ಹೊಸದಿಲ್ಲಿ, ಜೂನ್ 3 : ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ನಡೆಸಿರುವ ಮಾತುಕತೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಮಿತ್ರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಆತ್ಮೀಯ ಮತ್ತು ಫಲಪ್ರದ ಮಾತುಕತೆ ನಡೆಯಿತು. ಈ ಮಾತುಕತೆಯಲ್ಲಿ ನಾವು ಜಿ7 ಶೃಂಗಸಭೆ, ಉಭಯ ದೇಶಗಳಲ್ಲಿ ಉಂಟಾಗಿರುವ ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟು ಸೇರಿದಂತೆ ಹಲವು ಮಹತ್ವದ ವಿಚಾರದ ಕುರಿತು ಚರ್ಚೆ ನಡೆಸಿದೆವು’ ಎಂದು ಬರೆದಿದ್ದಾರೆ.

ಪ್ರಧಾನಿ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಟ್ರಂಪ್ ನಡುವಿನ ಸಂಭಾಷಣೆಯಲ್ಲಿ ಉಭಯ ದೇಶಗಳಲ್ಲಿನ ಕೊರೋನಾ ವೈರಸ್ ಪರಿಸ್ಥಿತಿ, ಭಾರತ-ಚೀನಾ ಗಡಿ ವಿಚಾರ, ಅಮೆರಿಕಾದಲ್ಲಿ ನಡೆಯುತ್ತಿರುವ ಕಪ್ಪುವರ್ಣಿಯರ ದಂಗೆ ಮತ್ತಿತರ ಮಹತ್ವದ ವಿಚಾರದ ಕುರಿತು ಚರ್ಚೆ ನಡೆಸಲಾಗಿದೆ ಎಂದು ಪ್ರಧಾನಿ ಸಚಿವಾಲಯ ತಿಳಿಸಿದೆ
ಅಮೆರಿಕದಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿರುವ ಡೊನಾಲ್ಡ್ ಟ್ರಂಪ್ ಅಸ್ತಿತ್ವದಲ್ಲಿರುವ ಸದಸ್ಯತ್ವವನ್ನು ಮೀರಿ ಭಾರತ ಸೇರಿದಂತೆ ಇತರ ಪ್ರಮುಖ ದೇಶಗಳನ್ನು ಸೇರಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.








