ತಾಯಿ – ಮಗಳ ಮೇಲೆ ಅತ್ಯಾಚಾರ, ನಾಲ್ವರ ಕೊಲೆ ಪ್ರಕರಣ : ಅಪರಾಧಿಗೆ ಗಲ್ಲು ಶಿಕ್ಷೆ..!
ಉತ್ತರಪ್ರದೇಶ: 2019ರಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗೆ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ನಜಿರುದ್ದಿನ್ ಅಲಿಯಾಸ್ ಪವ್ವಾ ಎಂಬಾತ ಅಪರಾಧಿಯಾಗಿದ್ದಾನೆ. ಈತ 2019ರಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಸಾಲದ್ದಕ್ಕೆ ಮಹಿಳೆಯ ಪತಿ ಹಾಗೂ ಅವರ 4 ತಿಂಗಳ ಮಗುವನ್ನೂ ಸಹ ಕೊಲೆ ಮಾಡಿದ್ದ.
ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಲಯವು ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಆತನಿಗೆ 9 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದೆ.
ಉತ್ತರ ಪ್ರದೇಶದ ಅಜಾಮ್ಗಡ ಜಿಲ್ಲೆಯ ಮುಬಾರಕ್ಪುರದಲ್ಲಿ ಘಟನೆ ನಡೆದಿದ್ದು, ಪ್ರಕರಣ ಬೇಧಿಸಿದ್ದಕ್ಕೆ ಉತ್ತರ ಪ್ರದೇಶ ಸರ್ಕಾರ ಪೊಲೀಸರಿಗೆ ಹಾಗೂ ವಾದ ಮಂಡಿಸಿದ ವಕೀಲರ ತಂಡಕ್ಕೆ 1 ಲಕ್ಷ ರೂ. ಬಹುಮಾನ ಘೋಷಿಸಿದೆ.
ಹಾವಿನ ವಿಷ ಮಾರಾಟ ಮಾಡ್ತಿದ್ದ 6 ಮಂದಿ ಬಂಧನ – 1 ಕೋಟಿ ಮೌಲ್ಯದ ವಿಷ ವಶ..!
ತನ್ನ ಮಕ್ಕಳು ಸೇರಿ ಕುಟುಂಬದ 12 ಕ್ಕೂ ಹೆಚ್ಚು ಜನರಿಗೆ ವಿಷವುಣಿಸಿ ಪ್ರಿಯಕರನ ಜೊತೆ ಎಸ್ಕೇಪ್ ಆದ ಮಹಾತಾಯಿ..!
ಅಪ್ರಾಪ್ತ ಹುಡುಗಿಯರನ್ನು ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದ ಆಶಾ ಕಾರ್ಯಕರ್ತೆ ಅಂದರ್..!