Uttarakhand: ಲೆಹೆಂಗಾ ಇಷ್ಟವಾಗಲಿಲ್ಲ ಎಂದು ಮದುವೆಯನ್ನೆ ರದ್ದು ಮಾಡಿದ ವಧು…
ಕೆಲವೊಮ್ಮೆ ಸಣ್ಣ ಪುಟ್ಟ ಕಾರಣಗಳಿಗೂ ಮದುವೆಗಳು ರದ್ದಾಗುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ. ವರನ ಕಡೆಯವರು ಕೊಡಿಸಿದ ಲೆಹಂಗಾ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ಮದುವೆಯನ್ನೆ ರದ್ದು ಮಾಡಿಕೊಂಡ ಘಟನೆ ಉತ್ತರಖಂಡದಲ್ಲಿ ನಡೆದಿದೆ.
ಉತ್ತರಖಂಡದ ಹಲ್ದ್ವಾನಿಯಲ್ಲಿ ವಾಸಿಸುವ ಯುವತಿ ಮತ್ತು ಅಲ್ಮೋರಾದಲ್ಲಿ ವಾಸಿಸುವ ಯುವಕನ ನಡುವೆ ಮದುವೆಗೆ ಸಿದ್ಧತೆ ನಡೆಸಲಾಗುತ್ತಿತ್ತು . ನವೆಂಬರ್ 5 ರಂದು ಮದುವೆ ನಿಶ್ಚಯವಾಗಿತ್ತು. ಮದುವೆ ಸಮಾರಂಭದ ಅಂಗವಾಗಿ ವರನ ತಂದೆ ರೂ. 10,000 ಮೌಲ್ಯದ ಲೆಹೆಂಗಾವನ್ನು ಆರ್ಡರ್ ಮಾಡಿದ್ದರು. ಆದರೆ ಭವಿಷ್ಯದಲ್ಲಿ ಸೊಸೆಯಾಗಬೇಕಿದ್ದ ವಧುವಿಗೆ ಇಷ್ಟವಾಗಲಿಲ್ಲ. ವಧುವಿನ ತಾಯಿಯೂ ತನಗೆ ಇಷ್ಟವಾಗಲಿಲ್ಲ ಎಂದು ಹೇಳಿದ್ದಾಳೆ.
ಈ ವಿಷಯ ವರನ ಮನೆಯವರಿಗೆ ಗೊತ್ತಾಗಿ, ಎರಡು ಕುಟುಂಬಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ, ನಂತರ ದೊಡ್ಡ ಜಗಳ ನಡೆದು ಮದುವೆ ರದ್ದು ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಅಕ್ಟೋಬರ್ 30 ರಂದು ಯುವಕನ ಸಂಬಂಧಿಕರು ವಧುವಿನ ಮನೆಗೆ ತೆರಳಿ ಒಂದು ಲಕ್ಷ ರೂಪಾಯಿ ನಗದು ನೀಡಿ ಮದುವೆ ರದ್ದುಪಡಿಸುವ ಒಪ್ಪಂದ ಮಾಡಿಕೊಂಡಿದ್ದರು.
ಆದರೆ ಆನಂತರ ವಧುವಿನ ಕಡೆಯವರು ಮನಸ್ಸು ಬದಲಾಯಿಸಿ ಮತ್ತೆ ಯುವಕನ ಮನೆಗೆ ತೆರಳಿ ಮದುವೆ ಬಗ್ಗೆ ವಿಚಾರಿಸಿದ್ದಾರೆ. ಈ ಸಮದಲ್ಲಿ ಮತ್ತೆ ಗಲಾಟೆ ನಡೆದು ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆದಿದೆ. ವಿಷಯ ಪೊಲೀಸರಿಗೆ ಮುಟ್ಟಿ, ಪೊಲೀಸರು ಜಗಳ ನಡೆಯದಂತೆ ತಡೆದಿದ್ದಾರೆ. ಆನಂತರ ಮದುವೆ ಆಲೋಚನೆಗಳನ್ನ ಎರಡೂ ಕಡೆಯವರು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ.
Uttarakhand: Bride cancels wedding because she didn’t like the lehenga…