ಪಾಕಿಸ್ತಾನದ ಹೆಸರು ಹೇಳಲು ನಮಗೆ ನಾಚಿಕೆ : ಯು.ಟಿ.ಖಾದರ್
ಮಂಗಳೂರು : ಉಳ್ಳಾಲಕ್ಕೆ ಹೋದಲ್ಲಿ ಪಾಕಿಸ್ತಾನಕ್ಕೆ ಹೋದಂತೆ ಭಾಸವಾಗುತ್ತದೆ ಎಂಬ ಆರ್‍ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಹೇಳಿಕೆಗೆ ಮಾಜಿ ಸಚಿವ ಯು.ಟಿ.ಖಾದರ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯು.ಟಿ.ಖಾದರ್, ಕಲ್ಲಡ್ಕ ಪ್ರಭಾಕರ ಭಟ್ಟರು ತಾವು ನೀಡಿರುವ ಹೇಳಿಕೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ.
ಪ್ರತಿಯೊಬ್ಬರೂ ಈ ರೀತಿಯ ಹೇಳಿಕೆಗಳನ್ನು ಹೇಳಿಕೊಂಡು ಬಂದಲ್ಲಿ ಸಮಾಜ ಹಾಗೂ ದೇಶಕ್ಕೆ ಪೂರಕವಾಗಿರುವುದಿಲ್ಲ. ಇದು ದೇಶ ಪ್ರೇಮ ಇರುವವರು ಹಾಗೂ ಸಮಾಜದ ಮೇಲೆ ಪ್ರೀತಿಯಿರಿಸಿ ನೀಡುವ ಹೇಳಿಕೆಗಳೂ ಅಲ್ಲವೆಂದು ಹೇಳಿದರು.
ಭಾರತದಂತಹ ದೇಶದಲ್ಲಿದ್ದು, ಪಾಕಿಸ್ತಾನದ ಹೆಸರು ಹೇಳಲು ನಮಗೆ ನಾಚಿಕೆಯಾಗುತ್ತದೆ ಎಂದ ಯು.ಟಿ.ಖಾದರ್, ಪಾಕಿಸ್ತಾನ ಎಂಬ ಪದವನ್ನು ನಮ್ಮ ಬಾಯಿಯಲ್ಲಿ ಹೇಳಲು ನಮಗೆ ಮುಜುಗರವಾಗುತ್ತದೆ.
ಅಂತಹ ಸಂದರ್ಭದಲ್ಲಿ ಈ ರೀತಿಯ ಹೇಳಿಕೆಗಳು ಕಲ್ಲಡ್ಕ ಪ್ರಭಾಕರ ಭಟ್ಟರ ಬಾಯಿಯಲ್ಲಿ ಬರುತ್ತದೆ ಎಂದು ಆಶ್ಚರ್ಯವಾಗುತ್ತದೆ. ಸಾರ್ವಜನಿಕ ಹೇಳಿಕೆಗಳು ಸಮಾಜದ ಒಗ್ಗಟ್ಟಿಗೆ ಪೂರಕವಾಗಿರಬೇಕು.
ಆದ್ದರಿಂದ ಹಿರಿಯರಾದ ಕಲ್ಲಡ್ಕ ಪ್ರಭಾಕರ ಭಟ್ಟರ ಈ ರೀತಿಯ ಹೇಳಿಕೆ ಉಳ್ಳಾಲ ಕ್ಷೇತ್ರದ ಪ್ರತಿಯೊಬ್ಬರಿಗೂ ಅತ್ಯಂತ ನೋವನ್ನುಂಟು ಮಾಡಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ : ನಾನೇ ಬಿಜೆಪಿ ಅಭ್ಯರ್ಥಿ ಎಂದು ಭಾವಿಸಿ ಮತದಾನ ಮಾಡಿದ್ದೇನೆ : ಅಶೋಕ್
ಇನ್ನು ವೀರರಾಣಿ ಉಳ್ಳಾಲದ ಅಬ್ಬಕ್ಕರ ಇತಿಹಾಸ, ಸೋಮೇಶ್ವರ ದೇವಾಲಯ, ಜೈನ್ ಬಸದಿ, ಸಯ್ಯದ್ ಮದನಿ ದರ್ಗಾ, ಉಳಿಯ ದೈವಸ್ಥಾನ, ಸಂತ ಸೆಬಾಸ್ಟಿಯನ್ ಚರ್ಚ್, ಭಗವತೀ ದೇವಸ್ಥಾನ ಹೀಗೆ ಪ್ರತೀ ಸಣ್ಣಸಣ್ಣ ಸಮುದಾಯದ ಧಾರ್ಮಿಕ ಆರಾಧನಾ ಕೇಂದ್ರಗಳು ಉಳ್ಳಾಲದಲ್ಲಿವೆ.
ನನಗೆ ಉಳ್ಳಾಲದ ಕಣ ಕಣದಲ್ಲಿ ಭಾರತದ ಬಹುಸಂಸ್ಕೃತಿ ಕಂಡು ಬರುತ್ತದೆ. ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ವಯಸ್ಸಾಗಿರುವ ಹಿನ್ನೆಲೆಯಲ್ಲಿ ಏನೋ ಮಾತನಾಡಿದ್ದಾರೆ. ಆದ್ದರಿಂದ ಯಾರೂ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಖಾದರ್ ಮನವಿ ಮಾಡಿದರು.
ಉಳ್ಳಾಲದಲ್ಲಿ ಎಲ್ಲರೂ ಅತ್ಯಂತ ಪ್ರೀತಿ, ವಿಶ್ವಾಸ ಹಾಗೂ ಸೋದರತೆಯಿಂದ ಇದ್ದಾರೆ ಎಂದು ತಿಳಿಸಿದ ಖಾದರ್, ಬಹುಸಂಸ್ಕೃತಿ, ಎಲ್ಲಾ ಧರ್ಮ, ಜಾತಿ, ವರ್ಗಗಳನ್ನು ಗೌರವಿಸಿಕೊಂಡು ಉಳ್ಳಾಲದಲ್ಲಿ ಎಲ್ಲರೂ ಬದುಕುತ್ತಿದ್ದಾರೆ.
ಯಾರೋ ಒಬ್ಬರು ಹೇಳಿದ ತಕ್ಷಣ ಅಲ್ಲಿನ ಚಿತ್ರಣ ಬದಲಾಗೋದಿಲ್ಲ. ಹಾಗಾಗಿ, ಯಾರೂ ಅಷ್ಟೊಂದು ತಲೆಕೆಡಿಸಿಕೊಳ್ಳಲು ಹೋಗುತ್ತಿಲ್ಲ ಎಂದು ಪ್ರಭಾಕರ್ ಭಟ್ಟರಿಗೆ ತಿರುಗೇಟು ನೀಡಿದರು.
ಪ್ರಭಾಕರ್ ಭಟ್ ಹೇಳಿಕೆ
ಮಂಗಳೂರಿನ ಉಳ್ಳಾಲ ಸಮೀಪದ ಕಿನ್ಯಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಭಾಕರ್ ಭಟ್, ಮನೆಯಲ್ಲಿ ಒಂದೇ ಮಗುವಿದ್ದಾಗ ಆ ಮಗುವಿಗೆ ಅಣ್ಣ, ತಮ್ಮ, ಅಕ್ಕ, ತಂಗಿ ಯಾರೂ ಇರಲ್ಲ. ಆ ಮಗು ಸ್ವಾರ್ಥಿಯಾಗುತ್ತದೆ. ಮನೆಯಲ್ಲಿ ಮಕ್ಕಳು ಹೆಚ್ಚಿದಷ್ಟು ಆನಂದ, ಖುಷಿ ಹೆಚ್ಚಾಗಿರುತ್ತದೆ. ಇದೀಗ ಹಿಂದೂ ಸಮಾಜದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಇದೆ ಎಂದರು.
ನಮ್ಮ ಕಿನ್ಯಾ ಪ್ರದೇಶದ ಸುತ್ತಲೂ ಯಾರಿದ್ದಾರೆ ಎಂದು ನೋಡಿ. ಉಳ್ಳಾಲದ ಬಗ್ಗೆ ನಾನೇನು ಹೇಳಬೇಕಾಗಿಲ್ಲ. ಆಗ ನಮ್ಮ ದೇವಸ್ಥಾನವನ್ನು, ದೈವಸ್ಥಾನವನ್ನು ಉಳಿಸುವವರು ಯಾರು, ನಮ್ಮ ಸಂಪ್ರದಾಯ, ಸಂಸ್ಕøತಿಯನ್ನು ಉಳಿಸುವವರು ಯಾರು, ಉಳ್ಳಾಲ ಪಾಕಿಸ್ತಾನ ಯಾಕೆ ಆಯಿತು? ಇಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಇತ್ತು, ಅವರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಪಾಕಿಸ್ತಾನ, ಬಾಂಗ್ಲಾದೇಶ ನಿರ್ಮಾಣವಾಯಿತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ರಾಜಕಾರಣಿಗೂ ಭಿಕ್ಷೆ ಬೇಡುವವನಿಗೂ ವ್ಯತ್ಯಾಸವಿಲ್ಲ : ಮುನಿರತ್ನ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channe