ADVERTISEMENT
Sunday, September 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಉಪೇಂದ್ರ ನಿಜವಾದ ‘ಹೆಂಗ್ ಪುಂಗ್ ಲೀ’ ; ಉಪ್ಪಿ ಫ್ಯಾನ್ ವರ್ಸಸ್ ಅನುಪಮಾ

admin by admin
July 8, 2020
in Cinema, Newsbeat, Samagra karnataka, ಮನರಂಜನೆ
Share on FacebookShare on TwitterShare on WhatsappShare on Telegram

ಬೆಂಗಳೂರು : ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಹಾಗೂ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಅನುಪಮಾ ಶೆಣೈ ಅವರು ಸ್ಯಾಂಡಲ್ ವುಡ್ ನ ಬುದ್ಧವಂತ, ನಿರ್ದೇಶಕ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ವಿರುದ್ಧ ಸರಣಿ ಟ್ವೀಟ್ ಗಳ ಮೂಲಕ ಕಿಡಿಕಾರಿದ್ದಾರೆ. ಇದು ಟ್ವಿಟ್ಟರ್ ನಲ್ಲಿ ಬಹು ದೊಡ್ಡ ಟ್ವೀಟ್ ವಾರ್ ಗೆ ಕಾರಣವಾಗಿದೆ. ಅನುಪಮಾ ಅವರ ವಿರುದ್ಧ ಉಪ್ಪಿ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.

ಅಂದಹಾಗೆ ಈ ವಾರ್ ಶುರುವಾಗಲು ಕಾರಣ ಜುಲೈ 6 ರಂದು ಅನುಪಮಾ ಅವರು ಮಾಡಿದ ಟ್ವೀಟ್..

Related posts

bigg-boss-kannada-kiccha-sudeep-class-to-modern-manja-and-agni-boys-in-new-promo

ಕಲರ್ಸ್ ಕನ್ನಡದ ಹೊಸ ಪ್ರೋಮೋ ಸಖತ್ ವೈರಲ್: ವಾರದ ಪಂಚಾಯಿತಿಯ ಕಿಚ್ಚನ ಖಡಕ್ ಕ್ಲಾಸ್

September 20, 2026
upendra-birthday-next-level-movie-first-look-released-tarun-shivappa

ರಿಯಲ್ ಸ್ಟಾರ್’ ಉಪೇಂದ್ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್: ತರುಣ್ ಶಿವಪ್ಪ ನಿರ್ಮಾಣದ ‘ನೆಕ್ಸ್ಟ್ ಲೆವೆಲ್’ ಫಸ್ಟ್ ಲುಕ್ ರಿಲೀಸ್!

September 20, 2026

ಅಂದಿನ ಈ ಟ್ವೀಟ್ ಅನುಪಮಾ ಅವರು ತಮ್ಮ ಟ್ವಿಟ್ಟರ್ ನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿ, ‘ಫೇಸ್ ಬುಕ್ ನಲ್ಲಿ ಈ ಚಿತ್ರ ನೋಡೋಕ್ಕೆ ಸಿಕ್ಕಿತು. ಈ ರೀತಿಯಾಗಿ ಹರಡುತ್ತಿರುವುದು ಕೊರೊನಾ, ಪ್ರಜಾಕೀಯ ಅಲ್ಲ’ ಎಂದು ವ್ಯಂಗ್ಯವಾಡಿದ್ದರು.

ಇದನ್ನು ಕಂಡ ಉಪ್ಪಿ ಅಭಿಮಾನಿಗಳು ಪ್ರಜಾಕೀಯ ಹರಡಿದರೆ ನಿಮಗೇನು ತೊಂದರೆ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅನಪಮಾ ಅವರು, ಕೊರೊನಾಗೂ ಪ್ರಜಾಕೀಯಕ್ಕೂ ಇರುವ ವ್ಯತ್ಯಾಸ? ಕೊರೊನಾ ಬರದಂತೆ ತಡೆಗಟ್ಟಲು ಮಾಸ್ಕ್ ಹಾಕಿಕೊಳ್ಳಬೇಕು. ಪ್ರಜಾಕೀಯ ಸಭ್ಯತೆ, ಒಳ್ಳೆಯತನದ ಮಾಸ್ಕ್ (ಮುಖವಾಡ) ಧರಿಸಿಕೊಂಡು ನಮ್ಮ ಹತ್ತಿರ ಬರುತ್ತಿದೆ. ಎರಡೂ ಅಪಾಯ. ಇಬ್ಬರ ಬಗ್ಗೆಯೂ ಎಚ್ಚರಿಕೆಯಿಂದಿರಿ ಎಂದಿದ್ದರು.

ಅಲ್ಲದೆ ‘ಕೊರೊನಾ ಹೇಗೆ ಚೀನಾದ ಲ್ಯಾಬ್ ಗಳಲ್ಲಿ ಇತ್ತೋ ಹಾಗೇ ಪ್ರಜಾಕೀಯ ಸಹ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಇದೆ. ಸಮುದಾಯಕ್ಕೆ ಹರಡುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಬಿಜೆಪಿ ಸರಕಾರಕ್ಕೆ ಹೇಗೆ ಕರೊನಾ ತಡೆಗಟ್ಟಲು ಸಾಧ್ಯವಾಗಿಲ್ಲವೋ ಅದೇ ರೀತಿ ಪ್ರಜಾಕೀಯ ಎಂಬ ವೈರಸ್ ಅನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ’ ಎಂದು ಅಭಿಮಾನಿಗಳ ಟೀಕೆಗೆ ಉತ್ತರಿಸಿದ್ದರು.

ಇಷ್ಟಕ್ಕೆ ಸುಮ್ಮನಾಗದ ಅನುಪಮಾ ಅವರು ಉಪೇಂದ್ರರ ಸಿನೆಮಾಗಳೇ ಅವರ ಬಂಡವಾಳವನ್ನು ತಿಳಿಸುತ್ತದೆ. ‘ಓಂ’ ಅಂತ ಶಾಂತಿ ಮಂತ್ರದ ಹೆಸರಿಟ್ರು, ಚಿತ್ರದಲ್ಲಿದ್ದಿದ್ದು ಬರೀ ಹಿಂಸೆ. A’ ಅಂತ ಹೆಸರಿಟ್ರು, ಪಡ್ಡೆ ಹುಡುಗರೆಲ್ಲ ಬ್ಲೂಫಿಲ್ಮ್ ಗೆ ಕಾದು ಕೊನೆಗೆ ‘ಏನಿಲ್ಲ ಏನಿಲ್ಲ’ ಅನ್ನುವಂತಾಯಿತು. ಅದೇ ರೀತಿ ‘ಪ್ರಜಾಕೀಯ’. ಅದಕ್ಕಿಂತ ದೊಡ್ಡ ಮೋಸ ಮತ್ತೊಂದಿರೋದಿಲ್ಲ ಕಾದುನೋಡಿ ಎಂದು ಕಿಚಾಯಿಸಿದರು.

ಇದರಿಂದ ಮತಷ್ಟು ಕೆರಳಿದ ಉಪ್ಪಿ ಅಭಿಮಾನಿಗಳು, ಅನುಪಮ ತರಾಟೆಗೆ ತೆಗೆದುಕೊಂಡು ಪ್ರಶ್ನೆಗಳ ಸುರಿಮಳೆಗೈದರು.
ಪಬ್-ಜಿ ಮತ್ತು ಪ್ರಜಾಕೀಯ ಎರಡೂ ಜಾಲತಾಣದಲ್ಲಿ ನಡೆಯುತ್ತಿರುವ ಜನಪ್ರಿಯ ಆಟಗಳು. ಎರಡರಿಂದಲೂ ಯುವಜನತೆಯ ಟೈಮ್ ವೇಸ್ಟ್. ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಬುರುಡೆ ಬಿಡೋದನ್ನು ರಾಜಕೀಯವಾಗಿ ಕಾಂತ್ರಿ ಅಂತ ಭಾವಿಸೋದೂ ಪಬ್-ಜಿಯಲ್ಲಿ ಆಡಿದ್ದೇ ನಿಜವಾದ ಯುದ್ಧ ಅಂತ ಭಾವಿಸೋದು ಎರಡೂ ಒಂದೆ ಎಂದು ಅಭಿಮಾನಿಗಳ ವಿರುದ್ಧ ಅನುಪಮಾ ಕಿಡಿಕಾರಿದ್ದಾರೆ.

ಇದಕ್ಕೆ ಪ್ರತಿಯಾಗಿ ಉಪ್ಪಿ ಅಭಿಮಾನಿಗಳು ನೀವು ನಟನೆ ಮಾಡಿಲ್ಲ ನಿಜ. ನೀವು ಪೋಲಿಸ್ ಅಧಿಕಾರಿ ಆಗಿದ್ದಾಗ ಜನಕ್ಕೆ ಏನು ಮಾಡಿಲ್ಲ ಅಂತ ಸ್ಪಷ್ಟವಾಗಿ ಗೊತ್ತು. ಏಕೆಂದರೆ ಜನರು ಕೆಲಸ ನಿಮ್ಮಿಂದ ಆಗೇ ಇಲ್ಲಾ. ಆದರೆ ಉಪ್ಪಿ ಅದನ್ನ ಮಾಡಿದ್ದಾರೆ. ನೀವೊಬ್ಬರು ಪೋಲಿಸ್ ಅಧಿಕಾರಿಯಾಗಿದ್ದಾಗ ನಿಮ್ಮ ನಡೆಯ ಬಗ್ಗೆ ಗೌರವ ಇತ್ತು. ಆದರೆ, ಪ್ರಜಾಕೀಯ ಅಂತ ಒಳ್ಳೆಯ ವಿಚಾರ ಇರುವ ಪಕ್ಷದ ಬಗ್ಗೆ ಮಾತಾಡ್ತಿರಾ ಅಂದ್ರೆ, ನಿಮ್ಮ ರಾಜಕೀಯ ಕೊಳಕು ಮನಸ್ಥಿತಿ ಏನೂ ಅಂತ ತೋರಿಸ್ತಿದೆ ಎನ್ನುತ್ತಾ ಹೀಗೆ ಅನೇಕ ಉಪ್ಪಿ ಅಭಿಮಾನಿಗಳು ಅನುಪಮಾ ವಿರುದ್ಧ ಸಾಲು ಸಾಲಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಉಪ್ಪಿ ಅಭಿಮಾನಿಗಳ ಈ ಟ್ವೀಟ್ ಗಳಿಗೆ ಉತ್ತರಿಸುತ್ತಾ ಅನುಪಮಾ ಅವರು, ಉಪೇಂದ್ರ ಅವರನ್ನು ನಿಜವಾದ ಹೆಂಗ್ ಪುಂಗ್ ಲೀ ಎಂದು ಕರೆದಿದ್ದಾರೆ.
ತಮ್ಮ ಟ್ವೀಟ್ ನಲ್ಲಿ, “ನಿಜವಾಗಿಯೂ #ಹೆಂಗ್_ಪುಂಗ್_ಲೀ ಅಂತ ಕರೆಯಬೇಕಾಗಿರೋದು ಚಕ್ರವರ್ತಿ ಸೂಲಿಬೆಲೆಯವರನ್ನಲ್ಲ, ಉಪೇಂದ್ರ ಅವರನ್ನು!!”
“ಚಕ್ರವರ್ತಿ ಸೂಲಿಬೆಲೆಯವರು ಏನೇ ಮಾತಾಡಿದ್ರೂ ತರ್ಕಬದ್ಧವಾಗಿ ಮಾತಾಡ್ತಾರೆ. ಉಪೇಂದ್ರ ಹೇಳುವ ಮಾತುಗಳಲ್ಲಿ ತರ್ಕವೂ ಇಲ್ಲ, ಬದ್ಧತೆಯೂ ಇಲ್ಲ! ರಿಯಲ್ ಸ್ಟಾರ್ ಅಲ್ಲ, #ರಿಯಲ್_ಹೆಂಗ್_ಪುಂಗ್_ಲೀ!”

“ಉಪೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಬುರುಡೆ ಬಿಡೋದನ್ನು ರಾಜಕೀಯವಾಗಿ ಕಾಂತ್ರಿ ಅಂತ ಭಾವಿಸೋದೂ ಪಬ್-ಜಿಯಲ್ಲಿ ಆಡಿದ್ದೇ ನಿಜವಾದ ಯುದ್ಧ ಅಂತ ಭಾವಿಸೋದು ಎರಡೂ ಒಂದೆ!”
“ನಾನು ಹೇಳ್ತಾ ಇರೋದನ್ನು ಕಲ್ಲಿನಲ್ಲಿ ಕೆತ್ತಿ ಇಡಿ. ಪ್ರಜಾಕೀಯ ಪಕ್ಷವಾಗಿ ಏನಾದ್ರು ಬೆಳೆದ್ರೆ ಅದಕ್ಕಿಂತ ಕೊಳಕು ರಾಜಕೀಯ ಮಾಡುವ ಪಕ್ಷ ಮತ್ತೊಂದಿರೋದಿಲ್ಲ, ನೆನಪಿಡಿ!!” ಎಂದು ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ ಅನುಪಮಾ.

Tags: anupamaprajakiyaUpendra
ShareTweetSendShare
Join us on:

Related Posts

bigg-boss-kannada-kiccha-sudeep-class-to-modern-manja-and-agni-boys-in-new-promo

ಕಲರ್ಸ್ ಕನ್ನಡದ ಹೊಸ ಪ್ರೋಮೋ ಸಖತ್ ವೈರಲ್: ವಾರದ ಪಂಚಾಯಿತಿಯ ಕಿಚ್ಚನ ಖಡಕ್ ಕ್ಲಾಸ್

by admin
September 20, 2026
0

ಕಲರ್ಸ್ ಕನ್ನಡದ ಹೊಸ ಪ್ರೋಮೋ ಸಖತ್ ವೈರಲ್: ವಾರದ ಪಂಚಾಯಿತಿಯ ಕಿಚ್ಚನ ಖಡಕ್ ಕ್ಲಾಸ್ ಒಳಗೊಂಡ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ...

upendra-birthday-next-level-movie-first-look-released-tarun-shivappa

ರಿಯಲ್ ಸ್ಟಾರ್’ ಉಪೇಂದ್ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್: ತರುಣ್ ಶಿವಪ್ಪ ನಿರ್ಮಾಣದ ‘ನೆಕ್ಸ್ಟ್ ಲೆವೆಲ್’ ಫಸ್ಟ್ ಲುಕ್ ರಿಲೀಸ್!

by admin
September 20, 2026
0

ಬೆಂಗಳೂರು: ‘ರಿಯಲ್ ಸ್ಟಾರ್’ ಉಪೇಂದ್ರ ಅವರಿಗೆ ಇಂದು (ಸೆಪ್ಟೆಂಬರ್ 18) ಹುಟ್ಟುಹಬ್ಬದ ಸಂಭ್ರಮ. ತಮ್ಮ ವಿಶಿಷ್ಟ ಆಲೋಚನೆ ಹಾಗೂ ಚಿತ್ರಕಥೆಗಳ ಮೂಲಕ ದಕ್ಷಿಣ ಭಾರತದಲ್ಲೇ ಹೊಸ ಅಲೆ...

pa-ranjith-vettuvam-movie-kiccha-sudeep-voice-over-kannada

ಪಾ. ರಂಜಿತ್ ನಿರ್ದೇಶನದ ಅದ್ಧೂರಿ ಆಕ್ಷನ್ ಸಿನಿಮಾ ‘ವೆಟ್ಟುವಮ್’; ಕನ್ನಡದಲ್ಲಿ ಕಿಚ್ಚ ಸುದೀಪ್ ಧ್ವನಿ

by admin
September 20, 2026
0

ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಪಾ. ರಂಜಿತ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಅಪೋಕ್ಯಾಲಿಪ್ಟಿಕ್ ಆಕ್ಷನ್ ಸಿನಿಮಾ ‘ವೆಟ್ಟುವಮ್’ ಸಿನಿಪ್ರಿಯರಲ್ಲಿ ಭಾರಿ ಕುತೂಹಲ...

natural-star-nani-the-paradise-movie-press-meet-bengaluru

“ಬೆಂಗಳೂರಿಗೆ ಬಂದರೆ ಸ್ವಂತ ಮನೆಗೆ ಬಂದಂತೆ ಭಾಸವಾಗುತ್ತದೆ”; ‘ನ್ಯಾಚುರಲ್ ಸ್ಟಾರ್’ ನಾನಿ ಮನದಾಳದ ಮಾತು, ‘ಪ್ಯಾರಡೈಸ್’ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್!

by admin
September 20, 2026
0

​ಬೆಂಗಳೂರು: ತೆಲುಗು ಚಿತ್ರರಂಗದ ‘ನ್ಯಾಚುರಲ್ ಸ್ಟಾರ್’ ಖ್ಯಾತಿಯ ನಟ ನಾನಿ ಅಭಿನಯದ ಬಹುನಿರೀಕ್ಷಿತ ನೂತನ ಆ್ಯಕ್ಷನ್ ಡ್ರಾಮಾ The Paradise ಸಿನಿಮಾದ ಪ್ರಚಾರಾರ್ಥವಾಗಿ ಬೆಂಗಳೂರಿನಲ್ಲಿ ಅದ್ಧೂರಿ ಪತ್ರಿಕಾಗೋಷ್ಠಿ...

jio-home-offers-free-amazon-prime-lite-for-one-year-on-30mbps-and-100mbps-plans

ಜಿಯೋಹೋಮ್‌ ಬಳಕೆದಾರರಿಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಲೈಟ್ ಉಚಿತ

by admin
September 20, 2026
0

* 3-ಇನ್-1 (ಟಿವಿ + ಒಟಿಟಿ + ವೈ-ಫೈ) ಯೋಜನೆಯ ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರು ಪ್ರಯೋಜನವನ್ನು ಪಡೆಯುತ್ತಾರೆ * ಅಮೆಜಾನ್ ಪ್ರೈಮ್ ವಿಡಿಯೋದೊಂದಿಗೆ ಉಚಿತ ಮತ್ತು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram