ರಾಹುಲ್ ಪಾಕ್ ಪರ ಮಾತಾಡೋದು ಅವ್ರ ಬಾಲಿಷತನ ತೋರಿಸುತ್ತೆ : ಜೋಶಿ
ಹುಬ್ಬಳ್ಳಿ : ರಾಹುಲ್ ಗಾಂಧಿ ಪಾಕಿಸ್ತಾನದ ಪರವಾಗಿ ಮಾತನಾಡುವುದು ಅವರ ಬಾಲಿಷತನವನ್ನು ತೋರಿಸುತ್ತದೆ. ವೋಟಿಗಾಗಿ ಎಷ್ಟರ ಮಟ್ಟಿಗೆ ಕೀಳು ಮಟ್ಟಿಗೆ ಇಳಿಯುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಹುಬ್ಬಳಿಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್ ಆರೋಪ ಮಾಡುತ್ತಿತ್ತು. ಆದ್ರೆ ಇದೀಗ ಪಾಕಿಸ್ತಾನವೇ ಈ ಬಗ್ಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಈಗಲೂ ಕಾಂಗ್ರೆಸ್ ಬಾಯಿ ಮುಚ್ಚಿಕೊಂಡಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನದ ಪಾರ್ಲಿಮೆಂಟ್ ನಲ್ಲಿ ಪುಲ್ವಾಮ ದಾಳಿಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರೂ ಕಾಂಗ್ರೆಸ್ ನಾಯಕರು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಭಾರತದ ಪರವಾಗಿ ಒಳ್ಳೆಯ ಸುದ್ದಿ ಬಂದರೆ ಕಾಂಗ್ರೆಸ್ ನವರಿಗೆ ಸಂತಸ ತರುವುದಿಲ್ಲ.
ಇದನ್ನೂ ಓದಿ : ಆರ್.ಆರ್.ನಗರದಲ್ಲಿ ನಮ್ಮ ಗೆಲುವು ಖಚಿತ : ಹೆಚ್.ಡಿ.ಕುಮಾರಸ್ವಾಮಿ
ಮೋದಿ ಅವರನ್ನು ವಿರೋಧ ಮಾಡುವ ಬರದಲ್ಲಿ ಭಾರತವನ್ನು ಏಕೆ ವಿರೋಧ ಮಾಡುತ್ತಾರೆ? ಎಂದು ಕಾಂಗ್ರೆಸ್ ವಿರುದ್ಧ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ ಜೋಶಿ, ರಾಹುಲ್ ಗಾಂಧಿ ಪಾಕಿಸ್ತಾನದ ಪರವಾಗಿ ಮಾತನಾಡುವುದು ಅವರ ಬಾಲಿಷತನವನ್ನು ತೋರಿಸುತ್ತದೆ.
ವೋಟಿಗಾಗಿ ಎಷ್ಟರ ಮಟ್ಟಿಗೆ ಕೀಳು ಮಟ್ಟಿಗೆ ಇಳಿಯುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಕಿಡಿಕಾರಿದರು.
ಬಳಿಕ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಆದರ್ಶ ಎಲ್ಲ ಸಮುದಾಯವನ್ನು ಒಗ್ಗೂಡಿಸುವ ಕೆಲಸ ಮಾಡಿದೆ. ಹೀಗಾಗಿ, ಅವರ ತತ್ತ್ವ ಸಿದ್ಧಾಂತಗಳನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ : ದೇಶ ಪ್ರೇಮಕ್ಕೂ ಬಿಜೆಪಿಗೂ ಎಲ್ಲಿಂದ ಎಲ್ಲಿಯ ಸಂಬಂಧ : ಸಿದ್ದರಾಮಯ್ಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel