ಬಾಲಿವುಡ್ ನ್ನ ಆಳಲಿವೆ ದಕ್ಷಿಣದ ಈ ನಾಲ್ಕು ಚಿತ್ರಗಳು….
1 min read
ಬಾಲಿವುಡ್ ನ್ನ ಆಳಲಿವೆ ದಕ್ಷಿಣದ ಈ ನಾಲ್ಕು ಚಿತ್ರಗಳು
ಭಾರತೀಯ ಸಿನಿಮಾ ಎಂದರೆ ಬಾಲಿವುಡ್ ಎನ್ನುವ ಕಾಲವೊಂದಿತ್ತು. ಆದರೆ ಇದೀಗ ಕಾಲ ಬದಲಾಗಿದೆ, ಸೌತ್ ಫಿಲ್ಮ್ ಇಂಡಸ್ಟ್ರಿ ಚಿತ್ರಗಳು ಬಾಲಿವುಡ್ . ನ್ನ ಮಕಾಡೆ ಮಲಗಿಸುವಂತೆ ಮಾಡಿವೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಚಿತ್ರಗಳು ಮಾತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿವೆ.
ಕರೋನಾ ಕಾಲದ ನಂತರ ಥಿಯೇಟರ್‌ಗಳು ಓಪನ್ ಆದಾಗ, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ ದಿ ರೈಸ್’ ಚಿತ್ರ ಬಾಕ್ಸ್ ಆಫೀಸ್ ನ್ನ ಶೇಕ್ ಆಡಿಸಿತ್ತು. RRR ಸಿನಿಮಾ ಬಾಲಿವುಡ್ ನಲ್ಲಿ ಬಿರುಗಾಳಿಯನ್ನೆ ಸೃಷ್ಠಿಸಿದೆ. ಇದು ಕೇವಲ ಆರಂಭ ಅಷ್ಟೆ ಇನ್ನೂ ಸಾಲು ಸಾಲು ಚಿತ್ರಗಳು ಥಿಯೇಟರ್ ಕದ ತಟ್ಟಲು ಸಿದ್ಧವಾಗಿವೆ. ಈ ಚಿತ್ರಗಳ ಬಿಡುಗಡೆಯ ನಂತರ ಬಾಲಿವುಡ್ ಮತ್ತಷ್ಟು ಬೆಚ್ಚಿ ಬೀಳುವುದಂತೂ ಖಂಡಿತಾ…
ಕೆಜಿಎಫ್: ಚಾಪ್ಟರ್ 2
‘ಕೆಜಿಎಫ್: ಚಾಪ್ಟರ್ 2’ – 2022 ರಲ್ಲಿ ಬಿಡುಗಡೆಯಾಗುತ್ತಿರುವ ಅತಿದೊಡ್ಡ ಚಲನಚಿತ್ರಗಳಲ್ಲಿ ಒಂದು. ಈ ಚಿತ್ರದ ಮೂಲಕ ರಾಕಿ ಭಾಯ್ ಮತ್ತೊಮ್ಮೆ ಗಲ್ಲಾಪೆಟ್ಟಿಗೆಯಲ್ಲಿ ಸಂಚಲನ ಮೂಡಿಸಲಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದ ಮೊದಲ ಭಾಗವು 2018 ರಲ್ಲಿ ಬಿಡುಗಡೆಯಾಗಿ ದಾಖಲೆಯ ಬರೆದಿತ್ತು. ಅದೇ ರೀತಿ ಚಿತ್ರದ ಎರಡನೇ ಭಾಗವೂ ಬಾಕ್ಸ್ ಆಫೀಸ್ ನಲ್ಲಿ ಸಂಚಲನವನ್ನೇ ಸೃಷ್ಟಿಸಲಿದೆ. ಚಿತ್ರ ಏಪ್ರಿಲ್ 14 ರಂದು ಬಿಡುಗಡೆಯಾಗುತ್ತಿದ್ದು, ಇದರಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಹೊರತುಪಡಿಸಿ ಸಂಜಯ್ ದತ್, ರವೀನಾ ಟಂಡನ್ ಮಾಳವಿಕಾ ಅವಿನಾಶ್ ಮುಂತಾದ ನಟರು ಕಾಣಿಸಿಕೊಂಡಿದ್ದಾರೆ.
ಬೀಸ್ಟ್
ಈ ಪಟ್ಟಿಯಲ್ಲಿ ತಮಿಳು ಸ್ಟಾರ್ ನಟ ವಿಜಯ್ ಅಭಿನಯದ ಬೀಸ್ಟ್ ಚಿತ್ರವೂ ಹೊಸದಾಗಿ ಸೇರ್ಪಡೆಯಾಗಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿಜಯ್‌ಗೆ ಜೋಡಿಯಾಗಿ ಪೂಜಾ ಹೆಗಡೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಏಪ್ರಿಲ್ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ದಳಪತಿ ವಿಜಯ್ ಮತ್ತು ರಾಕಿಂಗ್ ಸ್ಟಾರ್ ಯಶ್ ನಡುವೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗಲಿದೆ. ಏಕೆಂದರೆ ‘ಕೆಜಿಎಫ್ 2’ ತೆರೆಕಾಣುವ ಒಂದು ದಿನದ ಮೊದಲು ಬೀಸ್ಟ್ ಬಿಡುಗಡೆಯಾಗಲಿದೆ.
ಆದಿಪುರುಷ್
ಪ್ರಭಾಸ್ ಸೌತ್ ಇಂಡಸ್ಟ್ರಿಯಲ್ಲಿ ಜನಪ್ರಿಯ ನಟ, ಆದರೆ ‘ಬಾಹುಬಲಿ’ ನಂತರ ಮತ್ತೊಂದು ಹಿಟ್ ಚಿತ್ರ ನೀಡಲು ಹಾತೊರೆಯುತ್ತಿದ್ದಾರೆ. ‘ಆದಿಪುರುಷ’ ಚಿತ್ರದಲ್ಲಿ ಪ್ರಭಾಸ್ ರಾಮನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ 12 ಜನವರಿ 2023 ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಪ್ರಭಾಸ್ ಜೊತೆ ಸೈಫ್ ಅಲಿ ಖಾನ್ ಮತ್ತು ಕೃತಿ ಸನನ್ ಕಾಣಿಸಿಕೊಳ್ಳಲಿದ್ದಾರೆ.
ಸಲಾರ್
ಪ್ರಭಾಸ್ ಅವರ ಮುಂಬರುವ ಚಿತ್ರಗಳಲ್ಲಿ ‘ಸಾಲರ್’ ಕೂಡ ಒಂದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಕಾಣಿಸಿಕೊಳ್ಳಲಿದ್ದಾರೆ. ಏಪ್ರಿಲ್ 14 ರಂದು ಹಲವು ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಏಪ್ರಿಲ್ 14 ರಂದು ಯಶ್ ನಟನೆಯ ‘ಕೆಜಿಎಫ್ 2’ ಬಿಡುಗಡೆಯಾಗಲಿದೆ ಹಾಗಾಗಿ ಸಲಾರ್ ಚಿತ್ರ ಮುಂದಕ್ಕೆ ಹೋಗಿದೆ. ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಬಿಡುಗಡೆಯಾಗಿಲ್ಲ.