ಧೂಮಪಾನ ನಿಷೇಧ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಾಲಕಿ ಈಗ ಕನ್ನಡ ಸಿನಿಮಾದ ನಾಯಕಿ..!
ಫೇಮಸ್ ಸ್ಮೋಕಿಂಗ್ ಜಾಹಿರಾತಿನಲ್ಲಿ ಕಾಣಿಸಿಕೊಳ್ತಿದ್ದ, ಈಗಲೂ ಕಾಣಿಸಿಕೊಳ್ಳುತ್ತಿರುವ ಬಾಲಕಿ ನಿಮಗೆಲ್ಲರಿಗೂ ಗೊತ್ತೇ ಇದೆ. ಆದ್ರೆ ಈ ಬಾಲಕಿ ಈಗ ದೊಡ್ಡವಳಗಾಗಿದ್ದು, ಸಿನಿಮಾಗಳಲ್ಲಿ ನಟಿಸುತ್ತಿದ್ದಾಲೆ. ಕೆಲ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಈಕೆ ಈಗ ನಾಯಕಿಯಾಗಿ ಪಾದಾರ್ಪಣೆ ಮಾಡ್ತಿದ್ದಾಳೆ. ಅದ್ರಲ್ಲೂ ಕನ್ನಡ ಸಿನಿಮಾದಲ್ಲಿ ಅನ್ನೋದು ಗಮನಾರ್ಹ.
ಹೌದು.. ಮಗಳಿಗಾಗಿ ತಂದೆ ಧೂಮ್ರಪಾನ ಬಿಡುವಂತಹ ಜಾಹೀರಾತು ಅದಾಗಿತ್ತು. ಆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಪುಟ್ಟ ಬಾಲಕಿ ಈಗ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ. 6ನೇ ವಯಸ್ಸಿನಲ್ಲಿಯೇ ಜಾಹೀರಾತು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಸಿಮ್ರಾನ್ ನಂತರದ ದಿನಗಳಲ್ಲಿ 150ಕ್ಕೂ ಅಧಿಕ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ಬಾಲಿವುಡ್ ಪ್ರವೇಶಿಸಿದ ಸಿಮ್ರಾನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಧೂಮಪಾನ ನಿಷೇಧ ಜಾಹೀರಾತಿನಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಬಾಲಕಿ ಸಿಮ್ರಾನ್ ನಾಟೇಕರ್ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಸರ್ಕಾರದ ಧೂಮಪಾನ ಹಾನಿಕಾರಕ ಎಂಬ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಿಮ್ರಾನ್ ಈಗ ಕನ್ನಡದ ಬರ್ಕ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ.
ಗಣಪ, ಕರಿಯ2 ಚಿತ್ರಗಳಲ್ಲಿ ನಟಿಸಿರುವ ಸಂತೋಷ್ ಬಾಲರಾಜ್ ಬರ್ಕ್ಲಿ ಸಿನಿಮಾದ ನಾಯಕರಾಗಿದ್ದಾರೆ. ಸುಮಂತ್ ಕ್ರಾಂತಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ನಟ ಚರಣ್ ರಾಜ್, ನಟಿ ಶೃತಿ, ಬುಲೆಟ್ ಪ್ರಕಾಶ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಬಹದ್ದೂರ್ ಚೇತನ್ ಕುಮಾರ್, ಅಭಿ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಜ್ಯೂಡ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ. ಆನೇಕಲ್ ಬಾಲರಾಜ್ ಅವರು ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ಬಾಲಿವುಡ್ ನ ಆಲಿಯಾ ಗೆ ಕೊರೊನಾ ದೃಢ..!
‘ಡಾರ್ಲಿಂಗ್’ ಹಿಂದೆ ಬಿದ್ದ ಬಾಲಿವುಡ್ ಸಿನಿಮಾ ಮಂದಿ…! ಹಾಲಿವುಡ್ ಸಿನಿಮಾದ ರೀಮೇಕ್ ನಲ್ಲಿ ಪ್ರಭಾಸ್..!