ADVERTISEMENT
Tuesday, July 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

ಮತ್ತೊಂದು ದಾಖಲೆ ಬರೆದ ವೈಭವ್ ಸೂರ್ಯವಂಶಿ..!

Vaibhav Suryavanshi has written another record..!

Shwetha by Shwetha
July 6, 2025
in ಕ್ರಿಕೆಟ್, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಈ ಬಾಲಕನ ಆಟಕ್ಕೆ ಏನು ಅನ್ನಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಹೊಡಿಬಡಿ ಆಟ.. ಯಾವಾಗ ಔಟ್ ಆಗ್ತಾನೋ ಗೊತ್ತಿಲ್ಲ.. ಆದ್ರೂ ಕ್ರೀಸ್‍ನಲ್ಲಿದ್ದಷ್ಟು ಸಮಯವಂತೂ ಪಕ್ಕಾ ಮನರಂಜನೆ.. ತನ್ನ ಹೆಸರಿಗೆ ತಕ್ಕಂತೆ ವೈಭವದ ಆಟದ ಮೂಲಕ ಅಂಗಣದಲ್ಲಿ ಸೂರ್ಯನಂತೆ ಕಂಗೋಳಿಸುತ್ತಾನೆ.

ಹೌದು, ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ 19 ವಯೋಮಿತಿ ಏಕದಿನ ಕ್ರಿಕೆಟ್‍ನಲ್ಲಿ ವೈಭವ್ ಸೂರ್ಯವಂಶಿ ಮತ್ತೊಂದು ದಾಖಲೆ ಬರೆದಿದ್ದಾನೆ. ಐಪಿಎಲ್‍ನಲ್ಲಿ ಶತಕ ಸಿಡಿಸಿದ್ದ ನಂತ್ರ ಈಗ ಏಕದಿನ ಕ್ರಿಕೆಟ್‍ನಲ್ಲೂ ವೇಗದ ಶತಕದ ದಾಖಲೆ ಬರೆದಿದ್ದಾನೆ. ಕೇವಲ 52 ಎಸೆತಗಳಲ್ಲಿ ಮಿಂಚಿನ ಶತಕ ಸಿಡಿಸಿದ್ದ ವೈಭವ್, ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದ್ದಾಗ ಕೇವಲ 78 ಎಸೆತಗಳಲ್ಲಿ 143 ಗಳಿಸಿದ್ದಾನೆ. ಇದರಲ್ಲಿ ಹತ್ತು ಸಿಕ್ಸರ್‍ಗಳು ಹಾಗೂ 13 ಬೌಂಡರಿಗಳಿದ್ದವು. ಈ ಮೂಲಕ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಭಾರತದ ಕಿರಿಯರ ತಂಡ 9 ವಿಕೆಟ್ ನಷ್ಟಕ್ಕೆ 363 ರನ್ ದಾಖಲಿಸಿತ್ತು.

Related posts

rishab-shetty-joins-spider-man-brand-new-day-sony-pictures-promos

Film – ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಪ್ರಚಾರದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ: ಹಾಲಿವುಡ್‌ನಲ್ಲಿ ಮಿಂಚಿದ ಕನ್ನಡಿಗ

July 27, 2026
ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

Bengaluru – ಬರ ಪರಿಹಾರ ನೀಡಲು ಯಾವುದೇ ಕ್ರಮ ಕೈಗೊಳ್ಳದ ಕಾಂಗ್ರೆಸ್‌ ಸರ್ಕಾರ

July 27, 2026

ಭಾರತ ಕಿರಿಯರ ತಂಡದ ಆರಂಭಿಕ ಆಟಗಾರನಾಗಿರುವ ವೈಭವ್ ಸೂರ್ಯವಂಶಿ ಈಗಾಗಲೇ ನಡೆದಿರುವ ಮೂರು ಪಂದ್ಯಗಳಲ್ಲಿ ಕ್ರಮವಾಗಿ 48, 45 ಹಾಗೂ 86 ರನ್ ಗಳಿಸಿದ್ದಾನೆ. ಹಾಗೇ ನಾಲ್ಕನೇ ಪಂದ್ಯದಲ್ಲಿ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾದ ಗರ್ಭಗುಡಿಯ ಕದ ತಟ್ಟುತ್ತಿದ್ದಾನೆ.
ವೈಭವ್ ಸೂರ್ಯವಂಶಿಯ ಅಬ್ಬರದ ಬ್ಯಾಟಿಂಗ್ ಮುಂದೆ ಹಳೆಯದ ದಾಖಲೆಗಳು ಉಢೀಸ್ ಆಗಿವೆ. ಈ ಹಿಂದೆ ಅಂದ್ರೆ 2013ರಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದ ಕಮ್ರಾನ್ ಘುಲಾಮ್ 53 ಎಸೆತಗಳಲ್ಲಿ ವೇಗದ ಶತಕ ದಾಖಲಿಸಿದ್ದ. ಇದೀಗ ಆ ದಾಖಲೆ ಸೂರ್ಯವಂಶಿಯ ಹೆಸರಿಗೆ ಅಂಟಿಕೊಂಡಿದೆ.

2025ರ ಐಪಿಎಲ್‍ನಲ್ಲಿ ರಾಜಸ್ತಾನ ರಾಯಲ್ಸ್ ಪರ ಆಡಿದ್ದ ವೈಭವ್ ಸೂರ್ಯವಂಶಿ ಸಾಕಷ್ಟು ಸದ್ದು ಮಾಡಿದ್ದ. ಕೇವಲ 35 ಎಸೆತಗಳಲ್ಲಿ ಶತಕ ದಾಖಲಿಸಿದ್ದ ಸೂರ್ಯವಂಶಿ ಐಪಿಎಲ್‍ನಲ್ಲಿ ಎದುರಿಸಿದ್ದ ಮೊದಲ ಎಸೆತವನ್ನೇ ಸಿಕ್ಸರ್‍ಗಟ್ಟಿದ್ದ ಪೋರ ಕೂಡ ಹೌದು.
ಸದ್ಯ ಇಂಗ್ಲೆಂಡ್‍ನಲ್ಲಿ ಮಿಂಚು ಹರಿಸುತ್ತಿರುವ ವೈಭವ್ ಸೂರ್ಯವಂಶಿ ಭವಿಷ್ಯದ ಟೀಮ್ ಇಂಡಿಯಾದ ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದ್ರೆ ನೆನಪಿಡಿ… ಯಶಸ್ಸು ತಲೆಗೆ ಹತ್ತಿದ್ರೆ ಮತ್ತೊಬ್ಬ ಕಾಂಬ್ಳಿ, ಮತ್ತೊಬ್ಬ ಪೃಥ್ವಿ ಶಾ ಆಗೋ ಅಪಾಯವೂ ಇದೆ. ಆದ್ರೆ ಸೂರ್ಯವಂಶಿ ಹಾಗಾಗದಿರಲಿ.. ಯಶಸ್ಸಿನ ಜೊತೆಗೆ ಆಟದ ಕಡೆಗೂ ಗಮನಹರಿಸಿದ್ರೆ ಮುಂದೊಂದು ದಿನ ಸಚಿನ್, ಕೊಹ್ಲಿಯ ದಾಖಲೆಗಳು ವೈಭವನ ಹೆಸರಿಗೆ ಸೇರಿಕೊಳ್ಳಬಹುದು. ಅಂತಹುದ್ದೊಂದು ಅವಕಾಶ ವೈಭವ್‍ಗೆ ಸಿಕ್ಕಿದೆ. ಅಷ್ಟೇ ಅಲ್ಲ, ಸಚಿನ್‍ನಂತೆ ಹದಿಹರೆಯದಲ್ಲೇ ವೈಭವ್‍ಗೂ ಟೀಮ್ ಇಂಡಿಯಾಗೆ ಅವಕಾಶ ಸಿಕ್ಕರೂ ಸಿಗಬಹುದು.. ಯಾವನಿಗೊತ್ತು.. ವಿಧಿಯಾಟ ಹೇಗೆಲ್ಲಾ ಇರುತ್ತೆ ಅಂತ..!

ShareTweetSendShare
Join us on:

Related Posts

rishab-shetty-joins-spider-man-brand-new-day-sony-pictures-promos

Film – ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಪ್ರಚಾರದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ: ಹಾಲಿವುಡ್‌ನಲ್ಲಿ ಮಿಂಚಿದ ಕನ್ನಡಿಗ

by admin
July 27, 2026
0

ಮಂಗಳೂರಿನ ಕೆರಾಡಿಯಿಂದ ಬಂದ ‘ಕಾಂತಾರ’ ಖ್ಯಾತಿಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇದೀಗ ಜಾಗತಿಕ ಮಟ್ಟದ ಅತಿದೊಡ್ಡ ಸೂಪರ್ ಹೀರೋ ಫ್ರಾಂಚೈಸಿ ‘ಸ್ಪೈಡರ್ ಮ್ಯಾನ್’ ಪ್ರಪಂಚಕ್ಕೆ ಕಾಲಿಡುವ...

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

Bengaluru – ಬರ ಪರಿಹಾರ ನೀಡಲು ಯಾವುದೇ ಕ್ರಮ ಕೈಗೊಳ್ಳದ ಕಾಂಗ್ರೆಸ್‌ ಸರ್ಕಾರ

by admin
July 27, 2026
0

ಬೆಂಗಳೂರು, : ಮೈಸೂರು, ಮಂಡ್ಯ ಜಿಲ್ಲೆಗಳಿಗೆ ಭೇಟಿ ನೀಡಿ ಬರ ವೀಕ್ಷಣೆ ಮಾಡಿದ್ದು, ಮುಂದೆ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ. ಆದರೆ ಈವರೆಗೆ ಬರ...

ಇದು 60 ಪರ್ಸೆಂಟ್ ಕಮಿಷನ್ ಸರ್ಕಾರ – ಸಿದ್ದು ಡಿಕೆಶಿ ಕುರ್ಚಿ ಕಾಳಗದ ನಡುವೆ ಶಾಸಕರಿಗೆ ಬಂಪರ್ ಆಫರ್ 100 ಕೋಟಿ ಡೀಲ್ ಬಗ್ಗೆ ಅಶೋಕ್ ಸ್ಫೋಟಕ ಹೇಳಿಕೆ

Bengaluru – ಪಶು ವೈದ್ಯಾಧಿಕಾರಿಗಳ ನೇಮಕ ಹಗರಣ –  ಸಿಬಿಐ ತನಿಖೆಗೆ ವಹಿಸಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

by admin
July 27, 2026
0

ಬೆಂಗಳೂರು : ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ 80 ಲಕ್ಷ ರೂ. ಲಂಚದ ಆರೋಪ ಕೇಳಿಬಂದಿರುವುದರಿಂದ ಕೆಪಿಎಸ್‌ಸಿಯ ಆಂತರಿಕ ತನಿಖೆ ರದ್ದುಗೊಳಿಸಿ, ಸಿಬಿಐ ಅಥವಾ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯವರ...

aditya-patnaik-wins-gold-vios-championship-at-sepang-circuit

ರಾಷ್ಟ್ರೀಯ ಚಾಂಪಿಯನ್‌ ಆದಿತ್ಯನಿಗೆ ಅಂ.ರಾ. ರೇಸಿಂಗ್‌ನಲ್ಲಿ ಮೊದಲ ಜಯ!

by admin
July 27, 2026
0

- ಮಲೇಷ್ಯಾದ ಸೆಪಾಂಗ್‌ ಸರ್ಕ್ಯೂಟ್‌ನಲ್ಲಿ ನಡೆದ ರೇಸ್‌ ಗೆದ್ದ ಭಾರತದ ಯುವ ರೇಸರ್‌ ಆದಿತ್ಯ ಪಟ್ನಾಯಕ್‌ - ಗೋಲ್ಡ್ ವಿಯೊಸ್ ಚಾಂಪಿಯನ್‌ಶಿಪ್‌ನ 3ನೇ ಸುತ್ತಿನಲ್ಲಿ ಮುಂಬೈ ಯುವ...

param-vihar-cultural-series-jayanagar-bangalore-14th-edition

Bengaluru- ಸಂಗೀತ, ನೃತ್ಯ ಸಿರಿಯ ವೈಭವ: ಕಣ್ಮನ ಸೆಳೆದ ‘ಪರಮ್ ವಿಹಾರ’ ಆವೃತ್ತಿ-14

by admin
July 27, 2026
0

• ಜಯನಗರದ ಸನಾತನ ಕಲಾಕ್ಷೇತ್ರದಲ್ಲಿ ಯಶಸ್ವಿ ಕಾರ್ಯಕ್ರಮ • ಉದಯೋನ್ಮುಖ ಕಲಾವಿದರ ವೈವಿಧ್ಯಮಯ ಕಲಾ ಸಂಗಮ • ಸಂಜೆ ರಂಜಿಸಿದ ವಾಯೊಲಿನ್ ಸಾಂಸ್ಕೃತಿಕ ನಾದಲಹರಿ • ಭಾವ-ರಸ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram