Uttarapradesha – ನಾಲ್ಕು ಕೈ ನಾಲ್ಕು ತೋಳುಗಳನ್ನ ಹೊಂದಿರುವ ಮಗು ಜನನ…
ಉತ್ತರಪ್ರದೇಶ: ನಾಲ್ಕು ಕಾಲು ಹಾಗೂ ನಾಲ್ಕು ತೋಳುಗಳನ್ನ ಹೊಂದಿರುವ ವಿಚಿತ್ರ ಮಗುವೊಂದು ಉತ್ತರಪ್ರದೇಶದ ಹರ್ದೊಯಿಯಲ್ಲಿ ಜನಿಸಿದೆ. ಹೆಣ್ಣು ಮಗು ಇದಾಗಿದ್ದು, ಅರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸುದ್ದಿ ಹಬ್ಬುತ್ತಿದ್ದಂತೆ ಮಗು ದೇವಿಯ ಪ್ರತಿರೂಪ ಎಂದು ಭಾವಿಸಿ ತಂಡೋಪತಂಡವಾಗಿ ಆಗಮಿಸಿ ಮಗುವನ್ನ ನೋಡಿಕೊಂಡು ಹೋಗುತ್ತಿದ್ದಾರೆ.
ಕರೀನಾ ಹಾಗೂ ಸಂಜಯ್ ಎಂಬ ದಂಪತಿಗಳು ಉತ್ತರ ಪ್ರದೇಶ ರಾಜ್ಯದ ಹರ್ದೋಯಿ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಜನನ ನೀಡಿದ್ದಾರೆ. ಕರೀನಾ ಅವರಿಗೆ ಶನಿವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಅವರು ಈ ವಿಚಿತ್ರ ಮಗುವಿಗೆ ಜನ್ಮ ನೀಡಿದ್ದಾರೆ.
ನಾಲ್ಕು ಕಾಲು ಹಾಗೂ ಕೈಗಳನ್ನು ಹೊಂದಿರುವ ಈ ವಿಚಿತ್ರ ಮಗುವಿನ ಜನನದ ನಂತರ ಕುಟುಂಬ ಸದಸ್ಯರು ಅಸಮಾಧಾನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ವೈದ್ಯಕೀಯ ಅಪರೂಪದ ಹೊರತಾಗಿಯೂ ಈ ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. Uttarapradesha -Baby born with four legs and four arms hailed a ‘miracle’