ಜಾಸ್ತಿ ಪಡಿತರ ಬಯಸಿದ್ದರೆ 20 ಮಕ್ಕಳಿಗೆ ಜನ್ಮ ನೀಡಬೇಕಿತ್ತು: ಉತ್ತರಾಖಂಡ ಮುಖ್ಯಮಂತ್ರಿ
ಉತ್ತರಾಖಂಡ: ಇತ್ತೀಚೆಗೆ ಮಹಿಳೆಯರು ರಿಪ್ಪಡ್ ಜೀನ್ಸ್ ಧರಿಸಿ ಸಮಾಜಕ್ಕೆ ಏನು ಸಂದೇಶ ಸಾರುತ್ತಿದ್ದೀರಾ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರಖಂಡದ ಸಿಎಂ ತಿರಥ್ ಸಿಂಗ್ ರಾವತ್ ಅವರು ಇದೀಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಹೌದು.. ಕೋವಿಡ್ ಸಾಂಕ್ರಾಮಿಕದ ಮಧ್ಯೆ ತಮ್ಮನ್ನು ತಾವು ಪೋಷಿಸಲು ಹೆಣಗಾಡುತ್ತಿದ್ದ ಬಡ ಕುಟುಂಬಗಳು ಕೇಂದ್ರ ಸರಕಾರದ ಯೋಜನೆಯಿಂದ ವಿತರಿಸುವ ಹೆಚ್ಚಿನ ಪಡಿತರವನ್ನು ಬಯಸಿದ್ದರೆ 20 ಮಕ್ಕಳಿಗೆ ಜನ್ಮ ನೀಡಬೇಕಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರತಿ ಮನೆಗೆ 5 ಕೆಜಿ ಪಡಿತರವನ್ನು ನೀಡಲಾಗಿದೆ. ಒಂದು ಮನೆಯಲ್ಲಿ 10 ಜನರಿದ್ದವರು 50 ಕೆಜಿ ಪಡೆದರೆ, 20 ಜನರಿಗೆ 100 ಕೆಜಿ ಅಕ್ಕಿ ಕೊಡಲಾಗಿದೆ. ಆದರೆ, ಇಬ್ಬರೇ ಇದ್ದವರು 10ಕೆಜಿ ಹಾಗೂ 20 ಜನರಿದ್ದವರು ಕ್ವಿಂಟಾಲ್ ಪಡೆದಾಗ ಕೆಲವರು ಅಸೂಯೆ ಪಟ್ಟಿದ್ದಾರೆ.
ಹೀಗಾಗಿ ನೀವು ಇಬ್ಬರಿಗೆ ಜನ್ಮ ನೀಡಿದ ಸಮಯದಲ್ಲಿ 20 ಮಕ್ಕಳಿಗೆ ಏಕೆ ಜನ್ಮ ನೀಡಲಿಲ್ಲ ಎಂದು ಹೇಳಿದ್ದಾರೆ.. ಈ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ತಿರಥ್ ಸಿಂಗ್ ರಾವತ್ ವಿರುದ್ಧ ಪ್ರತಿಪಕ್ಷ ನಾಯಕರು ಹಾಗೂ ಜನರು ಕೆಂಡ ಕಾರುತ್ತಿದ್ದಾರೆ.