ಕಾಂಗ್ರೆಸ್ ಕೊಡೋ ಹಣ ಈಸ್ಕೊಳ್ಳಿ, ಮುನಿರತ್ನಗೆ ವೋಟ್ ಹಾಕಿ : ಸೋಮಣ್ಣ
ಬೆಂಗಳೂರು : ಕಾಂಗ್ರೆಸ್ ನವರು ಕೊಡುವ ಹಣವನ್ನು ಪಡೆಯಿರಿ. ಆದ್ರೆ ಮುನಿರತ್ನ ಅವರಿಗೆ ಮತ ಕೊಡಿ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ರಾಜರಾಜೇಶ್ವರಿ ನಗರ ಉಪಚುನಾವಣೆ ರಂಗೇರಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ವಿ.ಸೋಮಣ್ಣ, ಆರ್.ಅಶೋಕ್ ರೋಡ್ ಶೋ ಮೂಲಕ ಮುನಿರತ್ನ ಪರ ಪ್ರಚಾರ ನಡೆಸಿದರು.
ಈ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ ವಿ.ಸೋಮಣ್ಣ, ಕಾಂಗ್ರೆಸ್‍ನವರು ಕೊಡುವ ಹಣವನ್ನು ಪಡೆಯಿರಿ. ಆದರೆ, ಮುನಿರತ್ನಗೆ ಮತ ಕೊಡಿ ಎಂದರು.
ಮುನಿರತ್ನರನ್ನು 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿ. ಯಾರ್ಯಾರು ಏನೇನು ಮಾತನಾಡುತ್ತಿದ್ದಾರೆ ಅಂತ ನಾವು ಗಮನಿಸ್ತಿದ್ದೇವೆ. ಕೊರೊನಾ ಸಂದರ್ಭದಲ್ಲಿ ಮುನಿರತ್ನ ಸಹಸ್ರಾರು ಕುಟುಂಬಗಳಿಗೆ ಊಟ ಕೊಟ್ಟವರು.
ಸೂರ್ಯ ಚಂದ್ರರಷ್ಟೇ ಸತ್ಯ ಮುನಿರತ್ನರೇ ಗೆಲ್ಲೋದು. ಮುನಿರತ್ನರ ಗೆಲುವು ನಿಮ್ಮ ಅಭಿವೃದ್ಧಿ ಎಂದು ತಿಳಿಸಿದರು.
ಇದನ್ನೂ ಓದಿ : ರಾಹುಲ್ ಪಾಕ್ ಪರ ಮಾತಾಡೋದು ಅವ್ರ ಬಾಲಿಷತನ ತೋರಿಸುತ್ತೆ : ಜೋಶಿ
ಬಳಿಕ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಧರ್ಮಯುದ್ಧದ ಅರ್ಥ ಗೊತ್ತೇನ್ರಿ ನಿಮಗೆ, ಜಾತಿ ಹೆಸರಲ್ಲಿ ಮತ ಕೇಳೋದು ಧರ್ಮನಾ.. ನಾಚಿಕೆ ಆಗಬೇಕು ನಿಮಗೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಧರ್ಮಯುದ್ಧ ಹೇಳಿಕೆಗೆ ಸಚಿವ ಆರ್.ಅಶೋಕ್ ಟಾಂಗ್ ನೀಡಿದರು.
ಮುನಿರತ್ನ ಜಾತಿ ಕೇಳದೇ ರೇಷನ್ ಕಿಟ್ ಕೊಟ್ಟರು. ಡಿಕೆಶಿ, ಡಿಕೆಸು ಒಂದು ಕೆಜಿ, ಅರ್ಧ ಕೆಜಿ, ಹತ್ತು ಗ್ರಾಂ ಅಕ್ಕಿ ಕೊಟ್ಟರಾ?. ಅವರಿಬ್ಬರು ಕನಕಪುರದ ಜಪ ಮಾಡ್ತಿದ್ದಾರೆ.
ಕನಕಪುರದಿಂದ ಆಚೆ ಬಂದು ಅವರು ಅಭಿವೃದ್ಧಿ ಮಾಡಲಿಲ್ಲ. ಕಾಂಗ್ರೆಸ್ ಪಕ್ಷದ್ದು ಅಧರ್ಮದ ರಾಜಕಾರಣ ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ಮನೆ ಬಾಗಿಲಿಗೆ ರಾಜ್ಯದ ಮುಖ್ಯಮಂತ್ರಿ ಬಂದಿದ್ದಾರೆ. ರಾಜ್ಯಕ್ಕೆ ಅಭಿವೃದ್ಧಿ ಹೆಸರು ಕೊಟ್ಟವರು ಯಡಿಯೂರಪ್ಪನವರು. ಇವತ್ತು ನನ್ನನ್ನು ಕರೆದು 950 ಕೋಟಿ ರೂ. ಬಿಡುಗಡೆ ಮಾಡಿದರು.
ಸಿದ್ದರಾಮಯ್ಯರವರು ನಯಾ ಪೈಸೆ ಕೊಟ್ಟಿಲ್ಲ. ಡಿಕೆಶಿ ವಿದ್ಯುತ್ ಸಚಿವರು ಆಗಿದ್ದರೂ, ಒಂದು ಎಲೆಕ್ಟ್ರಿಕ್ ಪೋಲ್ ಕೂಡ ಹಾಕಿಲ್ಲ. ಕಾಂಗ್ರೆಸ್‍ನವರು ಈಗ ಜಾತಿ ಹೆಸರಿನಲ್ಲಿ ಮತ ಕೇಳ್ತಾ ಇದ್ದಾರೆ. ನಿಮಗೆ ನಾಚಿಗೆ ಆಗಲ್ವಾ ಎಂದು ಕಿಡಿಕಾರಿದರು.
ಇದನ್ನೂ ಓದಿ : ಆರ್.ಆರ್.ನಗರದಲ್ಲಿ ನಮ್ಮ ಗೆಲುವು ಖಚಿತ : ಹೆಚ್.ಡಿ.ಕುಮಾರಸ್ವಾಮಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel