Uttar Pradesh : 8 ನೇ ತರಗತಿ ಬಾಲಕಿಗೆ ಪ್ರೇಮ ಪತ್ರ ಬರೆದ 47 ರ ಶಿಕ್ಷಕ…
ಗುರುಬ್ರಹ್ಮ ಗುರುವಿಷ್ಣು ಎಂದು ಶಿಕ್ಷರನ್ನ ದೇವರಿಗೆ ಹೋಲಿಸುತ್ತೇವೆ, ಆದರೆ ಇಲ್ಲೊಬ್ಬ ಶಿಕ್ಷಕ ಎಂಟನೇ ತರಗತಿ ಬಾಲಕಿ ಪ್ರೇಮ ಪತ್ರ ಬರೆದಿರುವ ಹೀನ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಲ್ಲಾರ್ಪುರದ ಸರ್ಕಾರಿ ಶಾಲೆಯ ಶಿಕ್ಷಕನ್ನ ವೃತ್ತಿಯಿಂದ ಅಮಾನತು ಮಾಡಿ ಎಫ್ ಐ ಆರ್ ದಾಖಲಿಸಲಾಗಿದೆ.
13 ವರ್ಷದ ಬಾಲಕಿಯ ತಂದೆ ಶುಕ್ರವಾರ ನೀಡಿದ ದೂರಿನ ಅನ್ವಯ ಶಿಕ್ಷಕ ಹರಿ ಓಂ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕುನ್ವಾರ್ ಎಸ್‌ಪಿ ಅನುಪಮ್ ಸಿಂಗ್ ತಿಳಿಸಿದ್ದಾರೆ.
ಡಿ. 30ರಂದು ಎಂಟನೇ ತರಗತಿ ಬಾಲಕಿಗೆ 47 ವರ್ಷದ ಶಿಕ್ಷಕ ಹರಿ ಓಂ ಸಿಂಗ್ ಗ್ರೀಟಿಂಗ್ ಕಾರ್ಡ್ ನೀಡಿದ್ದ ಎನ್ನಲಾಗಿದೆ. ಒಂದು ಪುಟದ ಪ್ರೇಮ ಪತ್ರದಲ್ಲಿ ತನ್ನ ಪ್ರೇಮ ನಿವೇದನೆಯನ್ನು ಆತ ಹಂಚಿಕೊಂಡಿದ್ದ.
ವಿದ್ಯಾರ್ಥಿನಿಯನ್ನ ಬಹಳ ಪ್ರೀತಿಸುತ್ತಿರುವುದಾಗಿ, ರಜಾ ದಿನಗಳ ವೇಳೆ ಆಕೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾಗಿ ಹೇಳಿಕೊಂಡಿರುವ ಆತ, ಸಮಯ ಸಿಕ್ಕರೆ ಕರೆ ಮಾಡಬೇಕು ಎಂದು ತಿಳಿಸಿದ್ದಾನೆ.
ರಜೆಗೂ ಮುನ್ನ ತನ್ನನ್ನು ಒಮ್ಮೆ ಭೇಟಿ ಮಾಡುವಂತೆಯೂ ಕೇಳಿದ್ದ ಶಿಕ್ಷಕ, ನೀನು ನಿಜಕ್ಕೂ ತನ್ನನ್ನು ಪ್ರೀತಿಸುವುದಾದರೆ ಖಂಡಿತಾ ಬರುತ್ತೀಯ. “ನಿನ್ನನ್ನು ಸದಾ ಪ್ರೀತಿಸುತ್ತೇನೆ” ಎಂದು ಬರೆದಿದ್ದಲ್ಲದೆ, ಈ ಪತ್ರವನ್ನು ಯಾರಿಗೂ ತೋರಿಸದಂತೆ ಹಾಗೂ ಓದಿದ ಬಳಿಕ ಹರಿದು ಹಾಕುವಂತೆ ಕೋರಿದ್ದಾನೆ.
ಈ ಪತ್ರದ ಬಗ್ಗೆ ವಿದ್ಯಾರ್ಥಿನಿಯು ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಅವರು ಶಿಕ್ಷಕರನ್ನ ಭೇಟಿ ಮಾಡಿ ಕೃತ್ಯಕ್ಕೆ ಕ್ಷಮಾಪಣೆ ಕೋರುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ಶಿಕ್ಷಕ ಕ್ಷಮೆ ಕೋರಲು ನಿರಾಕರಿಸಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವಾಜ್ ಹಾಕಿದ್ದಾನೆ.
ಸದ್ಯ ಶಿಕ್ಷಕನನ್ನ ಕೆಲಸದಿಂದ ಅಮಾನತು ಮಾಡಿ FIR ದಾಖಲಿಸಲಾಗಿದೆ. Uttar Pradesh : 47-year-old teacher wrote love letter to 8th class girl…








