ಪೋಷಕರು ಫೋನ್ ನಲ್ಲಿ ಗೇಮ್ ಆಡೋದನ್ನ ಬಿಡು ಎಂದಿದ್ದಕ್ಕೆ ನೊಂದ ಬಾಲಕ ಮಾಡಿದ್ದೇನು ಗೊತ್ತಾ..!
ಉತ್ತರಪ್ರದೇಶ : ಇತ್ತೀಚೆಗೆ ಮಕ್ಕಳು ಹೆಚ್ಚಾಗಿ ಮೊಬೈಲ್ ಗಳಲ್ಲಿ ಅದ್ರಲ್ಲೂ ಆನ್ ಲೈನ್ ಗೇಮ್ಸ್ ಗಳಿಗೆ ತುಂಬಾನೆ ಅಡಿಕ್ಟ್ ಆಗಿ ಬಿಟ್ಟಿದ್ದಾರೆ. ಇದಕ್ಕೆ ಅನೇಕ ಬಾರಿ ಪೋಷಕರು ಬೈಯೋದು ಉಂಟು.
ಆದ್ರೆ ಹೀಗೆ ತಂದೆ ತಾಯಿ ಬೈದರು ಎಂಬ ಕಾರಣಕ್ಕೆ 15 ವರ್ಷದ ಬಾಲಕನೋರ್ವ ನಿರ್ಮಾಣ ಹಂತದ ಕಟ್ಟಡದಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ.
ಹೌದು ಪೋಷಕರು ಬೈದ ಕಾರಣಕ್ಕೆ ನೊಂದು ರಾತ್ರೋರಾತ್ರಿ ಮನೆಬಿಟ್ಟು ಹೋಗಿದ್ದ 7ನೇ ತರಗತಿ ಬಾಲಕ ನಿರ್ಮಾಣ ಹಂತದ ಕಟ್ಟಡದಿಂದ ಕೆಳಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾನೆ. ಇನ್ನೂ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಪತ್ನಿ ರಾಗಿಣಿಗೆ ಕೊರೊನಾ ಪಾಸಿಟಿವ್..!
ಧೂಮಪಾನ ನಿಷೇಧ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಾಲಕಿ ಈಗ ಕನ್ನಡ ಸಿನಿಮಾದ ನಾಯಕಿ..!








