ವಲಿಮೈ VS ಭೀಮ್ಲಾ ನಾಯಕ್ ಭಾಕ್ಸ್ ಆಫೀಸ್ ರೇಸಲ್ಲಿ ಗೆದ್ದಿದ್ಯಾರು ?
ಇತ್ತೀಚಿಗೆ ಸೌತ್ ಇಂಡಸ್ಟ್ರಿಯ ಸಿನಿಮಾಗಳು ಕಲೆಕ್ಷನ್ ನಲ್ಲಿ ಬಾಲಿವುಡ್ ನ್ನೇ ಮೀರಿಸುತ್ತಿವೆ. ಬಾಕ್ಸ್ ಆಫೀಸ್ ನಲ್ಲಿ ದಾಖಲೆಗಳನ್ನ ನಿರ್ಮಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಪವನ್ ಕಲ್ಯಾಣ್ ನಟನೆಯ ಭೀಮ್ಲಾ ನಾಯಕ್ ಮತ್ತು ಅಜಿತ್ ಕುಮಾರ್ ಅವರ ವಲಿಮೈ ಚಿತ್ರಗಳು ಥಿಯೇಟರ್‌ಗಳನ್ನ ದಂಗುಬಡಿಸಿವೆ. ಒಂದು ವಾರದ ವರೆಗೆ ಎರಡೂ ಚಿತ್ರಗಳು ಭಾರತದ ಬಹುಪಾಲು ಪರದೆಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ.
ಬೀಮ್ಲಾ ನಾಯಕ್ ಮತ್ತು ವಲಿಮೈ ಚಿತ್ರಗಳು ಬಿಡುಗಡೆಯಾದ ಒಂದು ವಾರದ ಬಳಿಕ ಬಾಕ್ಸ್ ಆಫಿಸ್ ನಲ್ಲಿ ಮಾಡಿದ ಕಮಾಯಿ ಎಷ್ಟು ಅಂತ ನಾವು ತಿಳಿಸ್ತಿವಿ ನೋಡಿ…
ವಲಿಮಾಯಿ ಮತ್ತು ಭೀಮಾ ನಾಯಕ್ ನಡುವಿನ ಘರ್ಷಣೆ
ಅಜಿತ್ ಕುಮಾರ್ ನಟನೆಯ ವಲಿಮೈ(ತಮಿಳು) ಮತ್ತು ಪವನ್ ಕಲ್ಯಾಣ ನಟನೆಯ ಭೀಮ್ಲಾ ನಾಯಕ್ (ತೆಲುಗು) ಚಿತ್ರಗಳು ಕಳೆದ ವಾರ ಗಲ್ಲಾಪೆಟ್ಟಿಗೆಯಲ್ಲಿ ಒಂದೇ ಬಾರಿಗೆ ರಿಲೀಸ್ ಆಗಿದ್ದವು. ವಲಿಮೈ ಫೆಬ್ರವರಿ 24 ರಂದು ತೆರೆಗೆ ಬಂದಿತು. ಎರಡನೇ ವಾರಕ್ಕೆ ಕಾಲಿಟ್ಟಿರುವ ವಲಿಮೈ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸ್ಥಿರವಾದ ಓಟವನ್ನು ಕಾಯ್ದುಕೊಂಡಿದೆ. 8 ನೇ ದಿನಕ್ಕೆ ವಲಿಮೈ ವಿಶ್ವಾದ್ಯಂತ 165 ಕೋಟಿ ರೂಪಾಯಿಗಳ ಗಡಿ ದಾಟಿದೆ ಎಂದು ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಬಹಿರಂಗಪಡಿಸಿದ್ದಾರೆ.
ಅಜಿತ್ ಕುಮಾರ್ ವಲಿಮೈ ಚಿತ್ರದಲ್ಲಿ ಅಸಿಸ್ಟೆಂಟ್ ಕಮಿಷನರ್ ಅರ್ಜುನ್ ಪಾತ್ರದಲ್ಲಿ ನಟಿಸಿದ್ದಾರೆ. ಹೆಚ್ ವಿನೋತ್ ಆಕ್ಷನ್ ಕಟ್ ಹೇಳಿದ್ದಾರೆ. ಬೋನಿ ಕಪೂರ್ ನಿರ್ಮಾಣ ಮಾಡಿದ್ದಾರೆ, ಹುಮಾ ಖುರೇಷಿ, ಕಾರ್ತಿಕೇಯ ಗುಮ್ಮಕೊಂಡ, ಪುಗಜ್, ಸುಮಿತ್ರಾ ಮತ್ತು ಪರ್ಲೆ ಮಾನಿ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಅಭಿನಯದ ಭೀಮ್ಲಾ ನಾಯಕ್ ಫೆಬ್ರವರಿ 25 ರಂದು ಬಿಡುಗಡೆಯಾದಾಗಿನಿಂದ ಚರ್ಚೆಯಲ್ಲಿದೆ. ಈ ವರ್ಷದ ಬಹು ನಿರೀಕ್ಷಿತ ಚಿತ್ರ ಥಿಯೇಟರ್ ಗಳಲ್ಲಿ ಅಸಾಧಾರಣ ಪ್ರದರ್ಶನ ಕಂಡಿದೆ. ಈ ಚಿತ್ರ ಭಾರತದಾದ್ಯಂತ ಮೊದಲ ದಿನ 37 ಕೋಟಿ ಗಳಿಸುವ ಮೂಲಕ ಬಾಕ್ಸ್ ಆಫಿಸ್ ಓಪನ್ ಆಗಿತ್ತು.
ಸಿನಿಮಾ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಪ್ರಕಾರ, ವಾರದ ಕೊನೆಯಲ್ಲಿ ಭೀಮ್ಲಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ. ಗಳಿಸಿದೆ.
ರಾಣಾ ದಗ್ಗುಬಾಟಿ ಮತ್ತು ಪವನ್ ಕಲ್ಯಾಣ್ ಅವರಿಬ್ಬರನ್ನ ಒಂದೇ ತೆರೆಯ ಮೇಲೆ ಅಭಿಮಾನಿಗಳು ನೋಡಿ ಸಖತ್ ಥ್ರಿಲ್ ಆಗಿದ್ದಾರೆ. ತ್ರಿವಿಕ್ರಮ್ ಚಿತ್ರಕಥೆಯ ಮಲಯಾಳಂ ನ ಅಯ್ಯಪ್ಪನುಮ್ ಕೋಶೀಯಮ್ ನ ಅಧಿಕೃತ ರೀಮೆಕ್ ಸಿನಿಮಾವನ್ನ ಸಾಗರ್ ಕೆ ಚಂದ್ರ ಅವರು ನಿರ್ದೇಶಿಸಿದ್ದಾರೆ.
valimai VS Bhimla Nayak Who won the Bax Office race?.