ಲಸಿಕೆ ಕೊರತೆ : ಎಲ್ಲಿಗೆ ಬಂತು ನಮೋ ಲಸಿಕಾ ಮಹಾಯಜ್ಞ..?
ನವದೆಹಲಿ : ಕೊರೊನಾ ಹೆಮ್ಮಾರಿ ಹೊಡೆತಕ್ಕೆ ದೇಶ ತತ್ತರಿಸಿ ಹೋಗಿದೆ. ಆರಂಭದಲ್ಲಿ ನಗರ ಪ್ರದೇಶದಲ್ಲಿ ತಾಂಡವವಾಡುತ್ತಿದ್ದ ಹೆಮ್ಮಾರಿ ಇದೀಗ ಗ್ರಾಮೀಣ ಪ್ರದೇಶಗಳಿಗೆ ಕೊಳ್ಳಿ ಇಡುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಈಗಗಾಲೇ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದೆ. ಇನ್ನೂ ಹಲವು ರಾಜ್ಯಗಳಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೂ ದೇಶದಲ್ಲಿ ಮಾತ್ರ ಕೊರೊನಾ ಅಬ್ಬರ ಮಾತ್ರ ಕಡಿಮೆ ಆಗುತ್ತಲೇ ಇಲ್ಲ. ಒಂದು ಕಡೆ ಸೋಂಕು ಹೆಚ್ಚಾಗುತ್ತಿದ್ದರೇ ಇನ್ನೊಂದೆಡೆ ಬೆಡ್, ಆಕ್ಸಿಜನ್ ಕೊರತೆ ಕೂಡ ಜನರ ಪ್ರಾಣ ತೆಗೆದುಕೊಳ್ಳುತ್ತಿದೆ.
ಎಲ್ಲಿಗೆ ಬಂತು ನಮೋ ಲಸಿಕಾ ಮಹಾಯಜ್ಞ..?
ಈ ಮಧ್ಯೆ ತಜ್ಞರು ಹೇಳುವ ಪ್ರಕಾರ ದೇಶದಲ್ಲಿ ಕೊರೊನಾಗೆ ಮೂಗುದಾರ ಹಾಕಬೇಕು ಅಂದ್ರೆ ಅದು ಲಸಿಕೆಯಿಂದ ಮಾತ್ರ ಸಾದ್ಯ. ಶೇಖಡಾ 80 ರಷ್ಟು ಜನರಿಗೆ ಲಸಿಕೆ ಹಾಕಿದರೇ ದೇಶದಲ್ಲಿ ಕೊರೊನಾ ಅಬ್ಬರವನ್ನು ತಡೆಯಬಹುದು ಎನ್ನುತ್ತಿದ್ದಾರೆ. ಆದ್ರೆ ವಾಸ್ತವದಲ್ಲಿ ಸರ್ಕಾರದ ಇದನ್ನ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಕೊವಿಡ್-19 ಲಸಿಕೆ ಪಡೆಯುವವರ ಸಂಖ್ಯೆ ಇಳಿಮುಖವಾಗುತ್ತಿರುವುದೇ ಅದಕ್ಕೆ ಸಾಕ್ಷಿಯಾಗಿದೆ.
ಅಂದಹಾಗೆ ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ ಇಂದಿಗೆ 124 ದಿನ ಕಳೆದಿದ್ದು, 18,69,89,265 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಣೆ ಮಾಡಲಾಗಿದೆ.
ಕಳೆದ ಮೇ 1ರಿಂದ ಈವರೆಗೂ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನ 70,12,752 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ.
ಭಾರತದಲ್ಲಿ ಈವರೆಗೂ 96,85,597 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 66,67,071 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ.
1,46,34,130 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 82,56,235 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ.
ದೇಶದಲ್ಲಿ ಈವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ 5,83,40,325 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 94,34,731 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
60 ವರ್ಷ ಮೇಲ್ಪಟ್ಟ 5,49,33,136 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 1,80,25,288 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
ಇದನ್ನ ಗಮನಿಸಿದರೇ ದೇಶದಲ್ಲಿ ಲಸಿಕಾ ಮಹಾಯಜ್ಞ ಆಮೆಗತಿಯಲ್ಲಿ ಸಾಗುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ದೇಶದ ಸಾಕಷ್ಟು ರಾಜ್ಯದಲ್ಲಿ ಲಸಿಕೆಯ ಕೊರತೆ ಎದುರಾಗಿದೆ. ನಮ್ಮ ರಾಜ್ಯದ ವಿಚಾರಕ್ಕೆ ಬಂದ್ರೆ ನಮ್ಮಲ್ಲಿ ಸದ್ಯಕ್ಕೆ ಎರಡನೇ ಡೋಸ್ ಪಡೆಯುವವರಿಗೆ ಹೆಚ್ಚು ಪ್ರಾಶಸ್ತ್ಯ ಕೊಡಲಾಗುತ್ತಿದೆ. ಲಸಿಕೆಯ ಕೊರತೆಯಿಂದಾಗಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಸಾಕಷ್ಟು ವ್ಯಾಕ್ಸಿನ್ ಸೆಂಟರ್ ಗಳ ಮುಂದೆ ಔಟ್ ಆಫ್ ಸ್ಟಾಕ್ ಎಂಬ ಬೋರ್ಡ್‍ಗಳು ಕಾಣುತ್ತಿವೆ. ಲಸಿಕೆಗಾಗಿ ಜನರ ಗಂಟೆಗಟ್ಟಲೇ ಕಾದರು ಯಾವುದೇ ಪ್ರಯೋಜನಾ ಆಗುತ್ತಿಲ್ಲ.