Uttar Pradesh : ಮಹಿಳೆ ಮೇಲೆ ನೆರೆಹೊರೆಯವರಿಂದಲೇ ಅತ್ಯಾಚಾರ, ವಿರೋಧಿಸಿದ್ದಕ್ಕೆ ವಿಷ ಕುಡಿಸಿದ ಪಾಪಿಗಳು…
18 ವರ್ಷದ ಮಹಿಳೆಯನ್ನ ಆಕೆಯ ನೆರಹೊರೆಯವರೇ ಅಪಹರಿಸಿ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್‌ನ ಜೆಹಾನಾಬಾದ್ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆ ವಿರೋಧಿಸಿದಾಗ ಆಕೆ ಮೇಲೆ ತೀವ್ರಾವಗಿ ಥಳಿಸಿ ವಿಷ ಕುಡಿಸಿದ್ದಾರೆ ಎಂದು ಪೊಲೀಸರು ತಿಳಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರು ಮಂದಿಯನ್ನ ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಶಂಕಿತನ ಸಹೋದರ ಸಂಜು, ಸಹೋದರಿ ಶೀತಲ್, ತಾಯಿ ಮಾಯಾದೇವಿ ಮತ್ತು ತಂದೆ ಸತ್ಯಪಾಲ್ ವಿರುದ್ಧ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜೆಹನಾಬಾದ್‌ನ ಇನ್‌ಸ್ಪೆಕ್ಟರ್-ಇನ್‌ಚಾರ್ಜ್ (ಎಸ್‌ಎಚ್‌ಒ) ಕೊತ್ವಾಲಿ ಪ್ರಭಾಷ್ ಕುಮಾರ್ ಹೇಳಿದ್ದಾರೆ.
ಜನವರಿ 1 ರ ಮುಂಜಾನೆ ಘಟನೆ ಸಂಭವಿಸಿದ್ದು, ಮಹಿಳೆಯ ನೆರೆಹೊರೆಯವರೇ ಅವರನ್ನು ಬಲವಂತವಾಗಿ ತನ್ನ ಮನೆಗೆ ಕರೆದೊಯ್ದು ಆಕೆಯ ಬಾಯಿಯನ್ನು ಬಿಗಿದು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆ ಕಟುಂಬಸ್ಥರು ಆರೋಪಿಯ ಮನೆಗೆ ಹೋಗಿ ಪ್ರಶ್ನಿಸಿದಾಗ ಆತನ ಕುಟುಂಬಸ್ಥರು ಆಕೆಯ ತಾಯಿಗೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಗಳ ಸ್ಥಿತಿ ಚಿಂತಾಜನಕವಾಗಿದ್ದು, ಪಿಲಿಭಿತ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
Uttar Pradesh : Woman raped, poisoned by neighbour UP’s Pilibhit, 6 booked








