ಹಾವಿನ ವಿಷ ಮಾರಾಟ ಮಾಡ್ತಿದ್ದ 6 ಮಂದಿ ಬಂಧನ – 1 ಕೋಟಿ ಮೌಲ್ಯದ ವಿಷ ವಶ..!
ಒಡಿಶಾ: ಗ್ಯಾಂಗ್ ಒಂದು ಅಕ್ರಮವಾಗಿ ಹಾವಿನ ವಿಷವನ್ನು ಅಕ್ರಮವಾಗಿ ಮಾರಾಟ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ವಿಷವನ್ನ ಅಕ್ರಮವಾಗಿ ಸಾಗಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಗ್ಯಾಂಗ್ ಅನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಜೈಲಿಗಟ್ಟಿದ್ದಾರೆ. ಓರ್ವ ಮಹಿಳೆ ಸೇರಿದಂತೆ 6 ಮಂದಿಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ 1ಲೀಟರ್ ಹಾವಿನ ವಿಷ ವಶಪಡಿಸಿಕೊಳ್ಳಲಾಗಿದೆ.
ಹಾವಿನ ವಿಷಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಕೋಟಿ ರೂಪಾಯಿ ಬೆಲೆ ಇದೆ. ಇಂತಹ ಹಾವಿನ ವಿಷವನ್ನ 10 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಈ ಗ್ಯಾಂಗ್ ಯತ್ನಿಸಿದ್ದು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದೆ. ಇನ್ನೂ ಈ ಪಾಪಿಗಳು 1 ಲೀಟರ್ ಹಾವಿನ ವಿಷವನ್ನು ತೆಗೆಯಲು ಬರೋಬ್ಬರಿ 200 ನಾಗರಹಾವುಗಳನ್ನ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.
ತನ್ನ ಮಕ್ಕಳು ಸೇರಿ ಕುಟುಂಬದ 12 ಕ್ಕೂ ಹೆಚ್ಚು ಜನರಿಗೆ ವಿಷವುಣಿಸಿ ಪ್ರಿಯಕರನ ಜೊತೆ ಎಸ್ಕೇಪ್ ಆದ ಮಹಾತಾಯಿ..!
ಅಪ್ರಾಪ್ತ ಹುಡುಗಿಯರನ್ನು ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದ ಆಶಾ ಕಾರ್ಯಕರ್ತೆ ಅಂದರ್..!
ಅತ್ಯಾಚಾರವೆಸಗಿದವ ಹಾಗೂ ಸಂತ್ರಸ್ತೆ ಇಬ್ಬರನ್ನೂ ಥಳಿಸಿ ಮೆರವಣಿಗೆ ಮಾಡಿದ ರಾಕ್ಷಸರು..!