ಸಿರಿಯಾದಲ್ಲಿ ವೈಮಾನಿಕ ದಾಳಿ : ಅಲ್-ಖೈದಾ ಹಿರಿಯ ನಾಯಕನ ಕೊಲೆ US army saaksha tv
ವಾಷಿಂಗ್ಟನ್ : ಸಿರಿಯಾದಲ್ಲಿ ವೈಮಾನಿಕ ದಾಳಿ ನಡೆಸಿ ಅಮೆರಿಕಾ ಸೇನಾಪಡೆಯು ಆಲ್ ಖೈದಾ ಹಿರಿಯ ನಾಯಕನನ್ನು ಕೊಲೆ ಮಾಡಿದೆ ಎಂದು ವರದಿಯಾಗಿದೆ.
ವಾಯುವ್ಯ ಸಿರಿಯಾದಲ್ಲಿ ಅಮೆರಿಕಾ ಸೇನಾಪಡೆ ವೈಮಾನಿಕ ದಾಳಿ ನಡೆಸಿದ್ದು, ಅಲ್-ಖೈದಾ ಹಿರಿಯ ನಾಯಕ ಅಬ್ದುಲ್ ಹಮೀದ್ ಅಲ್-ಮತಾರ್ ನನ್ನು ಕೊಲ್ಲಲಾಗಿದೆ.
ಎಂಕ್ಯೂ-9 ವಿಮಾನವನ್ನು ಬಳಸಿ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದ್ದು, ದಾಳಿಯಲ್ಲಿ ನಾಗರಿಕರ ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿಗಳಿಲ್ಲ.
ತಾಯ್ನಾಡಿಗೆ ಹಾನಿ ಮಾಡುವ ಉದ್ದೇಶ ಹೊಂದಿರುವ ಅಲ್-ಖೈದಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳ ಸದಸ್ಯರನ್ನು ಗುರಿಯಾಗಿಸುವುದನ್ನು ಅಮೆರಿಕಾ ಮುಂದುವರಿಸುತ್ತದೆ ಎಂದು ಸೆಂಟ್ರಲ್ ಕಮಾಂಡ್ ವಕ್ತಾರ ಮೇಜರ್ ಜಾನ್ ರಿಗ್ಸ್ ಬೀ ತಿಳಿಸಿದ್ದಾರೆ.