ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ
ಉದ್ಯೋಗ ವಿವರಗಳು
ಇಲಾಖೆ ಹೆಸರು ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ದಳ
ಹುದ್ದೆಗಳ ಹೆಸರು ಗೃಹರಕ್ಷಕ ದಳದವರು
ಒಟ್ಟು ಹುದ್ದೆಗಳು 140
ಅರ್ಜಿ ಸಲ್ಲಿಸುವ ಬಗೆ ಆಫ್ಲೈನ್ (Offline)
ಉದ್ಯೋಗ ಸ್ಥಳ – ಉತ್ತರ ಕನ್ನಡ
ವಿದ್ಯಾರ್ಹತೆ
ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ
ಅಭ್ಯರ್ಥಿಯು ಕನಿಷ್ಠ 19 ವರ್ಷ ಮತ್ತು ಗರಿಷ್ಠ 50 ವರ್ಷ ವಯಸ್ಸಿನವರಾಗಿರಬೇಕು.
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ನೀಡಲಾಗಿದೆ.
ಅರ್ಜಿ ಫಾರ್ಮ್ ಪಡೆಯುವ ಸ್ಥಳ
ಅರ್ಜಿಯನ್ನು ಗ್ರಹರಕ್ಷಕ ದಳದ ಜಿಲ್ಲಾ ಕಚೇರಿ ಸರ್ವೋದಯ ನಗರ ದಿವೇಕರ್ ಕಾಮರ್ಸ್ ಕಾಲೇಜ್ ಎದುರು ಕೂಡಿಬಾಗ ಕಾರವಾರ ಇಲ್ಲಿ ಅರ್ಜಿಯನ್ನು ಉಚಿತವಾಗಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಳಾಸ
ಗೃಹರಕ್ಷಕ ದಳ ಜಿಲ್ಲಾ ಕಛೇರಿ, ಸರ್ವೋದಯ ನಗರ, ದಿವೇಕರ್ ವಾಣಿಜ್ಯ ಕಾಲೇಜು ಎದುರು, ಕೋಡಿಬಾಗ, ಕಾರವಾರ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 10-ಫೆಬ್ರವರಿ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03-ಮಾರ್ಚ್-2025








