” ಉಸಿರೇ ಉಸಿರೇ” ಎಂದ ತಕ್ಷಣ ನೆನಪಾಗುವುದು ಕಿಚ್ಚ ಸುದೀಪ. ಅವರಿಂದಲೇ ಆರಂಭವಾದ ಚಿತ್ರ “ಉಸಿರೇ ಉಸಿರೇ”

1 min read

” ಉಸಿರೇ ಉಸಿರೇ” ಎಂದ ತಕ್ಷಣ ನೆನಪಾಗುವುದು ಕಿಚ್ಚ ಸುದೀಪ. ಅವರಿಂದಲೇ ಆರಂಭವಾದ ಚಿತ್ರ “ಉಸಿರೇ ಉಸಿರೇ”.

ಸಿಸಿಎಲ್ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಜೀವ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಕೋಲಾರದಲ್ಲಿ ನಡೆಯುತ್ತಿದೆ.

ರಾಜೀವ್, ನಾಯಕಿ ಶ್ರೀಜಿತ, ತಾರಾ ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಸಾಯಿಕುಮಾರ್, ಬ್ರಹ್ಮಾನಂದಂ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಖ್ಯಾತ ನಟ ಅಲಿ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದು, ಕೋಲಾರದಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಬೆಂಗಳೂರು, ಕೋಲಾರ, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.

N ಗೊಂಬೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಿಸುತ್ತಿರುವ

ಈ ಚಿತ್ರವನ್ನು ಸಿ.ಎಂ.ವಿಜಯ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಕೂಡ ವಿಜಯ್ ಅವರದೆ‌

ಸುಮಧುರ ಹಾಡುಗಳಿರುವ ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ನೀಡುತ್ತಿದ್ದಾರೆ. ಸರವಣನ್ ಛಾಯಾಗ್ರಹಣ ಮಾಡುತ್ತಿದ್ದಾರೆ.ಕೆ.ಎಂ.ಪ್ರಕಾಶ್ ಈ ಚಿತ್ರದ ಸಂಕಲನಾರರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd