ಕೊಪ್ಪಳ: ದೇಶದ ರಾಷ್ಟ್ರಧ್ವಜ ಹೋಲುವ ತ್ರಿವರ್ಣ ಧ್ವಜದಲ್ಲಿ ಉರ್ದು ಅಕ್ಷರ ಕಂಡು ಬಂದಿರುವ ಘಟನೆ ನಡೆದಿದೆ.
ಈ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಡೆದಿದೆ. ಈದ್ ಮಿಲಾದ್ ಸಂದರ್ಭದಲ್ಲಿ ಮಹ್ಮದ್ ಖಾಜಿ ಎಂಬ ಯುವಕ ಕಟ್ಟಿದ್ದ ತ್ರಿವರ್ಣ ಧ್ವಜದಲ್ಲಿ ಉರ್ದು ಅಕ್ಷರ ಕಂಡು ಬಂದಿದೆ. ಲಾ ಇಲಾಹಿ ಇಲ್ಲಲ್ಲ.. ಮಹಮ್ಮದ್ ರಸೂಲಲ್ಲ ಎಂಬ ವಾಕ್ಯವಿರುವ ತ್ರಿವರ್ಣ ಧ್ವಜವನ್ನು ಯುವಕ ಕಟ್ಟಿದ್ದಾನೆ.
ಕೂಡಲೇ ಸ್ಥಳೀಯರು ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಪೊಲೀಸರು ಧ್ವಜ ಇಳಿಸಿ, ಆತನನ್ನು ಕರೆದುಕೊಂಡು ಹೋಗಿದ್ದಾರೆ. ಯಲಬುರ್ಗಾ ಪಟ್ಟಣದ 9 ನೇ ವಾರ್ಡ್ ನಲ್ಲಿರುವ ಬೀಬಿ ಫಾತಿಮಾ ಆಲಂ ದರ್ಗಾದ ಮೇಲೆ ಧ್ವಜ ಕಟ್ಟಿದ್ದ ಎನ್ನಲಾಗಿದೆ.