ಮಗಳನ್ನ ಮದುವೆ ಮಾಡಿಕೊಡಲ್ಲ ಎಂದವನ ಜೀವವನ್ನೇ ತೆಗೆದ..!
ಉತ್ತರಪ್ರದೇಶ : ಪ್ರೀತಿಸಿದಾಕೆಯ ಕೈಹಿಡಿಯುವುದಕ್ಕೆ ಒಪ್ಪದ ಯುವತಿಯ ತಂದೆಯನ್ನೇ ಯುವಕ ಕೊಂದು ಹಾಕಿರೋ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
28 ವರ್ಷದ ಶ್ರೀಪಾಲ್ ಎಂಬಾತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಗಾಗ ಅವಳ ಮನೆಗೂ ಹೋಗಿ ಬರುತ್ತಿದ್ದ. ಆದ್ರೆ ಇತ್ತೀಚೆಗೆ ಯುವತಿಯ ಮನೆಗೆ ಹೋಗಿದ್ದ ಯುವಕ ಆಕೆಯ ತಮದೆಯ ಬಳಿ ಮಗಳನ್ನ ಮದುವೆ ಮಾಡಿಕೊಡಿ ಎಂದು ನೇರವಾಗಿ ಕೇಳಿದ್ದಾನೆ. ಆದ್ರೆ ಯುವತಿಯ ತಂದೆ ಈ ಪ್ರಾಸ್ತಾಪವನ್ನ ನಿರಾಕರಿಸಿದ್ದಾನೆ.
ಇದೇ ವಿಚಾರವಾಗಿ ಯುವತಿಯ ತಂದೆ ಮತ್ತು ಶ್ರೀಪಾಲ್ ನಡುವೆ ಜಗಳ ನಡೆದಿದೆ. ಗಲಾಟೆ ತಾರಕ್ಕೇರಿದ್ದು, ಶ್ರೀಪಾಲ್ ಯುವತಿ ತಂದೆಯ ಮೇಲೆ ದೊಣ್ಣೆಯಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಇದ್ರಿಂದಾಗಿ ಯುವತಿಯ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಶ್ರೀಪಾಲ್ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.
‘ಬಿಜೆಪಿ ಗೆದ್ರೆ ರಾಜ್ಯದ ಜನರನ್ನ ಹೊರಹಾಕ್ತಾರೆ.. ಪೊರಕೆ ಸೌಟೇ ಅವರಿಗೆ ಪಾಠ ಕಲಿಸುತ್ತೆ : ದೀದಿ ಕೆಂಡಾಮಂಡಲ..!
ತಾಯಿ – ಮಗಳ ಮೇಲೆ ಅತ್ಯಾಚಾರ, ನಾಲ್ವರ ಕೊಲೆ ಪ್ರಕರಣ : ಅಪರಾಧಿಗೆ ಗಲ್ಲು ಶಿಕ್ಷೆ..!
ತನ್ನ ಮಕ್ಕಳು ಸೇರಿ ಕುಟುಂಬದ 12 ಕ್ಕೂ ಹೆಚ್ಚು ಜನರಿಗೆ ವಿಷವುಣಿಸಿ ಪ್ರಿಯಕರನ ಜೊತೆ ಎಸ್ಕೇಪ್ ಆದ ಮಹಾತಾಯಿ..!