ಮತ್ತೆ ನಿರ್ದೇಶಕರ ಕ್ಯಾಪ್ ಧರಿಸಲಿದ್ದಾರೆ ರಿಯಲ್ ಸ್ಟಾರ್ ಉಪ್ಪಿ
ಸ್ಯಾಂಡಲ್ ವುಡ್ ನಲ್ಲಿ ನಟನಾಗಿ ಹೆಚ್ಚು ಪ್ರಖ್ಯಾತಿ ಗಳಿಸಿರುವ ಉಪ್ಪಿ ಅವರ ಡೈರೆಕ್ಷನ್ ನಲ್ಲಿಯೂ ಅನೇಕ ಹಿಟ್ ಸಿನಿಮಾಗಳು ಮೂಡಿಬಂದಿವೆ.. ನಟ ಉಪೇಂದ್ರ ಅವವರ ನಿರ್ದೇಶನದಲ್ಲಿ ಓಂ , ಶ್… ನಂತಹ ಎವರ್ ಗ್ರೀನ್ ಮರೆಯಲಾರದಂತಹ ಸಿನಿಮಾಗಳು ತೆರೆಕಂಡಿದ್ದು, ಇಂದಿಗೂ ಜನ ಅದೇ ಕ್ರೇಜ್ ನಿಂದ ಈ ಸಿನಿಮಾಗಳನ್ನ ನೋಡುತ್ತಾರೆ.. ಉಪ್ಪಿ ಅವರು ಎಷ್ಟು ಅದ್ಭುತ ನಟರೋ ಅದಕ್ಕಿಂತ ಹೆಚ್ಚು ನಿರ್ದೇಶನದಲ್ಲಿ ನಿಪುಣರು..
ಸದ್ಯ ಉಪ್ಪಿ ನಿರ್ದೇಶನದಲ್ಲಿ ಮುಂದಿನ ಸಿನಿಮಾ ಯಾವಾಗ ಬರುತ್ತೆ ಅಂತ ಅಭಿಮಾನಿಗಳು ಕಾಯುತ್ತಿರೋ ಹೊತ್ತಲೇ ಒಂದು ಗುಡ್ ನ್ಯೂಸ್ ಸಿಕ್ಕಿದೆ.. ಪ್ರಸ್ತುತ ಕೆ.ಮಾದೇಶ್ ನಿರ್ದೇಶನದ ಲಗಾಮ್ ಚಿತ್ರದ ಚಿತ್ರೀಕರಣದಲ್ಲಿ, ಆರ್ ಚಂದ್ರು ಸಾರಥ್ಯದ ಕಬ್ಜದಲ್ಲಿ ಉಪ್ಪಿ ಬ್ಯುಸಿಯಾಗಿದ್ದಾರೆ. ಈ ನಡುವೆ ಉಪ್ಪಿ ಸೀಘ್ರವೇ ಡೈರೆಕ್ಷನ್ ಗೆ ಮರಳಲಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ..
ಶಿವಣ್ಣನ ಬರ್ತ್ ಡೇ ಮುಂಚೆಯೇ ಮತ್ತೊಂದು ಭರ್ಜರಿ ಗುಡ್ ನ್ಯೂಸ್
ಇತ್ತೀಚೆಗೆ ಫೇಸ್ ಬುಕ್ ಲೈವ್ ಗೆ ಬಂದು ತಮ್ಮ ನಿರ್ದೇಶನದ ಹೊಸ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಬಳಿಕ ಚಿತ್ರರಂಗದ ಚಟುವಟಿಕೆ ಮತ್ತೆ ಪ್ರಾರಂಭವಾಗಿದ್ದು, ಸದ್ಯ ನಾನು ಲಗಾಮ್ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದೇನೆ. ಜುಲೈ 20ರ ನಂತರ ಆರ್.ಚಂದ್ರು ಅವರ ನಿರ್ದೇಶನದ ಕಬ್ಜ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಇದಕ್ಕಾಗಿ ಸೆಟ್‌ಗಳು ಸಿದ್ಧವಾಗುತ್ತಿದೆ. ಶೀಘ್ರದಲ್ಲೇ ಇದರ ವಿಶೇಷ ವಿಡಿಯೊವನ್ನು ಹಂಚಿಕೊಳ್ಳುತ್ತೇನೆ. ಲಾಕ್‌ಡೌನ್ ಸಂದರ್ಭದಲ್ಲಿ ಹಲವು ಕಥೆಗಳನ್ನು ಸಿದ್ಧಪಡಿಸಿದ್ದೇನೆ. ನನಗೇ ಥ್ರಿಲ್ ಆದ ಒಂದು ವಿಷಯ ದೊರಕಿದೆ. ಶೀಘ್ರದಲ್ಲೇ ನನ್ನ ನಿರ್ದೇಶನದ ಹೊಸ ಚಿತ್ರ ಘೋಷಿಸುತ್ತೇನೆ ಎಂದಿದ್ದಾರೆ.
ಉಪ್ಪಿ ಸಿನಿಮಾ ನಿರ್ದೇಶಿಸಲಿದ್ದಾರೆ ಅನ್ನೋ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅಮದ್ಹಾಗೆ ಉಪ್ಪಿ ಸಿನಿಮಾರಂಗದ ಜೊತೆಗೆ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.. ಅವರ ಪಕ್ಷ ಪ್ರಜಾಕೀಯದ ಬಗ್ಗೆಯೂ ಲೈವ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಉಪ್ಪಿ ‘ಪ್ರಜಾಕೀಯ ಪಕ್ಷದಲ್ಲಿ ಜನರೇ ಹೈಕಮಾಂಡ್. ನಾನು ಒಬ್ಬ ಸಂಸ್ಥಾಪಕ ಅಧ್ಯಕ್ಷನಾಗಿ, ಕಾರ್ಮಿಕನಾಗಿ ಕೆಲಸ ಮಾಡುತ್ತೇನೆ. ಪ್ರಜಾಕೀಯ ಮತದಾರರ ಪಕ್ಷ. ಇಲ್ಲಿ ಯಾರನ್ನೂ ನಂಬುವುದು ಬೇಡ.
ನಿಮ್ಮನ್ನು ನೀವು ನಂಬಿ. ನಾನು ಬದಲಾವಣೆ ತರಬಲ್ಲೆ ಎಂದು ನಂಬಿದರೆ ಅದುವೇ ನಿಜವಾದ ಬದಲಾವಣೆ. ಪ್ರಜಾಕೀಯ ಪಕ್ಷದಿಂದ ಚುನಾವಣೆಗೆ ನಿಂತು ಅವರು ಸರಿಯಾಗಿ ಕೆಲಸ ಮಾಡದೇ ಇದ್ದರೆ ಅವರನ್ನು ಕೆಳಗಿಳಿಸಲು ಜನರ ಜೊತೆಗೆ ನಾನೂ ಇರುತ್ತೇನೆ. ಇಂತಹ ಬದಲಾವಣೆ ಆದರೆ ಅದುವೇ ನಿಜವಾದ ಪ್ರಜಾಪ್ರಭುತ್ವ. ಜನರು ಆಯ್ಕೆ ಮಾಡಿದ ಅಭ್ಯರ್ಥಿ ಸರಿಯಾಗಿ ಕೆಲಸ ಮಾಡದೇ ಇದ್ದರೆ ಆತನನ್ನು ಅನರ್ಹಗೊಳಿಸುವ ಅಧಿಕಾರವನ್ನು ಜನರ ಕೈಗೇ ನೀಡುವ ಕಾನೂನು ಬರಬೇಕು ಎಂದಿದ್ದಾರೆ. ಅಲ್ಲದೇ ಪ್ರಜಾಕೀಯದ ಉದ್ದೇಶ, ಸಿದ್ಧಾಂತ ಮನೆಮನೆಗೂ ತಲುಪಬೇಕು ಎನ್ನುವುದು ನನ್ನ ಆಸೆ. ಇದಕ್ಕಾಗಿ ಕರ್ನಾಟಕದಾದ್ಯಂತ ಯಾತ್ರೆ ಆಯೋಜಿಸಲು ಯೋಜನೆ ಸಿದ್ಧಪಡಿಸುತ್ತಿದ್ದೇನೆ ಎಂದಿದ್ದಾರೆ.
ಇದೇ ವೇಳೆ ಪೆಟ್ರೋಲ್ ಬೆಲೆ ಏರಿಕೆ ಕುರಿತಾದ ನೆಟ್ಟಿಗರ ಪ್ರಶ್ನೆಗೆ ಉತ್ತರಿಸಿದ ಉಪ್ಪಿ ಒಂದು ಪಕ್ಷ ಅಧಿಕಾರದಲ್ಲಿದ್ದಾಗ ಪೆಟ್ರೋಲ್ ಬೆಲೆ ಏರಿದಾಗ ಇನ್ನೊಂದು ಪಕ್ಷ ಗಲಾಟೆ ಮಾಡುತ್ತವೆ. ಇದೇ ಪಕ್ಷ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಬೆಲೆ ಏರಿದಾಗ ಮತ್ತೊಂದು ಪಕ್ಷ ಗಲಾಟೆ ಮಾಡುತ್ತದೆ. ಈ ಸಮಸ್ಯೆಗೆ ನಾವೇ ಕಾರಣಕರ್ತರು. ನಮ್ಮ ಹಕ್ಕನ್ನು ಜಾತಿ, ಧರ್ಮ, ಹಣ, ಅದ್ಧೂರಿ ಪ್ರಚಾರಕ್ಕೆ ಮಾರಾಟ ಮಾಡಿದ್ದೇವೆ. ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಚುನಾವಣೆ ಸಂದರ್ಭದಲ್ಲಿ ಜನರ ಆಲೋಚನೆಯೇ ಬೇರೆ ಇರುತ್ತದೆ. ಯಾರು ಗೆಲ್ಲುತ್ತಾರೆ ಎಂದೇ ಜನ ಚಿಂತಿಸುತ್ತಾರೆ. ಬೇರೆ ಪಕ್ಷದವರು ಮತ ಕೇಳಲು ಬಂದಾಗ ನಿಮ್ಮ ಬೇಡಿಕೆಗಳನ್ನು ಅವರ ಮುಂದೆ ಇಡಿ. ಇದನ್ನು ವಿಡಿಯೊ ಮಾಡಿ. ಪ್ರಜೆಗಳು ಕೆಲವರನ್ನು ಗೆಲ್ಲಿಸಿ ಪ್ರಭುಗಳನ್ನಾಗಿ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವವಲ್ಲ. ಜನರೇ ಗೆಲ್ಲುವುದು ಪ್ರಜಾಪ್ರಭುತ್ವ’ ಎಂದಿದ್ದಾರೆ.