ಮತ್ತೊಂದು ಹೊಸ ಸಿನಿಮಾಗೆ ಒಂದಾಗಲಿದೆ ಆಶಿ – ಬೇಬಮ್ಮ’ ಜೋಡಿ..!

1 min read

ಮತ್ತೊಂದು ಹೊಸ ಸಿನಿಮಾಗೆ ಒಂದಾಗಲಿದೆ ಆಶಿ – ಬೇಬಮ್ಮ’ ಜೋಡಿ..!

ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿರುವ ತೆಲುಗಿನ ಉಪ್ಪೆನಾ ಸಿನಿಮಾ ಎಲ್ಲರ ಗಮನ ಸೆಳೆದಿತ್ತು. ಅದ್ರಲ್ಲೂ ಕನ್ನಡದ ಹುಡುಗಿ ಕೃತಿ ಶೆಟ್ಟಿ ಹಾಗೂ ತೆಲುಗಿನ ಯುವ ನಟ ವೈಷ್ಣವ್ ತೇಜ್ ಜೋಡಿಯ ನಡುವಿನ ಆನ್ ಸ್ಕ್ರೀನ್ ಕೆಮಿಸ್ಟ್ರಿಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದರು.

ಈ ಜೋಡಿ ಮೇಡ್ ಫಾರ್ ಈಚ್ ಅದರ್ ಎಂದೇ ಮಾತನಾಡಿಕೊಳ್ತಿದ್ರು. ಅಲ್ಲದೇ ಇದು ಇವರಿಬ್ಬರಿಗೂ ಸಹ ಮೊದಲನೇ ಸಿನಿಮಾಗಿದ್ದು, ಮೊದಲನೇ ಸಿನಿಮಾದಲ್ಲೇ ಸೂಪರ್ ಹಿಟ್ ಆಗಿದ್ದರು. ಕಾಮಿಡಿ, ಎಮೋಷನ್, ಲವ್ ಸ್ಟೋರಿ, ಮಸ್ತ್ ಆಕ್ಷನ್ ಸೀನ್ಸ್ ಇದ್ದ ಕಂಪ್ಲೀಟ್ ಪ್ಯಾಕೇಜ್ ಈ ಸಿನಿಮಾ..

ಈ ಸಿನಿಮಾ ನಂತರ ಪ್ರೇಕ್ಷಕರು ಮತ್ತೆ ಈ ಜೋಡಿ ಒಟ್ಟಿಗೆ ಯಾವಾಗ ಸಿನಿಮಾ ಮಾಡ್ತಾರೆ ಎಂದು ಕಾಯ್ತಿದ್ದರು. ಇದೀಗ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಈ ಇಬ್ಬರು ಇದೀಗ ಮತ್ತೊಮ್ಮೆ ಒಂದಾಗ್ತಿದ್ದಾರೆ. ಹೌದು.. ಹೀಗೊoದು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಎಬ್ಬಿಸಿದೆ.

ಟಾಲಿವುಡ್ ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ಬ್ಯಾನರ್ನಲ್ಲಿ ಉಪ್ಪೆನಾ ಸಿನಿಮಾ ಮೂಡಿಬಂದಿತ್ತು. ಇದೀಗ ಇದೇ ಮೈತ್ರಿ ಮೂವಿಸ್ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದು, ವೈಷ್ಣವ್ ಮತ್ತು ಕೃತಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ನಟಿ ಕೃತಿ ಶೆಟ್ಟಿ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ವೈಷ್ಣವ್ ಗೂ ಸಹ ಸಾಲು ಸಾಲು ಸಿನಿಮಾಗಳ ಆಫರ್ ಗಳಿವೆ.

ಭಾವನಾತ್ಮಕ ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್, ಜಯ ಬಚ್ಚನ್ ಮತ್ತು ನಟಿ ಕತ್ರಿನಾ ಕೈಫ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd