊಂಡಿದೆ. ಇದೀಗ ಎಲ್ಲ ರಾಜಕೀಯ ಪಕ್ಷಗಳ ಕಣ್ಣು ನಾಲ್ಕನೇ ಹಂತದತ್ತ ನೆಟ್ಟಿದೆ. ನಾಲ್ಕನೇ ಹಂತದ ಚುನಾವಣೆ ನಡೆಯಲಿರುವ ಜಿಲ್ಲೆಗಳಲ್ಲಿ ಇಂದು ಸಂಜೆಯ ವೇಳೆಗೆ ಪ್ರಚಾರ ಸ್ಥಗಿತಗೊಳ್ಳಲಿದೆ. ಹೀಗಾಗಿ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದ ಕೊನೆಯ ದಿನದಂದು ರಣಕಹಳೆ ಮೊಳಗಿಸಲು ಸಜ್ಜಾಗಿವೆ.
ಪ್ರಿಯಾಂಕಾ ಗಾಂಧಿ ಹರ್ದೋಯಿಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಇಲ್ಲಿ ಬಿಜೆಪಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಜನರಿಗೆ ಏನು ಪ್ರಯೋಜನ ನೀಡಿದೆ? ಅವರು ಧರ್ಮ, ಪಾಕಿಸ್ತಾನ ಮತ್ತು ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಾರೆ, ಆದರೆ ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಅವರು ನಮ್ಮ ಮನಸ್ಸನ್ನು ಧರ್ಮ ಮತ್ತು ಪಾಕಿಸ್ತಾನದ ಕಡೆಗೆ ತಿರುಗಿಸುತ್ತಾರೆ ಎಂದು ವಾಗ್ದಾಳಿ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಐದು ವರ್ಷಗಳಲ್ಲಿ ಗಲಭೆ ನಡೆದಿಲ್ಲ, ಸಮಾಜವಾದಿ ಪಕ್ಷದ ಕಾಲದಲ್ಲಿ ಉತ್ತರ ಪ್ರದೇಶದಲ್ಲಿ 700ಕ್ಕೂ ಹೆಚ್ಚು ಗಲಭೆಗಳು ನಡೆದಿವೆ, ಬಹುಜನ ಸಮಾಜ ಪಕ್ಷದ ಅವಧಿಯಲ್ಲಿ 364 ಗಲಭೆಗಳು ನಡೆದಿವೆ ಎಂದು ಲಕ್ನೋದಲ್ಲಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಗಲಭೆ ನಡೆದರೆ ಮುಂದಿನ 24 ಗಂಟೆಯೊಳಗೆ ತನ್ನ ಮನೆಗೆ ನೋಟಿಸ್ ಬರುತ್ತದೆ ಎಂಬುದು ಪ್ರತಿಯೊಬ್ಬ ಗಲಭೆಕೋರರಿಗೂ ಗೊತ್ತು. ಎಂದು ಯೊಗಿ ಹೇಳಿದ್ದಾರೆ.








