Uttarakhand: ನದಿಯಲ್ಲಿ ಕಾರು ಕೊಚ್ಚಿ ಹೋಗಿ 9 ಮಂದಿ ಸಾವು…
ಶುಕ್ರವಾರ ಬೆಳಗ್ಗೆ ಧೇಲಾ ನದಿಯಲ್ಲಿ ಪ್ರವಾಸಿಗರ ಕಾರೊಂದು ಕಾರೊಂದು ಕೊಚ್ಚಿ ಹೋಗಿ 9 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡ ರಾಜ್ಯದ ರಾಮನಗರದಲ್ಲಿ ನಡೆದಿದೆ.
ಮುಂಜಾನೆ 5:45ಕ್ಕೆ ಈ ಘಟನೆ ನಡೆದಿದ್ದು, ಕಾರಿನಿಂದ 4 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನೂ 5 ಮೃತದೇಹಗಳು ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿಕೊಂಡಿವೆ. ಅಪಘಾತದ ನಂತರ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ, ಒಬ್ಬ ಬಾಲಕಿಯನ್ನ ಜೀವಂತವಾಗಿ ರಕ್ಷಿಸಲಾಗಿದೆ.
ಮೃತರೆಲ್ಲರೂ ಪಂಜಾಬ್‌ನ ಪಟಿಯಾಲ ನಿವಾಸಿಗಳು ಎಂದು ಕುಮಾವೂನ್ ವ್ಯಾಪ್ತಿಯ ಡಿಐಜಿ ಆನಂದ್ ಭರನ್ ತಿಳಿಸಿದ್ದಾರೆ. ಬೆಳಗ್ಗೆಯಿಂದ ಸುರಿದ ಭಾರೀ ಮಳೆಗೆ ನದಿಯಲ್ಲಿ ಪ್ರವಾಹ ಹೆಚ್ಚಾಗಿ ಈ ಅವಘಡ ಸಂಭವಿಸಿದೆ ಎಂದು ತಿಳಿಸಿದ್ದಾರೆ.
#WATCH Uttarakhand | 9 died, 1 girl rescued alive and about 5 trapped after a car washed away in Dhela river of Ramanagar amid heavy flow of water induced by rains early this morning, confirms Anand Bharan, DIG, Kumaon Range pic.twitter.com/Dxd27Di5mv
— ANI UP/Uttarakhand (@ANINewsUP) July 8, 2022
ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಳಿಗ್ಗೆ 5:45 ಸುಮಾರಿಗೆ ಕಾರು ಆ ಕಡೆ ತೆರಳದಂತೆ ಕಾರು ನಿಲ್ಲಿಸಲು ಜನ ಮುಂದಾಗಿದ್ದಾರೆ. ಕಾರು ವೇಗವಾಗಿದ್ದರಿಂದ ನಿಲ್ಲಿಸಲು ಸಾಧ್ಯವಾಗಿಲ್ಲ. ನದಿಯ ಹರಿವು ಹೆಚ್ಚಾಗಿದ್ದರಿಂದ ಕಾರನ್ನ ಸೆಳೆದುಕೊಂಡು ಹೋಗಿದೆ.
ಜುಲೈ 4 ರಂದು, ಹವಾಮಾನ ಇಲಾಖೆಯು ಉತ್ತರಾಖಂಡದ ಡೆಹ್ರಾಡೂನ್, ನೈನಿತಾಲ್, ಬಾಗೇಶ್ವರ್, ಪಿಥೋರಗಢ, ತೆಹ್ರಿ, ಪೌರಿ ಮತ್ತು ಚಂಪಾವತ್‌ನಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಿತ್ತು. ಸೋಮವಾರವೂ ಡೆಹ್ರಾಡೂನ್‌ನಲ್ಲಿ ಭಾರೀ ಮಳೆ ಸುರಿದಿದ್ದು, ಹಲವು ಮರಗಳು ಧರೆಗುರುಳಿದ್ದು, ವಾಹನಗಳಿಗೆ ಹಾನಿಯಾಗಿದೆ. ಗುಡ್ಡಗಾಡು ರಾಜ್ಯದಲ್ಲಿ ಭೂಕುಸಿತದ ಘಟನೆಗಳು ಹೆಚ್ಚಾಗಿವೆ.
Uttarakhand: Nine dead after car gets washed away by Dhela river in Nainital