Uttar Pradesh : ‘ಗರ್ಭಿಣಿಯನ್ನ ಬೈಕ್’ ಗೆ ಕಟ್ಟಿ ಎಳೆದೊಯ್ದ ಪತಿ….
ಕುಡಿದು ಬಂದಿದ್ದಕ್ಕೆ ಹೆಂಡತಿಯ ವಿರೋಧ ವ್ಯಕ್ತಪಡಿಸಿದ ಕಾರಣ ಮಧ್ಯವೆಸನಿ ಪತಿಯೊಬ್ಬ ಹೆಂಡತಿಯನ್ನ ಬೈಕ್ ಗೆ ಕಟ್ಟಿ 200 ಮೀಟರ್ ಎಳೆದೊಯ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಶನಿವಾರ ಘುಂಗ್‌ಚೈ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ರಾಮ್‌ಗೋಪಾಲ್‌ನನ್ನು ಬಂಧಿಸಲಾಗಿದ್ದು, ಪತ್ನಿ ಸುಮನ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿಗಳ ಪ್ರಕಾರ, ರಾಮ್ ಗೋಪಾಲ್ ಶನಿವಾರ ಕುಡಿದು ಮನೆಗೆ ಬಂದಿದ್ದಕ್ಕೆ ಪತ್ನಿ ಸುಮನ್ ಪ್ರತಿಭಟಿಸಿದ್ದಾರೆ. ಇದಕ್ಕೆ ಕೋಪಗೊಂಡ ರಾಮ್ ಗೋಪಾಲ್ ಮೊದಲು ಆಕೆಯನ್ನ ಥಳಿಸಿ ನಂತರ ಬೈಕ್‌ಗೆ ಕಟ್ಟಿ ಎಳೆದೊಯ್ದಿದ್ದಾನೆ.
ಕೊನೆಗೆ ಸುಮನ್ ಸಹೋದರ ತನ್ನ ಸಹೋದರಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ರಾಮ್ ಗೋಪಾಲ್ ಮತ್ತು ಸುಮನ್ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ಜೋಡಿ ಪ್ರೇಮ ವಿವಾಹವಾಗಿತ್ತು. ಮದುವೆಯಾದ ಕೆಲ ದಿನಗಳಲ್ಲೇ ಪತಿ ಡ್ರಗ್ಸ್ ಚಟಕ್ಕೆ ಬಿದ್ದಿದ್ದಾನೆ ಎಂದು ಪತ್ನಿ ಸುಮನ್ ಆರೋಪಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ರಾಮ್ ಗೋಪಾಲ್ ನನ್ನು ವಶಕ್ಕೆ ಪಡೆದಿದ್ದಾರೆ. ವಿವಾಹಿತ ಮಹಿಳೆಯ ಸಹೋದರ ವೈಶ್ಪಾಲ್ ದೂರಿನ ಮೇರೆಗೆ ಸುಮನ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಎಳೆದೊಯ್ದು ಥಳಿಸಿರುವ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಘುಂಗ್‌ಚಾಯ್ ಠಾಣಾಧಿಕಾರಿ ರಾಜೇಂದ್ರ ಸಿಂಗ್ ಸಿರೋಹಿ ತಿಳಿಸಿದ್ದಾರೆ.
Pregnant woman tied to bike, dragged by alcoholic husband in UP