Uttar Pradesh : ಮನೆ ಕೆಲಸದ ಬಾಲಕಿ ಮೇಲೆ ಯಜಮಾನಿ ಹಲ್ಲೆ – ಸಿಸಿಟಿವಿಯಲ್ಲಿ ಘಟನೆ ಸೆರೆ…
ಮನೆ ಕೆಲಸ ಮಾಡುತ್ತಿದ್ದ ಬಾಲಕಿ ಮೇಲೆ ಮನೆ ಯಜಮಾನಿ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಬಾಲಕಿ ಮೇಲೆ ಹಲ್ಲೆ ಮಾಡುತ್ತಿರುವ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ನೋಯ್ಡಾದ ಕ್ಲಿಯೋ ಕೌಂಟಿ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕ್ಲಿಯೋ ಕೌಂಟಿ ಸೊಸೈಟಿಯಲ್ಲಿ ವಾಸಿಸುವ ಶೆಫಾಲಿ ಕೌಲ್ ಎಂಬ ಮಹಿಳೆಯ ಮನೆಯಲ್ಲಿ ಅನಿತಾ ಎಂಬ 20 ವರ್ಷದ ಹುಡುಗಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಶೆಫಾಲಿ ಕಿರುಕುಳ ನೀಡಿದ್ದಾಳೆ. ಆದ್ದರಿಂದ ಬಾಲಕಿ ಕೆಲಸ ಮಾಡಲು ನಿರಾಕರಿಸಿದಳು. ಶೆಫಾಲಿ ಇತ್ತೀಚೆಗೆ ಅನಿತಾಳನ್ನು ತನ್ನ ಮನೆಗೆ ಬಂದು ಕೆಲಸ ಮಾಡುವಂತೆ ಹೇಳಿದ್ದಳು. ಅನಿತಾ ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ. ಬಲವಂತವಾಗಿ ಎಳೆದುಕೊಂಡು ಹೋಗುತ್ತಿರುವ ಘಟನೆ ಲಿಫ್ಟ್ ನ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಘಟನೆ ಕುರಿತು ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶೆಫಾಲಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಗಳ ಮೇಲೆ ಹಲ್ಲೆ ಮಾಡಿದ ಶೆಫಾಲಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನಿತಾ ತಂದೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
Uttar Pradesh : Mistress assaults domestic worker – incident captured on CCTV…