ಎಲ್ಲಾ ಗ್ಯಾಜೆಟ್‌ಗಳಿಗೆ ‘C’ ಚಾರ್ಜರ್ ಕಡ್ಡಾಯಗೊಳಿಸಿದ ಯುರೋಪಿಯನ್ ಯೂನಿಯನ್
ಯುರೋಪಿಯನ್ ಯೂನಿಯನ್ 2024 ರ ವೇಳೆಗೆ Apple ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ USB -C ಅನ್ನು ಕಡ್ಡಾಯಗೊಳಿಸಿದೆ. USB-C ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗೆ ಬಳಸುವ ಪೋರ್ಟ್ ಆಗಿದೆ.
ಇದು ಮೊಬೈಲ್‌ನಿಂದ ಹಿಡಿದು ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಕ್ಯಾಮೆರಾಗಳವರೆಗೆ ಎಲ್ಲದಕ್ಕೂ ಅನ್ವಯಿಸುತ್ತದೆ. ಲ್ಯಾಪ್‌ಟಾಪ್‌ಗಳನ್ನ ಒಳಗೊಂಡಿದ್ದರೂ ಸಹ ಇದರ ಗಡುವನ್ನ 2026 ಕ್ಕೆ ವಿಸ್ತರಿಸಿದ್ದಾರೆ. ಇದು ರೀಡರ್ಸ್ ಮತ್ತು ಇಯರ್‌ಬಡ್‌ಗಳು ಸೇರಿದಂತೆ ಇತರ ಪರಿಕರಗಳ ಮೇಲೂ ಪರಿಣಾಮ ಬೀರುತ್ತದೆ.
ಇದು ಆಪಲ್‌ಗೆ ಹೊಡೆತ ಬೀಳಲಿದೆ. ಏಕೆಂದರೆ ಆಪಲ್ ಲೈಟ್ನಿಂಗ್ ಪೋರ್ಟ್ ಅನ್ನ ಅವಲಂಬಿಸಿದೆ. ಗ್ರಾಹಕರ ವೆಚ್ಚದ ಹೊರೆಯನ್ನು ಕಡಿಮೆ ಮಾಡಲು EU ಈ ನಿರ್ಧಾರವನ್ನು ತೆಗೆದುಕೊಂಡಿದೆ. ಆಂಡ್ರಾಯ್ಡ್ ಆಧಾರಿತ ಬ್ರಾಂಡ್‌ಗಳಾದ ಗೂಗಲ್, ಸ್ಯಾಮ್‌ಸಂಗ್, ವಿವೋ, ಶಿಯೋಮಿ ಈಗಾಗಲೇ ಯುಎಸ್‌ಬಿ-ಸಿ ಬಳಸುತ್ತಿರುವುದರಿಂದ ಅವುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
USB-C: European Union mandated ‘C’ charger for all gadgets