ಕನ್ನಡದ ಮಟ್ಟಿಗೆ ಮತ್ತೊಂದು ಹವಾ ಸೃಷ್ಟಿಸಿದ ಕಬ್ಜ ಟೀಸರ್….
ಕನ್ನಡದ ಮಟ್ಟಿಗೆ ಮತ್ತೊಂದು ಬಿಗ್ ಬಜೆಟ್ ನಾ ಬಿಗ್ ಸಿನಿಮಾ ತೆರೆಗೆ ಬರಲಿದೆ ಎನ್ನವುದನ್ನ ಇಂದು ಬಿಡುಗಡೆಯಾಗಿರುವ ಕಬ್ಜ ಟೀಸರ್ ಪ್ರೂವ್ ಮಾಡಿದೆ.
ಆರ್ ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಕನ್ನಡದ ಮತ್ತೊಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಮತ್ತೊಮ್ಮೆ ದೇಶವೇ ತಿರುಗಿನೋಡುವಂತಹ ಚಿತ್ರವೊಂದು ಸ್ಯಾಂಡಲ್ ವುಡ್ ನಲ್ಲಿ ತಯಾರಾಗುತ್ತಿದೆ.
ಸೆಪ್ಟೆಂಬರ್ 18ರಂದು ‘ರಿಯಲ್ ಸ್ಟಾರ್’ ಉಪೇಂದ್ರ ಅವರ ಜನ್ಮದಿನ. ಆ ಪ್ರಯುಕ್ತ ಒಂದು ದಿನ ಮುನ್ನವೇ, ‘ಕಬ್ಜ’ ಟೀಸರ್ ಅನಾವರಣ ಮಾಡಲಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ಶ್ರೀಯಾ ಶರಣ್ ನಟಿಸುತ್ತಿದ್ದು, ಭಾರತದ ಪ್ರಮುಖ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯ ಜೊತೆ ಜೊತೆಗೆ ಒರಿಯಾ ಮತ್ತು ಮರಾಠಿಯಲ್ಲಿ ಭಾಷೆಯಲ್ಲಿಯೂ ಬಿಡುಗಡೆಯಾಗುತ್ತಿದೆ.
ಬೆಂಗಳೂರಿನ ಓರಾಯನ್ ಮಾಲ್ನಲ್ಲಿ ನಡೆದ ಟೀಸರ್ ಕಾರ್ಯಕ್ರಮದಲ್ಲಿ ರಾಣಾ ದಗ್ಗುಬಾಟಿ ಮತ್ತು ಶಿವರಾಜ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ಕಬ್ಜ ಚಿತ್ರದ ಟೀಸರ್ ಅನ್ನ ಬಿಡುಗಡೆ ಮಾಡಿದ್ದಾರೆ.
ಟೀಸರ್ ಬಿಡುಗಡೆ ನಂತರ ಮಾತನಾಡಿದ ದಗ್ಗುಬಾಟಿ ‘ಈ ಟೀಸರ್ ರಿಲೀಸ್ ಮಾಡಿದ್ದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ಈ ರೀತಿ ದಕ್ಷಿಣ ಭಾರತದ ಸಿನಿಮಾಗಳ ಶಕ್ತಿ ಇಡೀ ಪ್ರಪಂಚಕ್ಕೆ ತಿಳಿಯಬೇಕು. ಕಬ್ಜ ಚಿತ್ರತಂಡಕ್ಕೆ ಶುಭವಾಗಲಿ. ಉಪೇಂದ್ರ, ಸುದೀಪ್, ಶ್ರೀಯಾ ಶರಣ್ ರೀತಿಯ ಕಲಾವಿದರು ಇರುವುದು ಈ ಚಿತ್ರದ ಬಲ. ನಿರ್ದೇಶಕ ಚಂದ್ರು ಎಲ್ಲರ ಪಾತ್ರವನ್ನು ತೋರಿಸಿದ ರೀತಿ ನನ್ನ ಗಮನ ಸೆಳೆಯಿತು. ಹಿನ್ನೆಲೆ ಸಂಗೀತ ನನ್ನ ಕಿವಿಯಲ್ಲಿ ಗುನುಗುಟ್ಟುತ್ತಿದೆ’ ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ.
Upendra, kichha sudeep starrer Kabzaa movie teaser released by Rana Daggubati and shivarajkumar in Bengaluru