12 ವರ್ಷದ ವಿದ್ಯಾರ್ಥಿನಿಗೆ ಲವ್ ಲೆಟರ್ ಬರೆದ ಶಿಕ್ಷಕ , ತಿರಸ್ಕರಿಸಿದ್ರೆ ಆತ್ಮಹತ್ಯೆ ಬೆದರಿಕೆ.!
ಉತ್ತರಪ್ರದೇಶ : ವಿದ್ಯೆ ಕಲಿಸುವ ಕೊಡುವ ಗುರುಗಳು ದೇವರಿಗೆ ಸಮ.. ನಾವು ತಪ್ಪು ದಾರುಯಲ್ಲಿ ನಡೆದರೆ ತಿದ್ದಿ ಬುದ್ದಿ ಹೇಳಿ ಮಾರ್ಗದರ್ಶನ ನೀಡುವುದು ಶಿಕ್ಷಕರು… ಆದ್ರೆ ಅಂತಹ ಸ್ಥಾನಕ್ಕೆ ಕೆಲವರು ಕಳಂಕ ತರುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ..
ಇಲ್ಲೊಬ್ಬ ಶಿಕ್ಷಕ ತನ್ನ ಸ್ಥಾನಕ್ಕೆ ಅಪಮಾನ ಎಂಬಂತಹ ಕೆಲಸ ಮಾಡಿ ಗ್ರಾಮಸ್ಥರಿಂದ ಛೀಮಾರಿ ಹಾಕಿಸಿಕೊಂಡಿದ್ದಾನೆ. ಈತ 12 ವರ್ಷದ ವಿದ್ಯಾರ್ಥಿನಿಯೊಬ್ಬಳಿಗೆ ಲವ್ ಲೆಟರ್ ಬರೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.. ಹೌದು.. ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಖಾಸಗಿ ಶಾಲೆಯ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದಿದ್ದಾನೆ ಎನ್ನಲಾಗಿದೆ. ಈ ವಿಚಾರ ಗೊತ್ತಾಗ್ತಿದ್ದಂತೆ ಗ್ರಾಮಸ್ಥರು ಆತನ ಮುಖಕ್ಕೆ ಮಸಿ ಬಳಿದು, ತಲೆ ಬೋಳಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿದ್ದಾರೆ.
ಖೇರಿ ಗ್ರಾಮದ ಖಾಸಗಿ ಶಾಲೆಯ ವೈಭವ್ ನಾಯಕ್ (24) ಎಂಬ ಶಿಕ್ಷಕನೊಬ್ಬ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕಿಗೆ ಲವ್ ಲೆಟರ್ ಬರೆದು ಕಳುಹಿಸಿದ್ದಾನೆ ಎನ್ನಲಾಗಿದೆ. ಅದು ಅಲ್ದೇ ಒಂದು ವೇಳೆ ನೀನು ನನ್ನೊಂದಿಗೆ ಮಾತನಾಡಲು ನಿರಾಕರಿಸಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ವಿಚಾರ ಗೊತ್ತಾದ ನಂತರ ಸ್ಥಳೀಯರು ಆತನನ್ನ ಹಿಡಿದು ಥಳಿಸಿದ್ದಾರೆ.. ಬಳಿಕ ಆತನ ತಲೆ ಬೋಳಿಸಿ, ಮುಖಕ್ಕೆ ಕಪ್ಪು ಬಳಿದು ಹಳ್ಳಿಯ ಪೂರ್ತಿ ಮೆರವಣಿಗೆ ಮಾಡಿಸಿದ್ದಾರೆ ಎನ್ನಲಾಗಿದೆ.
ಅಲ್ಲದೇ ಈತ ಈ ಹಿಂದೆಯೂ ಅನೇಕ ಬಾರಿ ತನ್ನ ಮಗಳಿಗೆ ಕಿರುಕುಳ ನೀಡಿದ್ದಾನೆ ಎಂದು ವಿದ್ಯಾರ್ಥಿನಿಯ ಪೋಷಕರು ಆರೋಪಿಸಿದ್ದಾರೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಪೊಕ್ಸೊ ಕಾಯ್ದೆಯ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.