ADVERTISEMENT
Tuesday, July 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನಾವು ವೋಕಲ್ ಆಗೋದು ಲೋಕಲ್ ಆಗಿದ್ದಾಗ ಮಾತ್ರ : ನಿರ್ದೇಶಕ ನಾಗಾಭರಣ

admin by admin
September 16, 2020
in Newsbeat, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು : ಬೆಂಗಳೂರಿನ ವಿಶ್ವಾಸ್ ಟೆಕ್ ಪ್ರೈವೆಟ್ ಲಿಮಿಟೆಡ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆ ಗೆಳೆಯ ವಿ-ಪೇ ಆಪ್ ಮತ್ತು ವಿ-ಕಾರ್ಡ್ ಅನ್ನು ಖ್ಯಾತ ನಿರ್ದೇಶಕ ಹಾಗೂ ಕರ್ನಾಟಕ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮತ್ತು ಅಂತಾರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್ ರವಿ ಹಾಗೂ ಕವಿ ಹಾಗೂ ಸಾಹಿತಿ ದುಂಡಿರಾಜು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ನಿರ್ದೇಶಕ ಟಿ.ಎಸ್.ನಾಗಾಭರಣ, ನಾವು ವೋಕಲ್ ಆಗೋದು ಲೋಕಲ್ ಆಗಿದ್ದಾಗ ಮಾತ್ರ. ನಾವು ನಮ್ಮತನವನ್ನು ಉಳಿಸಿಕೊಂಡಾಗ ಮಾತ್ರ ಅದು ನಮ್ಮನ್ನು ಮೀರಿ ಬೆಳೆಯುತ್ತಾ ಹೋಗುತ್ತೆ. ಇಲ್ಲಿ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ವಿ-ಪೇ ಆಪ್ ಬಿಡುಗಡೆ ಮಾಡಲಾಗುತ್ತಿದೆ. ಆಗಾಗಿ ನಾವು ಕನ್ನಡದಲ್ಲೇ ವ್ಯವಹರಿಸಬೇಕಾಗುತ್ತದೆ. ಆಪ್ ನ ಮೂಲ ಭಾಷೆ ಕೂಡ ಕನ್ನಡವಾಗಿರಬೇಕು ಎಂದು ಸಲಹೆ ನೀಡಿದರು. ನಾನು, ನನ್ನದು ಎಂದು ಹೆಮ್ಮೆಯಿಂದ ಬಂದಾಗ ನನ್ನತನ ಉಳಿಯುತ್ತೆ. ಅದರ ಮುಖಾಂತರ ನಾವು ಇಡೀ ಪ್ರಚಂಚಕ್ಕೆ ಒಂದು ಮಾದರಿ ಇಡಬಹುದು. ನಮ್ಮ ಬಗ್ಗೆ ನಾವು ಹೆಮ್ಮೆ ಪಡೆದುಕೊಂಡಾಗ ಮಾತ್ರ ಪ್ರಪಂಚಕ್ಕೆ ಮಾದರಿ ಆಗಬಹುದು.
ಇಂದು ಬಿಡುಗಡೆ ಆಗಿರುವ ಆಪ್ ಇಡಿ ಭಾರತಕ್ಕೆ ಕೊಡುಗೆ ಆಗಬೇಕು. ನೀವು ದೊಡ್ಡ ಮಟ್ಟಕ್ಕೆ ಬೆಳೆಯಬೇಕು. ಇವತ್ತು ತಂತ್ರಾಂಶಗಳಲ್ಲಿ ಗಣಕತಂತ್ರಗಳಲ್ಲಿ ಕನ್ನಡವನ್ನು ಬಹಳ ಚೆನ್ನಾಗಿ ಬಳಸುತ್ತಿದ್ದೇವೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಆಪ್ ಗಳು ರೆಡಿಯಾಗಿವೆ. ಯಾರಿಗೂ ಕೀಳರಿಮೆ ಬೇಡ, ಕನ್ನಡದಲ್ಲಿ ಎಲ್ಲವೂ ಆಗುತ್ತೆ. ನವೆಂಬರ್ ಒಂದರಿಂದ ಯುಆರ್ ಎಲ್ ಕೂಡ ಕನ್ನಡದಲ್ಲೇ ಬರಲಿದೆ ಎಂದು ಇದೇವೇಳೆ ತಿಳಿಸಿದರು.
ಸ್ಪರ್ಧೆ ಇಲ್ಲದ ಬದುಕಿಲ್ಲ. ಇಂತಹ ಸನ್ನಿವೇಶವನ್ನು ಒಂದು ಸವಾಲಾಗಿ ಸ್ವೀಕರಿಸಬೇಕು. ಆ ಸವಾಲನ್ನು ಅವಕಾಶವನ್ನಾಗಿ ಮಾರ್ಪಡಿಸಿಕೊಳ್ಳಬೇಕು, ಅಂತಹ ಅದ್ಭುತ ಅವಕಾಶ ನಿಮ್ಮೆಲ್ಲರಿಗೂ ಸಿಕ್ಕಿದೆ, ಅದನ್ನು ಬಳಸಿಕೊಂಡು ವಿಶ್ವಾಸ್ ವಿ-ಪೇ ರೈತರ ಮನೆಮನದಲ್ಲೂ ಮಾತಾದರೇ ತಾನೇತಾನಾಗಿ ಇಡೀ ಭಾರತಕ್ಕೆ ಮಾದರಿ ಆಗುತ್ತದೆ. ಅಂತಹ ಕೆಲಸ ನಿಮ್ಮದಾಗಲಿ ಎಂದು ಆಶಿಸಿದರು.
ಇನ್ನು ಈ ವಿ-ಪೇ ಸಂಸ್ಥೆಯ ಪ್ರತಿಯೊಬ್ಬ ಪ್ರತಿನಿಧಿ ಕೂಡ ನಿಮ್ಮ ನಿಮ್ಮ ರೈತರನ್ನ, ಕನ್ನಡಮನಸ್ಸುಗಳನ್ನು ಒಟ್ಟುಗೂಡಿಸಿದರೇ ವಿಶ್ವಾಸ್ ವಿ-ಪೇ ಪ್ರತಿಯೊಂದು ಮನೆಯನ್ನು ತಲುಪುತ್ತೆ, ಅದರ ಮುಖಾಂತರ ಅದು ನಿಜವಾದ ಭಾರತೀಯತೆಯನ್ನು ಹೇಳುತ್ತಾ ಹೋಗುತ್ತೆ. ಭಾರತೀಯತೆ ಅಂದ್ರೆ ಪ್ರತಿವೊಂದು ರಾಜ್ಯವೂ ತನ್ನತನವನ್ನ ಹೇಳಿದಾಗ ಅದು ಭಾರತೀಯತೆಯೇ ಆಗಿರುತ್ತೆ. ಎಲ್ಲ ಸಂಸ್ಕøತಿಗಳ ಆಗರ ಭಾರತ. ಭಾರತೀಯ ಪರಂಪರೆ ನಮಗೆ ತಿಳಿಸಿರುವಂತಹ ಗುರು ಕಾಣಿಕೆ ಏನಿದೆ, ಅದನ್ನ ನಾವೀಗ ಸಲ್ಲಿಸುತ್ತಿದ್ದೇವೆ. ಗುರು ಕಾಣಿಕೆ ಸಲ್ಲಿಸೋಕೆ ಇದೊಂದು ವೇದಿಕೆ ಸಜ್ಜಾಗಿದೆ. ವಿ-ಪೇ ಅನ್ನೋದು ವಿ ಅರ್ನ್ ಅನ್ನುವಾಗೇ ಆಗಲಿ, ವಿ-ಪೇ ಭಾರತಕ್ಕೆ ಮಾದರಿ ಆಗಲಿ ಎಂದು ಆಶಿಸಿದರು.

Related posts

vaastu-shastra-directions-brahmasthana-guidelines

Astro- ವಾಸ್ತು ಶಾಸ್ತ್ರದ ಪ್ರಾಮಾಣಿಕ ದಿಕ್ಕು ನಿರ್ದೇಶನಗಳು ಹೀಗಿವೆ ನೋಡಿ..!

July 28, 2026
guru-purnima-2026-gajakesari-yoga-rashi-bhavishya

Astro- 2026ರ ಗುರು ಪೂರ್ಣಿಮೆಯಂದು ಗಜಕೇಸರಿ ಯೋಗ ಸಿಗಲಿದೆ..ಈ 12 ರಾಶಿಗಳಲ್ಲಿ ಯಾರಿಗೆ ಶುಭ..? ಯಾರಿಗೆ ಅಶುಭ..?

July 28, 2026

ಮುಖ್ಯವಾಗಿ ರೈತರು, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ವಿ ಪೇ ಆಪ್ ಮತ್ತು ವಿ-ಕಾರ್ಡ್ ಅನ್ನು ಅಭಿವೃದ್ದಿಪಡಿಸಲಾಗಿದೆ. ವಿ ಪೇ- ಆಪ್ ಮುಖಾಂತರ ಹಣ ವರ್ಗಾವಣೆ, ಎಲ್ಲಾ ರೀತಿಯ ಮೊಬೈಲ್ ರಿಚಾರ್ಜ್, ಡಿಶ್ ರಿಚಾರ್ಜ್, ವಿದ್ಯುತ್ ಬಿಲ್ ಗಳನ್ನು ಪಾವತಿ ಮಾಡಬಹುದಾಗಿದೆ.  ಇನ್ನು ವಿ-ಕಾರ್ಡ್ ಮೂಲಕ ಗ್ರಾಹಕರು ಸದಸ್ಯತ್ವ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ಸದಸ್ಯತ್ವ ಪಡೆದುಕೊಂಡವರಿಗೆ ಸಂಸ್ಥೆಯಿಂದ ಒಂದು ಸಾವಿರದಿಂದ ಹತ್ತು ಸಾವಿರದವರೆಗೆ ಕಡಿಮೆ ಬಡ್ಡಿ ದರದಲ್ಲಿ 24 ಗಂಟೆಯೊಳಗಡೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಹಾಗೇ ರೈತ ವ್ಯವಸಾಯಕ್ಕೆ ಬಳಸುವ ಉಪಕರಣಗಳು, ಗೃಹ ಬಳಕೆಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಖರೀದಿಗೂ ವಿ ಪೇ ಆಪ್ ಮತ್ತು ವಿ-ಕಾರ್ಡ್ ಉಪಯೋಗವಾಗಲಿದೆ. ವಿ ಪೇ ಆಪ್ ಮತ್ತು ವಿ-ಕಾರ್ಡ್ ಮೂಲಕ ಖರೀದಿ ಮಾಡಿದಾಗ ಅತ್ಯಾಕರ್ಷಕ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.
ಪ್ರತಿ ತಾಲೂಕಿನಲ್ಲಿ ವಿ ಪೇ ಆಪ್ ಮತ್ತು ವಿ-ಕಾರ್ಡ್ ಫ್ರಾಂಚೈಸಿಗಳನ್ನು ಹೊಂದಿದೆ. ಈ ಫ್ರಾಂಚೈಸಿಗಳ ಮೂಲಕ ಗ್ರಾಹಕರು ವಿ ಪೇ ಆಪ್ ಮತ್ತು ವಿ-ಕಾರ್ಡ್ ಬಳಕೆ ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವಾಸ್ ಟೆಕ್ ಪ್ರೈವೆಟ್ ಲಿಮಿಟೆಡ್ ನ ಎಂಡಿ ಎನ್. ವಿಶ್ವ, ನಿರ್ದೇಶಕರಾದ ಸಂಗಮೇಶ್ ಮತ್ತು ಯಲ್ಲಪ್ಪ ಅವರು ಉಪಸ್ಥಿತರಿದ್ದರು.

ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಆಪ್ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665.

Tags: bangaloreTS NagabharanaV-Pay AppVishwas Tech Private Limited
ShareTweetSendShare
Join us on:

Related Posts

vaastu-shastra-directions-brahmasthana-guidelines

Astro- ವಾಸ್ತು ಶಾಸ್ತ್ರದ ಪ್ರಾಮಾಣಿಕ ದಿಕ್ಕು ನಿರ್ದೇಶನಗಳು ಹೀಗಿವೆ ನೋಡಿ..!

by admin
July 28, 2026
0

ವಾಸ್ತು ಶಾಸ್ತ್ರ –  ದಿಕ್ಕು ನಿರ್ದೇಶನಗಳು, ಬ್ರಹ್ಮಸ್ಥಾನ (ಮಧ್ಯಭಾಗ) ತಟಸ್ಥ ಶಕ್ತಿಯ ಕೇಂದ್ರ (Neutral Energy Zone) ಮನೆಯ ಮಧ್ಯಭಾಗವನ್ನು ತೆರವು ಮತ್ತು ಸ್ವಚ್ಛವಾಗಿಡುವುದು ಉತ್ತಮ. ಶ್ರೀ ಕ್ಷೇತ್ರ...

guru-purnima-2026-gajakesari-yoga-rashi-bhavishya

Astro- 2026ರ ಗುರು ಪೂರ್ಣಿಮೆಯಂದು ಗಜಕೇಸರಿ ಯೋಗ ಸಿಗಲಿದೆ..ಈ 12 ರಾಶಿಗಳಲ್ಲಿ ಯಾರಿಗೆ ಶುಭ..? ಯಾರಿಗೆ ಅಶುಭ..?

by admin
July 28, 2026
0

ಬುಧವಾರ ಜುಲೈ 29ರಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಎನ್ನಲಾಗುವುದು ಈ ಮಂಗಳಕರ ದಿನ ಜ್ಯೋತಿಷ್ಯದಲ್ಲಿ ತುಂಬಾ ವಿಶೇಷವಾಗಿದೆ. ಯಾಕೆಂದರೆ ಈ...

rishikanta-singh-commonwealth-games-silver-medal-journey

Rishikantha singh – ಪಾತ್ರೆ ತೊಳೆಯುತ್ತಿದ್ದ ಕೈಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನ ಬೆಳ್ಳಿಯ ಪದಕ..! ಢಾಬಾದಿಂದ ಗ್ಲಾಸ್ಗೋ ಪೋಡಿಯಂ ತನಕದ ರೋಚಕ ಜರ್ನಿ..!

by admin
July 28, 2026
0

ಪಾತ್ರೆ ತೊಳೆಯುತ್ತಿದ್ದ ಕೈಗಳಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನ ಬೆಳ್ಳಿಯ ಪದಕ..! ಢಾಬಾದಿಂದ ಗ್ಲಾಸ್ಗೋ ಪೋಡಿಯಂ ತನಕದ ರೋಚಕ ಜರ್ನಿ..! ಅವನು ಶಾಲೆಗೆ ಹೋಗಿ ಓದಿದ್ದು ಬರೀ 8ನೇ...

‘ಸಿದ್ದರಾಮಯ್ಯ ನಿವೃತ್ತಿಯಾದರೆ ಕಾಂಗ್ರೆಸ್‌ಗೆ ಕಷ್ಟ’: ಎಚ್.ಸಿ. ಬಾಲಕೃಷ್ಣ

‘ಸಿದ್ದರಾಮಯ್ಯ ನಿವೃತ್ತಿಯಾದರೆ ಕಾಂಗ್ರೆಸ್‌ಗೆ ಕಷ್ಟ’: ಎಚ್.ಸಿ. ಬಾಲಕೃಷ್ಣ

by Shwetha
July 28, 2026
0

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಾಜಕೀಯ ನಿವೃತ್ತಿಯ ಸುಳಿವು ನೀಡಿದ ಬೆನ್ನಲ್ಲೇ, ಕಾಂಗ್ರೆಸ್‌ನಲ್ಲಿ ಈ ಕುರಿತು ಚರ್ಚೆಗಳು ಜೋರಾಗಿವೆ. ಈ...

ಸಿ.ಟಿ. ರವಿ ವಿರುದ್ಧದ FIR ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ

ಸಿ.ಟಿ. ರವಿ ವಿರುದ್ಧದ FIR ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ

by Shwetha
July 28, 2026
0

ಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧ ದಾಖಲಾಗಿದ್ದ FIR ಅನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram