ತನ್ನ ಮಕ್ಕಳು ಸೇರಿ ಕುಟುಂಬದ 12 ಕ್ಕೂ ಹೆಚ್ಚು ಜನರಿಗೆ ವಿಷವುಣಿಸಿ ಪ್ರಿಯಕರನ ಜೊತೆ ಎಸ್ಕೇಪ್ ಆದ ಮಹಾತಾಯಿ..!
ಮಧ್ಯಪ್ರದೇಶ : ಪಾಪಿ ತಾಯಿಯೊಬ್ಬಳು ತನ್ನ ಸ್ವಂತ ಮಕ್ಕಳು ಸೇರಿದಂತೆ ಇಡೀ ಕುಟುಂಬಕ್ಕೆ ವಿಷುಣಿಸಿ ತನ್ನ ಪ್ರಿಯಕರನ ಜೊತೆಗೆ ಪರಾರಿಯಾಗಿರೋ ಘಟನೆ ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ನಡೆದಿದೆ. ಈ ಮಹಿಳೆ ತನ್ನ ಸ್ವಂತ ಮಕ್ಕಳೂ ಸೇರಿದಂತೆ ಇಡೀ ಕುಟುಂಬದ ಎಲ್ಲರಿಗೂ ವಿಷ ಉಣಿಸಿ ಇನಿಯನ ಜೊತೆಗೆ ಪರಾರಿಯಾಗಿದ್ಧಾಳೆ. ವಿಷ ಸೇವಿಸಿದ 12ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ. ಈ ಸಂಬಂಧ ಬಾರಾಸನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ಧಾರೆ.
ಪ್ರಕರಣದ ಹಿನ್ನೆಲೆ
ಆರೋಪಿ ಮಹಿಳೆಯ ಮೊದಲನೇ ಪತಿ ಮೃತಪಟ್ಟಿದ್ದ. ಬಳಿಕ ಮಹಿಳೆಗೆ ಪತಿಯ ಕಿರಿಯ ಸಹೋದರ ಛೋಟು ಖಾನ್ ಜೊತೆಗೆ ಮದುವೆ ಮಾಡಲಾಗಿತ್ತು. ಆದ್ರೆ ಮಹಿಳೆ ಛೋಟು ಖಾನ್ ಸೋದರ ಮಾವ ಲೋಖನ್ ಖಾನ್ ಜೊತೆಗೆ ಅಕ್ರಮ ಸಂಬಂಧವನ್ನ ಬೆಳೆಸಿದ್ದಳು. ಈ ವಿಚಾರ ಗೊತ್ತಾದ ಮೇಲೆ ಕುಟುಂಬದಲ್ಲಿ ದೊಡ್ಡ ಗಲಾಟೆಯೇ ನಡೆದು ಹೋಗಿದೆ. ಬಳಿಕ ಕುಟುಂಬ ಸದಸ್ಯರ ಜೊತೆಗೆ ತನ್ನ ಸ್ವಂತ ಮಕ್ಕಳಿಗೆ ವಿಷಉಣಿಸಿ ಲೋಖನ್ ಖಾನ್ ಜೊತೆ ಪರಾರಿಯಾಗಿದ್ದಾಳೆ.
ಅಪ್ರಾಪ್ತ ಹುಡುಗಿಯರನ್ನು ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದ ಆಶಾ ಕಾರ್ಯಕರ್ತೆ ಅಂದರ್..!
ಅತ್ಯಾಚಾರವೆಸಗಿದವ ಹಾಗೂ ಸಂತ್ರಸ್ತೆ ಇಬ್ಬರನ್ನೂ ಥಳಿಸಿ ಮೆರವಣಿಗೆ ಮಾಡಿದ ರಾಕ್ಷಸರು..!