ಕೆರೆಗೆ ಎಸೆದ ಮಗುವನ್ನ ಮುಳುಗದಂತೆ ರಕ್ಷಿಸಿದ ಗಿಡಗಳು…
ಹೆತ್ತ ತಾಯಿಯೊಬ್ಬಳು ಎರಡು ದಿನದ ಹೆಣ್ಣುಮಗುವನ್ನ ಕೆರೆಗೆ ಎಸೆದಿದ್ದಾಳೆ. ಆದರೇ ಮಗುವಿನ ಆಯುಷ್ಯ ಗಟ್ಟಿ ಇತ್ತು. ಕೆರೆಯಲ್ಲಿ ಬೆಳೆದಿದ್ದ ಗಿಡ ಗಂಟಿಗಳು ಮಗುವನ್ನ ನೀರಿನಲ್ಲಿ ಮುಳುಗದಂತೆ ರಕ್ಷಿಸಿವೆ. ಈ ಘಟನೆ ನಡೆದಿರುವು ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಖಟೌವಾ ಗ್ರಾಮದಲ್ಲಿ .
ಸ್ಥಳಿಯ ನಿವಾಸಿಯಿಯೊಬ್ಬರು ಕೆರೆಯ ದಡದ ಬಳಿ ನಡೆದುಕೊಂಡು ಹೋಗುವಾಗ ಮಗುವನ್ನ ಗಮನಿಸಿ ಪೊಲೀಸರಿಗೆ ದುರು ನೀಡಿದ್ದಾರೆ. ಲಿಲ್ಲಿ ಹೂವಿನ ಜಾತಿಗೆ ಸೇರಿದ ಕೆರೆಯಲ್ಲಿ ಬೆಳೆದಿದ್ದ ಗಿಡಗಳು ಮಗುವಿನ ತಲೆ ನೀರಿನಲ್ಲಿ ಮುಳುಗದಂತೆ ರಕ್ಷಿಸಿದೆ. ಅದೃಷ್ಟವಶಾತ್ ಮೀನುಗಳು ಸಹ ಅಲ್ಲಿಯವರೆಗೆ ದಾಳಿ ಮಾಡಿಲ್ಲ.
ಪೊಲೀಸರು ಮಗುವನ್ನ ರಕ್ಷಿಸಿ ನವಾಬ್‌ಗಂಜ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಮಗವಿಗೆ ಯಾವುದೇ ಗಾಯಗಳಾಗಿಲ್ಲ ಎಂಬುದನ್ನ ಖಚಿತಪಡಿಸಿಕೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದ್ದು, ಬರೇಲಿ ನಗರದಲ್ಲಿನ ಫಾಸ್ಟರ್ ಹೋಮ್‌ಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 72 ಗಂಟೆಗಳಲ್ಲಿ ಆಕೆಯ ಪೋಷಕರು ಬರುವವರೆಗೆ ನಾವು ಕಾಯುತ್ತೇವೆ ಮತ್ತು ಯಾರೂ ಬಾರದಿದ್ದಲ್ಲಿ ನಿಯಮಾನುಸಾರ ದೂರು ದಾಖಲಿಸಿಕೊಳ್ಳುತ್ತೇವೆ ಎಂದು ಅಗರ್ವಾಲ್ ಹೇಳಿದ್ದಾರೆ. ಸಿಡಬ್ಲ್ಯುಸಿ ಅಧ್ಯಕ್ಷ ದಿನೇಶ್ ಚಂದ್ರ ಮಾತನಾಡಿ, ‘ಹೆಣ್ಣು ಮಗುವಿಗೆ ‘ಗಂಗಾ’ ಎಂದು ಹೆಸರಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
Uttar Pradesh: Plants saved the child thrown into the lake from drowning.